ರಂಗದ ಮೇಲಿನ ದೃಶ್ಯಕಾವ್ಯ ‘ಚಿತ್ರಾಂಗದಾ’: ಚಿತ್ರಾ ವೆಂಕಟರಾಜು ಸರಣಿ
ಕೊನೆಗೂ ಯಾಕೆ ಈ ನಾಟಕವನ್ನು ಮಾಡಬೇಕು, ಯಾಕೆ ಈ ನಾಟಕವನ್ನು ನೋಡಬೇಕು ಎನ್ನುವುದು ಪ್ರತಿಯೊಬ್ಬ ಕಲಾವಿದನ, ಪ್ರೇಕ್ಷಕನ ಮೂಲಭೂತ ಪ್ರಶ್ನೆ. ಇಲ್ಲಿ ಇದು ಚಿತ್ರಾಂಗದಾ ಮತ್ತು ಅರ್ಜುನನ ಕತೆಯಾದರೂ ಅದರ ನೆಪದಲ್ಲಿ ನಡೆಯುವುದು ಗಂಡು ಹೆಣ್ಣು ಮತ್ತು ಅವರಿಬ್ಬರ ಸಂಬಂಧದ ಸಂಕೀರ್ಣತೆಯ ಬಗ್ಗೆ. ಹೆಣ್ಣಾದರೂ ಗಂಡಿನಂತೆ ವನದಲ್ಲಿರುವ ಚಿತ್ರಾಂಗದೆ ಅರ್ಜುನನನ್ನು ನೋಡಿದ್ದೆ ಮತ್ತೆ ‘ಹೆಣ್ತನ’ ಕ್ಕೆ ಹಾತೊರೆಯುತ್ತಾಳೆ. ಅವಳೊಳಗಿನ ಹೆಣ್ಣನ್ನು ನೋಡಿದ ಅರ್ಜುನ ತನ್ನ ಬ್ರಹ್ಮಚರ್ಯದ ನಿಯಮವನ್ನು ಮುರಿಯುತ್ತಾನೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿಯಲ್ಲಿ ‘ಚಿತ್ರಾಂಗದಾ’ ನಾಟಕದ ಕುರಿತ ಬರಹ
