Advertisement

Category: ಸಾಹಿತ್ಯ

ಡಾ. ದಿಲೀಪ್‌ ಕುಮಾರ್‌ ಎನ್.ಕೆ. ಬರೆದ ಈ ಭಾನುವಾರದ ಕತೆ

ಗುಂಡನಿಗೆ ನಿದ್ರೆಯೇ ಬರುತ್ತಿಲ್ಲ. ಆತ ಏನೇನೋ ಯೋಚಿಸುತ್ತಾ ಎಚ್ಚರವಾಗೇ ಇದ್ದಾನೆ. ನಿದ್ದೆ ತಾನೇ ಅವನಿಗೆ ಎಲ್ಲಿಂದ ಬರಬೇಕು? ಅವನ ಮನಸ್ಸಿನ ತುಂಬೆಲ್ಲಾ ಅವನ ಅಪ್ಪ ಅಮ್ಮರೇ ತುಂಬಿಹೋಗಿದ್ದಾರೆ. ಅವನಿಗೆ ಏನನ್ನಿಸಿತೋ ಏನೋ? ಮೆಲ್ಲಗೆ ಎದ್ದು ಮಲಗಿದ್ದ ಅಪ್ಪನನ್ನೇ ಕಣ್ತುಂಬಿಕೊಳ್ಳುತ್ತಾ ಅಪ್ಪನ ಮಟ್ಟಗುಂಜಿನಂತಿದ್ದ ತಲೆಗೂದಲ ಮೇಲೆ ಕೈಯಾಡಿಸುತ್ತಾನೆ. ಅವನ ಚಕ್ಕಳವಾದ ದೇಹ. ಅವನ ನೋವಿನ ಕಾಲು. ಇತ್ತ ತನ್ನ ಮಗ್ಗುಲಲ್ಲೇ ಮಲಗಿದ್ದ ಅವ್ವನನ್ನು ನೋಡುತ್ತಾನೆ.
ಡಾ. ದಿಲೀಪ್‌ ಕುಮಾರ್‌ ಎನ್.ಕೆ. ಬರೆದ ಈ ಭಾನುವಾರದ ಕತೆ “ಸುಟ್ಟಿರದೇ ಮೂರ್ ದ್ವಾಸ…” ನಿಮ್ಮ ಓದಿಗೆ

Read More

ಮಣಿ…: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ನೂರು ವರ್ಷಗಳಿಂದ ಗಣಿ ಸುರಂಗಗಳಿಂದ ತೆಗೆದ ಕಲ್ಲುಗಳ ಅದಿರನ್ನು ಪುಡಿಮಾಡಿ ಚಿನ್ನ ತೆಗೆದುಕೊಂಡು ಬಿಸಾಕಿರುವ ಗಣಿ ತ್ಯಾಜ್ಯದ ಗುಡ್ಡ ಅದು. ನೆಲದ ಮೇಲೆ ಇಷ್ಟು ದೊಡ್ಡ ಗುಡ್ಡ ಬಿದ್ದಿದೆ ಎಂದರೆ ಎಷ್ಟು ಜನರು ಗಣಿ ಸುರಂಗಗಳಲ್ಲಿ ಕೆಲಸ ಮಾಡಿರಬೇಕು? ಎಷ್ಟು ಬೆವರು ಸುರಿದಿರಬೇಕು? ಎಷ್ಟು ಜನರು ಸತ್ತಿರಬೇಕು? ಈ ಗುಡ್ಡಗಳು ಬೀಳಲು ನಮ್ಮ ಪೂರ್ವಜರೆ ಕಾರಣ ಎಂದುಕೊಂಡ. ಮಣಿ ತಂದೆ ಸೆಲ್ವಮ್. ಸೆಲ್ವಮ್ ತಂದೆ ಕುಪ್ಪ ಹೇಳುತ್ತಿದ್ದ ಅನೇಕ ಗಣಿ ದುರಂತಗಳ ಕರಾಳ ಕಥೆಗಳು ಮಣಿ ತಲೆಯಲ್ಲಿ ಹಾವುಗಳಂತೆ ಹರಿದಾಡತೊಡಗಿದವು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಎರಡನೆಯ ಕಂತು ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸಂತೋಷ್ ಅನಂತಪುರ ಕತೆ

ತನ್ನ ಮಗಳು ಕಣ್ಣೆದುರಿಗೆ ಅಳುತ್ತಿರುವುದನ್ನು ಕಂಡೂ ಯಾವುದೇ ವಿಕಾರಗಳನ್ನು ಹರಿಸದೆ ಮೌನದಿಂದ ಶೂನ್ಯವನ್ನು ದಿಟ್ಟಿಸುತ್ತಾ, ಅಜ್ಜನನ್ನು ತಬ್ಬಿಕೊಂಡ ಮಗಳನ್ನು ಮತ್ತು ಅಪ್ಪ ಶೇಖರಪ್ಪಯ್ಯರನ್ನು ನಿರ್ಭಾವದಿಂದ ನೋಡುತ್ತಿದ್ದ. ಶೇಖರಪ್ಪಯ್ಯರ ಹೊಟ್ಟೆ ಹೊತ್ತಿಯೇ ಹೋಯಿತೇನೋ ಎನ್ನುವಂತೆ ಎಡಗೈಯಿಂದ ಹೊಟ್ಟೆಯನ್ನು ಹಿಡಿದು ಹಿಚುಕುತ್ತಾ ಸವರುತ್ತಾ, ಮೊಮ್ಮಗಳನ್ನು ಬಿಗಿದಪ್ಪಿಕೊಂಡು ಮಗನೇ… ಸೂರ್ಯ…. ನಾನು ಕಣೋ ಅಪ್ಪಾ… ಮಾತಾಡೋ, ಮಾತಾಡು ಕಂದ ಎಂದು ಸೂರ್ಯನಿಗೆ ಹೇಳುತ್ತಿದ್ದರೆ….
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸಂತೋಷ್ ಅನಂತಪುರ ಕತೆ “ಗಂಧ”

Read More

ಡಾ. ಎಂ. ವೆಂಕಟಸ್ವಾಮಿ ಕಾದಂಬರಿ “ಒಂದು ಎಳೆ ಬಂಗಾರದ ಕಥೆ” ಶುರು…

ಕೆ.ಜಿ.ಎಫ್‌ ಎಂಬ ನೆಲದಲ್ಲಿ, ಚಿನ್ನದ ಅದಿರಿನ ಶೋಧನೆಯ ಸಮಯದಲ್ಲಿ ಅಲ್ಲಿನ ಜನರು ಹಾಗೂ ಕಾರ್ಮಿಕರು ಅನುಭವಿಸಿದ ತಲ್ಲಣಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” (ಕೆಜಿಎಫ್ ಗಣಿಗಳ ತವಕ ತಲ್ಲಣಗಳು) ಕಾದಂಬರಿ ಪ್ರತಿ ಶನಿವಾರಗಳಂದು‌ ನಿಮ್ಮ ಕೆಂಡಸಂಪಿಗೆಯಲ್ಲಿ ಪ್ರಕಟವಾಗಲಿದೆ.

Read More

ಕರುಣ ಪ್ರಸಾದ್ ಕೆ ಎಸ್ ಬರೆದ ಈ ಭಾನುವಾರದ ಕಿರುಕತೆ

ಅವರೇನಾದರೂ ಅಸೂಯೆಯಿಂದ ನಿಂದಿಸಿದರೆ ನಾನು ಸಿಟ್ಟುಗೊಳ್ಳುವುದಿಲ್ಲ ಮತ್ತೆ ಗುಡ್ಡದ ತರ ಸ್ತಬ್ಧನಾಗುತ್ತೇನೆ. ಮತ್ತೆ ಅವರಿಗೆ ನಿಲುಕದ ಪರ್ವತವಾಗುತ್ತೇನೆ. ಇದು ಇಷ್ಟು ದಿನ ಅವರು ನನ್ನನ್ನು ತಯಾರು ಮಾಡಿದ ರೀತಿಗೆ ನನ್ನ ಪ್ರತಿಭಟನೆ. ಇದರಲ್ಲಿ ಅವರ ರೀತಿಯಲ್ಲಿ ಬದುಕುವುದು ನಾನೆಯಾದರು ಸೋಲುವುದು ಮಾತ್ರ ಅವರು, ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ, ನಾನು ನಿಸರ್ಗದ ತತ್ವಕ್ಕೆ ತಕ್ಕನಾಗಿ ನಾನು ನಿಸರ್ಗವಾಗಿದ್ದೇನೆ.
ಕರುಣ ಪ್ರಸಾದ್ ಕೆ ಎಸ್ ಬರೆದ ಈ ಭಾನುವಾರದ ಕಿರುಕತೆ “ಓಡುವವನ ಅಂತರಾಳ”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ