Advertisement

Category: ಸರಣಿ

ನಾನು ಮತ್ತು ಎಐ ಕಲ್ಪನಾ ವಿಲಾಸ: ಎಚ್. ಗೋಪಾಲಕೃಷ್ಣ ಸರಣಿ

ಅದಕ್ಕೆ ನಾನು ಕೊಡೊ ಕೆಲಸಾನೂ ವಿಚಿತ್ರದ್ದು. ನಾನು ಸಾಮಾರ್ ಸೆಟ್ ಪಲ್ಟಿ ಹೊಡೆಯೋದು ಮಾಡಿಕೊಡು ಅಂದೆನಾ? ನಿಂತ ಹಾಗೆ ನಾನು ನಿಲ್ಲು ಪಲ್ಟಿ ಹೊಡೆದು ತೋರಿಸಿತಾ? ನನ್ನನ್ನ ಒಬ್ಬ ರೈಟರ್ ಆಗಿ ಕಾರ್ಟುನ್ ಮಾಡು ಅಂದೆ ತಾನೇ? ನಾನು ಒಂದು ಕಾರ್ಟುನ್ ಚಿತ್ರ ಆದೇನಾ? ನನ್ನ ಫೋಟೋ ಹಾಕಿ ತಲೆ ನುಣ್ಣಗೆ ತೋರಿಸು ಅಂದರೆ ತೋರಿಸುತ್ತಾ? ನಾನು ಮುಖ್ಯಮಂತ್ರಿ ಹೆಗಲ ಮೇಲೇ ಕೈ ಹಾಕ್ಕೊಂಡಿರೋ ಫೋಟೋ ಕೊಡು ಅಂದರೆ ಕೊಡ್ತಾ?
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಗುಲಗಂಜಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕೀಟಗಳೇ ಗುಲಗಂಜಿ ಪಕ್ಷಿಯ ಮುಖ್ಯ ಆಹಾರ. ಕುಳಿತಲ್ಲಿಂದಲೇ ಹೊಂಚು ಹಾಕಿ ಹಾರುತ್ತಿರುವ ಕೀಟವನ್ನು ಹಿಡಿದು, ಅಥವಾ ಕುಳಿತ ಮರಗಳಲ್ಲಿ ವಾಸಿಸುವ ಕೀಟಗಳನ್ನು ಹಿಡಿದು, ಕುಳಿತ ಕೊಂಬೆಗೆ ಬಡಿದು, ಕೊಂದು ತಿನ್ನುತ್ತವೆ. ವಿವಿಧ ಕೀಟಗಳು, ಕೀಟಗಳ ಪೊರೆಹುಳುಗಳು ಮತ್ತು ಮರಿಹುಳುಗಳು, ಪತಂಗಗಳು, ಜೀರುಂಡೆಗಳು, ಮಿಡತೆಗಳು, ಸಿಕಾಡಾಗಳು, ಕ್ರಿಕೆಟ್‌ಗಳು ಮತ್ತು ಮಿಡತೆ ಅವುಗಳ ಆಹಾರದ ಪಟ್ಟಿಯಲ್ಲಿವೆ.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ “ಗುಲಗಂಜಿ” ಹಕ್ಕಿಯ ಕುರಿತ ಬರಹ ಇಲ್ಲಿದೆ

Read More

ಭಾರತದಲ್ಲಿ ಪ್ರಾಚೀನ ಗಣಿಗಾರಿಕೆ: ಡಾ. ಎಂ. ವೆಂಕಟಸ್ವಾಮಿ ಸರಣಿ

ಮಾನವನ ಹುಟ್ಟು, ವಲಸೆ, ನಾಗರಿಕ ತೊಟ್ಟಿಲುಗಳು, ಕೃಷಿ ಮತ್ತು ಗಣಿಗಾರಿಕತೆಗಳು ಎಲ್ಲವೂ ಜೊತೆಜೊತೆಯಾಗಿಯೇ ನಡೆಯಿತು. ಕೃಷಿ ಕಂಡುಕೊಂಡಾಗಲೇ ಲೋಹಗಳ ಮೇಲೆಯೂ ಮನುಷ್ಯನ ಕಣ್ಣು ಬಿದ್ದಿತು. ದಕ್ಷಿಣ ಭಾರತದಲ್ಲಿ ಕೊಳ್ಳದೇವತೆಗಳೆ ಕೃಷಿಗೆ ಕಾರಣ ಎನ್ನುವ ಮಾತಿದೆ. ಭಾರತೀಯ ಪ್ರಾಚೀನ ಗಣಿಗಾರಿಕೆಯ ಈ ಸಣ್ಣ ಕೃತಿಗೆ ಇಷ್ಟೆಲ್ಲ ಪ್ರವೇಶವನ್ನು ಬರೆಯಬೇಕಾಯಿತು. ಯಾಕೆಂದರೆ ಭಾರತೀಯ ಪ್ರಾಚೀನ ಗಣಿಗಾರಿಕೆ ಮಾನವನ ವಲಸೆ ಮತ್ತು ನಾಗರಿಕ ತೊಟ್ಟಿಲುಗಳಿಂದ ಬೆರೆತುಹೋಗಿದೆ.
ಡಾ. ಎಂ. ವೆಂಕಟಸ್ವಾಮಿ ಅನುವಾದಿತ “ಭಾರತದಲ್ಲಿ ಪ್ರಾಚೀನ ಗಣಿಗಾರಿಕೆ” ಸರಣಿ ಬರಹ ಇಂದಿನಿಂದ ಪ್ರತಿ ಸೋಮವಾರಗಳಂದು ನಿಮ್ಮ ಕೆಂಡಸಂಪಿಗೆಯಲ್ಲಿ

Read More

ಪ್ರೊ|| ಹೂವಯ್ಯ ನುಡಿದ ಭವಿಷ್ಯ: ಕೆ. ಸತ್ಯನಾರಾಯಣ ಕಥಾ ಸರಣಿ

ನನಗೆ ಶಾಕ್‌ ಆಯಿತು. ವ್ಯಂಗ್ಯಕ್ಕೋ ತಮಾಷೆಗೋ ಏನಾದರೂ ಹೇಳುತ್ತಿರಬಹುದೇ ಅನಿಸಿತು. ನನಗೂ ಅವರಿಗೂ ಗೊತ್ತಿದ್ದವರ ಪೈಕಿ ಕೆಲವರಿಗೆ ಅವರು ಮೇಷ್ಟ್ರು ಕೂಡ ಆಗಿದ್ದರು. ಮೂವತ್ತೈದು ವರ್ಷಗಳ ಕಾಲ ಒಂದೇ ಕಾಲೇಜಿನಲ್ಲಿ ಪಾಠ ಮಾಡಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದರು. ಕುವೆಂಪುಗೆ ದೂರದ ಸಂಬಂಧ ಕೂಡ. ನಮ್ಮ ತಾತನಿಗೆ ಕುವೆಂಪು ಬಗ್ಗೆ ಇನ್ನಿಲ್ಲದ ಭಕ್ತಿ, ಗೌರವ. ನಮ್ಮ ತಾತನ ತಂದೆಯೂ, ಕುವೆಂಪು ತಾತನೂ ತುಂಬಾ ಆತ್ಮೀಯರಾಗಿದ್ದರಂತೆ. ಹಾಗಾಗಿ, ಮನೆಯಲ್ಲಿ ಎಲ್ಲರಿಗೂ ಹೂವಯ್ಯ, ಮುಕುಂದಯ್ಯ, ಚಿನ್ನಮ್ಮ ಅಂತಾನೇ ಎರಡು-ಮೂರು ತಲೆಮಾರು ಹೆಸರಿಡುತ್ತಿದ್ದರು.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”

Read More

ಒಬ್ಬರು ಕೊನೆಕಾರರು ಮತ್ತೊಬ್ಬರು ಡಾಕ್ಟರು: ಎಸ್. ಗಂಗಾಧರಯ್ಯ ಅನುಭವ ಕಥನ

ಕೇವಲ ಡಾಕ್ಟರಷ್ಟೇ ಆಗದೆ ಅದರ ಜೊತೆಗೆ ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದ ಇಂಥ ಅಪರೂಪದ ವ್ಯಕ್ತಿತ್ವದ ತೋಪಯ್ಯನವರದು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಕತ್ರಿಘಟ್ಟದವರು. `ಎಲ್ಲದಕ್ಕೂ ಸರ್ಕಾರವನ್ನೇ ನಂಬಿ ಕೂರುವುದು ಮೂರ್ಖತನ. ನಾವು ನಮ್ಮ ನಮ್ಮ ಕೈಯ್ಯಿಂದ ಏನೇನು ಮಾಡೋಕೆ ಸಾಧ್ಯ ಆಗುತ್ತೋ ಅದನ್ನೆಲ್ಲಾ ಮಾಡುತ್ತಾ ಹೋಗಬೇಕು’ ಅನ್ನುತ್ತಿದ್ದ ತೋಪಯ್ಯನವರು`ಸಹಕಾರ ತತ್ವ’ದಲ್ಲಿ ಅಪಾರ ನಂಬಿಕೆ ಇಟ್ಟಿದ್ದರು.
ಎಸ್.‌ ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹದಿನೈದನೆಯ ಕಂತು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ