Advertisement

Category: ಸರಣಿ

ಮೊಗ್ಗಿನ ಜಡೆಯ ಹುಡುಗಿಯರು…: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಎದುರಿಗೆ ಸಿಕ್ಕಿದವರಿಗೆಲ್ಲ ಮಣಿ ತನ್ನ ಕೆಲಸದ ಬಗ್ಗೆ ಹೇಳಿಕೊಂಡ. ಕಮ್ಯೂನಿಟಿ ಹಾಲ್ ಒಳಕ್ಕೆ ಹೋಗಿ ಅಲ್ಲಿ ಇರುವವರಿಗೆಲ್ಲ ಹೇಳಿದ. ಮಣಿಗೆ ಏನು ಮಾಡಬೇಕೊ ಯಾರಿಗೆಲ್ಲ ಹೇಳಬೇಕೊ ಒಂದೂ ಅರ್ಥವಾಗಲಿಲ್ಲ. ಅವನ ಖುಷಿಗೆ ಪಾರವೇ ಇರಲಿಲ್ಲ. ಸೆಲ್ವಿಗೆ ಹೇಳುವುದು ಹೇಗೆ? ಆಲೋಚಿಸತೊಡಗಿದ. ರಾತ್ರಿ ಅವರ ಕಾಲೋನಿಗೆ ಹೋಗುವುದು ಸರಿಯಲ್ಲ. ನಾಳೆ ಹೇಳಿದರೆ ಆಯಿತು ಎಂದುಕೊಂಡ. ಕೊನೆಗೆ ಎಲ್ಲಾ ಸುತ್ತಿಕೊಂಡು ಬಂದು ಕತ್ತಲಲ್ಲಿ ಕಲ್ಲು ಬಂಡೆಯ ಮೇಲೆ ಸೀನ ಮತ್ತು ಮಣಿ ಕುಳಿತುಕೊಂಡರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಹನ್ನೊಂದನೆಯ ಕಂತು ನಿಮ್ಮ ಓದಿಗೆ

Read More

ಕಂಕುಳಲ್ಲಿ ಕತೆ ಪುಸ್ತಕ, ಎದೆಯಲ್ಲಿ ಕಥಾಸಾಗರ: ಸುಮಾ ಸತೀಶ್‌ ಸರಣಿ

ಅಂಗೆ ನೋಡಿದ್ರೆ ನಮ್ಮ‌ ನಾಗೂ ಅತ್ತೆಗೆ ಅಕ್ಷರಾನೇ ತಲೆಗೆ ಹತ್ತಲಿಲ್ಲ.‌ ಕೊನೆಗೆ ಅವರಿಗೆ ಸಂಗೀತ ಕಲಿಸಲು ಹಾರ್ಮೋನಿಯಂ ಮೇಷ್ಟ್ರನ್ನ ಕರೆಸಿದ್ರು. ಆ ಮೇಷ್ಟ್ರು ಮೊದಲು ಕಾಗುಣಿತ ತಿದ್ದಿಸಿ ಆಮೇಲೆ ಸಂಗೀತ ಹೇಳಿಕೊಟ್ಟಿದ್ದರು. ನಮ್ಮತ್ತೆಯ ಅಲ್ಪಪ್ರಾಣ ಮಹಾಪ್ರಾಣಗಳಿಗೆ ಜೀವ ತುಂಬಿದರು ಮೇಷ್ಟ್ರು. ಮೊದಲೇ ಕಲ್ಪನಾ ಚತುರೆ ಅತ್ತೆ. ಅಕ್ಷರಾನೂ ಬಂದ ಮೇಲೆ ಕತೆ ಬರೇಯೋಕೆ ಶುರು ಮಾಡಿದ್ರು. ಇಷ್ಟೇ ಅಲ್ಲ, ಅಕ್ಕಂದಿರ ಮಕ್ಕಳನ್ನು ಬಳಿ ಕೂರಿಸಿಕೊಂಡು ಸ್ವಾರಸ್ಯಕರವಾಗಿ ಕತೆ ಕಟ್ಟಿ ಹೇಳುವ ಕಲೆ ಇವರಲ್ಲಿ ಸೊಗಸಾಗಿತ್ತು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ

Read More

ನಾಗರಿಕತೆಯಿಂದ ಅನಾಗರಿಕತೆಯೆಡೆಗೆ ಇರಾಕ್: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

2003ರಲ್ಲಿ ಇರಾಕ್ ಯುದ್ಧದ ಮೂಲಕ ಈ ನಿರ್ದಯಿಯ ಆಡಳಿತ ಕೊನೆಗೊಂಡಾಗಲೇ ಇರಾಕ್‌ನ ಜನತೆ ನಿರಾಳತೆಯ ನಿಟ್ಟುಸಿರು ಬಿಟ್ಟದ್ದು. ಇರಾಕ್‌ನಲ್ಲಿ ರಾಜಕೀಯ ಸಂಕೀರ್ಣತೆ ಇರುವುದರ ಜೊತೆಗೆ ರಾಜಕೀಯ ವಿಡಂಬನೆಯೂ ಇದೆ. ಅಲ್ಲಿನ ಜನರು ತಮಾಷೆಯ ಮೂಲಕವೇ ರಾಜಕಾರಣಿಗಳಿಗೆ ಚುರುಕು ಮುಟ್ಟಿಸುತ್ತಾರೆ. ಆಡಳಿತ ವ್ಯವಸ್ಥೆಯ ಅಸಮರ್ಥತೆಯಿಂದಾಗಿ ದಿನನಿತ್ಯದ ಜೀವನದಲ್ಲಿ ಉಂಟಾಗುವ ಏರಿಳಿತಗಳನ್ನು ನಿಭಾಯಿಸಬೇಕಾದರೆ ಇಂತಹ ಹಾಸ್ಯಪ್ರವೃತ್ತಿ ಇರಬೇಕಾಗುತ್ತದೆ ಎನ್ನುವುದು ನಿಜ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ

Read More

ಧೀಮಂತ ಪತ್ರಕರ್ತ ಐ.ಕೆ. ಜಾಗೀರದಾರ್: ರಂಜಾನ್ ದರ್ಗಾ ಸರಣಿ

ಅವರೆಲ್ಲ ಕುಳಿತ ಕುರ್ಚಿ, ಪ್ಲೇಟು ಮತ್ತು ಆಹಾರದಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ. ಅದು ನಾಲ್ಕು ಮಾಸ್ಟರ್ ಬೆಡ್ ರೂಂ ಮನೆಯಾಗಿತ್ತು. ಎಲ್ಲ ಕೋಣೆಗಳನ್ನು ತೋರಿಸಿದರು. ಅವೆಲ್ಲ ಒಂದೇ ಸೈಜಿನ ಕೋಣೆಗಳು. ಪಲ್ಲಂಗ, ಬೆಡ್, ಹೊದಿಕೆ ಹೀಗೆ ಯಾವುದರಲ್ಲೂ ವ್ಯತ್ಯಾಸ ಇರಲಿಲ್ಲ. ಒಂದು ಇಬ್ಬರು ಮಕ್ಕಳ ಕೋಣೆ, ಇನ್ನೊಂದು ಅವರ ಕೋಣೆ, ಮತ್ತೊಂದು ಮನೆಗೆಲಸದ ಹೆಣ್ಣುಮಗಳ ಕೋಣೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 96ನೇ ಕಂತು ನಿಮ್ಮ ಓದಿಗೆ

Read More

ಮರೆವೆಂಬ ಮಾರ್ಜಾಲ, ಪರಿಸ್ಥಿತಿಯೆಂಬ ಮೂಷಿಕ…: ರಾಮ್ ಪ್ರಕಾಶ್ ರೈ ಕೆ ಸರಣಿ

ಲೋಕದ ಕಣ್ಣಿಗೆ ಚಚ್ಚೂ ನಾಪತ್ತೆಯಾದ ಪಟ್ಟಿಯಲ್ಲೇ ಇರಬೇಕಿದೆ. ಏಕೆಂದರೆ ಉಳಿದ ಜೀವಗಳ ಉಸಿರು ಬಂಧನದ ಬೇಗೆಗೆ ಬಿದ್ದು ಸುಡಬಾರದೆಂದರೆ ಆ ಘಟನೆಯನ್ನು ಮರೆಯಲೇ ಬೇಕಿದೆ. ಹೀಗೆ ದಿನ ಕಳೆದಾಗ ಮತ್ತೆ ಅಪ್ಪು ಪಿಳ್ಳೆ ಎಲ್ಲವನ್ನೂ ಮರೆತು ಹೋಗುತ್ತಾರೆ. ಮರಳಿ ತನಿಖೆ, ಮತ್ತದೇ ಕಹಿಯ ಅಂತ್ಯ ಎಲ್ಲವೂ ಮೋಟಾರಿನ ಚಕ್ರದಂತೆ ಮತ್ತದೇ ಆರಂಭ ಅದೇ ಅಂತ್ಯ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಮಲಯಾಳಂನ ‘ಕಿಷ್ಕಿಂದಾ ಕಾಂಡಮ್’ ಸಿನಿಮಾದ ವಿಶ್ಲೇಷಣೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ