Advertisement

Category: ಸಾಹಿತ್ಯ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಮೇಶ್ ಆರ್ ಅಕ್ಕರಕಿ ಕತೆ

ಹಿಂದಿರುಗಿ ಬರುತ್ತಿದ್ದಾಗ ಮರದಿಂದ ಕೆಳಗೆ ದೂರದಲ್ಲಿ ನೆಲದ ಮೇಲೆ ಬಿದ್ದಿದ್ದ ಗೂಡಿನ ಸುತ್ತ ಕಾಗೆಯೊಂದು ಕಾ… ಕಾ… ಎನ್ನುತ್ತ ಸುತ್ತು ಹಾಕುತ್ತಿತ್ತು. ಹತ್ತಿರಕ್ಕೆ ಹೋಗಿ ನೋಡಿದರೆ ಗೂಡಿಂದ ಹೊರಗೆ ಬಿದ್ದು ಒಡೆದ ಮೊಟ್ಟೆಯಿಂದ ಮಾಂಸದ ಮುದ್ದೆಯಂತಿದ್ದ ಮರಿಯೊಂದು ಹೊರಬಿದ್ದಿತ್ತು.
ನಾನು ಮೆಚ್ಚಿದ ನನ್ನ ಕತೆಯ ಸರಣಿಯಲ್ಲಿ ರಮೇಶ್ ಆರ್ ಅಕ್ಕರಕಿ ಬರೆದ ಕತೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರೇಣುಕಾ ಹೆಳವರ ಕತೆ

ಅಷ್ಟೊಂದು ಪ್ರೀತಿಸಿ ನನಗೋಸ್ಕರ ಸಾಯಲೂ ಕೂಡ ಮುಂದಾಗಿದ್ದ ಮಹೇಶ್ ಇವನೇನಾ ಎಂದು ಗಂಗಾ ದಂಗುಬಡಿದು ಹೋದಳು. ಗಂಗಾ ಹಾಸ್ಟೆಲ್‌ನಲ್ಲಿ ಓದಿದ ಹುಡುಗಿ, ಈ ಜಗತ್ತಿನ ಎಲ್ಲ ಆಯಾಮಗಳ ಅರಿವು ಕೂಡ ಅವಳಿಗಿತ್ತು. ಆದರೂ ಅವನ ಮಾತಿನ ಬಾಣ ಅವಳ ಎದೆಯಲ್ಲಿ ಹೊಕ್ಕು ರಕ್ತಕಾರುವಂತೆ ಚುಚ್ಚುತ್ತಿತ್ತು. “ಮಹೇಶ ನಿಜಕ್ಕೂ ನನ್ನ ಪ್ರೀತಿಸಿದ್ನಾ..? ಅಥವಾ ನನ್ನ ರೂಪ ಪಡಿಯೋಕೆ ನಾಟ್ಕಾ ಆಡಿದ್ನಾ?
ನಾನು ಮೆಚ್ಚಿದ ನನ್ನ ಕತೆಯ ಸರಣಿಯಲ್ಲಿ ರೇಣುಕಾ ಹೆಳವರ ಕತೆ “ಗಿಳಿಯು ಪಂಜರದೊಳಿಲ್ಲ”

Read More

ಮಯೂರ ಬಿ ಮಸೂತಿ ಬರೆದ ಈ ಭಾನುವಾರದ ಕತೆ

ತಲೆಗೆ ಮಂಕು ಬಡಿದಂತಾಯಿತು, ಆದರೂ ಚೇತರಿಸಿಕೊಂಡು ಮನೆ ತಲುಪಿದೆ. ಶಶಿ, ಮಕ್ಳು ಕಾಯ್ತಾ ಇದಾರೆ, ಆಗ್ಲೇ ತುಂಬಾ ಹೊತ್ತಾಯ್ತು, ಟೈಮ್ ನೋಡಿ ೧೦:೩೦, ನಂಗು ಜೋರಾಗಿ ನಿದ್ದೆ ಬರ್ತಾ ಇದೆ. ಬೇಗ ಬನ್ನಿ ಊಟ ಮಾಡೋಣವೆಂದಳು ನಿಶಾ. ನಾನು ಏನು ಮಾತಾಡದೆ ಕೈಯಲ್ಲಿದ್ದ ಪೇಪರ್ ಬ್ಯಾಗ್ ಅನ್ನು ಅವಳ ಕೈಗೆ ನೀಡಿದೆ. ಬಿರಿಯಾನಿ ತಿನ್ನಲು ಶುರು ಮಾಡಿದೆವು. ಯಾಕೆ ಶಶಿ ಏನು ಮಾತಾಡುತ್ತಿಲ್ಲ?
ಮಯೂರ ಬಿ ಮಸೂತಿ ಬರೆದ ಈ ಭಾನುವಾರದ ಕತೆ “ಕಬಾಬ್ ಮೆ ಹಡ್ಡಿ”

Read More

ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

“ಹಾಗೆ ಹೇಳಿಬಿಟ್ಟರೆ ನಿನ್ನನ್ನೇ ನಂಬಿಕೊಂಡ ನನ್ನ ಗತಿ ಏನು? ನಿನಗೆ ಗೊತ್ತಿರಲಿ, ನಿನ್ನೆ ಹೋಟೆಲ್‌ನಲ್ಲಿ ನಡೆದದ್ದೆಲ್ಲ ವೀಡಿಯೋ ರೆಕಾರ್ಡ್ ಆಗಿದೆ. ಅದು ನನ್ನ ಮೊಬೈಲ್‌ನಲ್ಲೇ ಇದೆ. ನೀನೀಗ ನನ್ನ ಮಾತಿಗೆ ಒಪ್ಪದಿದ್ದರೆ ನಾನೇನು ಮಾಡಬಹುದು, ಅದು ನಿನಗೂ ಗೊತ್ತಿದೆ……”
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಕತೆ “ವಾಟ್ಸಾಪ್ ಚಾಟ್” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಾಜೀವ ನಾರಾಯಣ ನಾಯಕ ಕತೆ

ಆಕಾಶದ ಒಂದು ಭಾಗದಲ್ಲಿ ಮೋಡ ದಟೈಸಿ ಒಂದೆರಡು ಹನಿ ಕೂಡ ಉದುರಿತು! ಉಸುಕಿನಲ್ಲಿ ನಡೆದಾಡಿದೆ. ಮಳೆ ಹನಿ ಬೀಸುವ ಗಾಳಿಯನ್ನು ತಂಪು ಮಾಡಿದ್ದರಿಂದ ತುಸು ಹಿತವೆನಿಸಿತು. ಆ ತುದಿ ಮುಟ್ಟುವಷ್ಟರಲ್ಲಿ ಇಡೀ ಮೈ ಹಸಿಯಾಗಿತ್ತು. ಈ ನಡುವೆ ಮೋಡಗಳು ಕರಗಿ ಆಕಾಶ ಶುಭ್ರಗೊಂಡು, ನಕ್ಷತ್ರಗಳು ಕಾಣಿಸಿಕೊಂಡವು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಾಜೀವ ನಾರಾಯಣ ನಾಯಕ ಕತೆ “ಮಣ್ಣಿನ ದೋಣಿ” ನಿಮ್ಮ ಓದಿಗೆ

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಜರ್ಮನಿಯಿಂದ ಕನ್ನಡಕ್ಕೆ ಬಂದ ‘ಈಡಾ’

ಕ್ಷಣ ಮೌನ. ಉರ್ಸುಲಾಳ ಜೊತೆ ಮಾತನಾಡದೆಯೇ ಹಾಯಾಗಿ ಕುಳಿತಿರಬಹುದು. ಅವಳು ಪೆದ್ದುಪೆದ್ದಾಗಿ ಏನೇನೋ ಪ್ರಶ್ನೆಗಳನ್ನು ಕೇಳುವುದಿಲ್ಲ. ತನ್ನ ಮೇಲೆ ಹುಡುಗನೊಬ್ಬ ಬಂದೆರಗಿದ ಘನವಾದ ವಿಷಯವನ್ನು ಹಂಚಿಕೊಳ್ಳಲು ಮಾತ್ರ…

Read More

ಬರಹ ಭಂಡಾರ