Advertisement

Category: ಅಂಕಣ

ಆಧಿಕ್ಯದ ಸಮಸ್ಯೆ…: ಡಾ. ಎಲ್.ಜಿ.ಮೀರಾ ಅಂಕಣ

ಪುರಂದರ ದಾಸರ ಸಾಲುಗಳು ನೆನಪಾಗುತ್ತವೆ – “ಇಷ್ಟು ದೊರಕಿದರೆ ಅಷ್ಟು ಬೇಕೆಂಬಾಸೆ, ಅಷ್ಟು ದೊರಕಿದರೆ ಮತ್ತಿಷ್ಟರಾಸೆ, ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ, ನಷ್ಟ ಜೀವನದಾಸೆ ಪುರಂದರ ವಿಠಲ”. ಮನುಷ್ಯನಿಗೆ ಸಾಕು ಎನ್ನುವುದು ಎಷ್ಟು ಕಷ್ಟ ಎಂಬ ವಿಷಯವು ನಮಗೆ ಇದರಿಂದ ಗೊತ್ತಾಗುತ್ತದೆ ಅಲ್ಲವೆ? ಎಷ್ಟಿದ್ದರೂ ನಮಗೆ ಇನ್ನೂ ಬೇಕು ಬೇಕು ಬೇಕು ಬೇಕು. ಒಬ್ಬೊಬ್ಬರು ಹೊಂದಿರುವ ಸಾವಿರ ಸೀರೆಗಳು, ಮುನ್ನೂರು ಚಪ್ಪಲಿಗಳು, ಚಿನ್ನದ ಶೌಚಾಲಯ ಘಟಕಗಳು, ನಲವತ್ತೆಂಟು ಕೈಗಡಿಯಾರಗಳು ….
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಹದಿನೆಂಟನೆಯ ಬರಹ

Read More

ಶರತ್ಕಾಲದ ರಂಗುರಂಗಿನ ಪ್ರಚಾರ: ಡಾ. ವಿನತೆ ಶರ್ಮ ಅಂಕಣ

ಕಾನೂನಿನ ಪ್ರಕಾರ ಗೋಡೆ ಗ್ರಫಿಟಿ ಆರ್ಟ್, ಮಸಿ ಬಳೆಯುವುದು ಇಂಥವುದೆಲ್ಲಾ ಅಪರಾಧಗಳು. ಬಲವಾದ, ಅದರಲ್ಲೂ ಕೇಂದ್ರೀಯ ವಿರೋಧಪಕ್ಷದ ನಾಯಕರಾದ ಪೀಟರ್ ಡಟ್ಟನ್ ಅವರ ಭಿತ್ತಿಚಿತ್ರಕ್ಕೆ ಮಸಿ ಬಳೆದದ್ದನ್ನ ನೋಡಿ ನನಗೆ ಆಶ್ಚರ್ಯವಾಯ್ತು. ಅದ್ಯಾರೊ ಬಹಳ ಧೈರ್ಯವಂತರಿರಬೇಕು ಎಂದುಕೊಂಡೆ. ಇಲ್ಲವೇ, ಡಟ್ಟನ್ ಅವರ ಸ್ವಲ್ಪವೂ ಸತ್ವವಿಲ್ಲದ, ಅಸತ್ಯದ, ಅಸಂಗತ ಮಾತುಗಳು, ಹೇಳಿಕೆಗಳಿಂದ ಬೇಸತ್ತು ಅವರ ಭಿತ್ತಿಚಿತ್ರದ ಮುಖಕ್ಕೆ ಮಸಿಬಳೆಯುವ ಯೋಚನೆ ಬಂದಿರಬೇಕು. ಅವರ ಬಳಿ ಸತ್ವಯುತ, ಅಭಿವೃದ್ಧಿ-ಪರ, ಜನ-ಪರ ಆಶ್ವಾಸನೆಗಳು ಇಲ್ಲದಿರುವುದು ಮಸಿಬಳೆದ ಕಿಡಿಗೇಡಿಗಳಿಗೆ ಅದೆಷ್ಟು ನಿರಾಸೆ ತಂದಿರಬೇಕು ಎಂದೆನಿಸಿತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಮಕ್ಕಳನ್ನು ಬೆಳೆಸುವ `ಕಲೆ’- ಎಂದಾದರೂ ಸಿದ್ಧಿಸೀತೇ?: ಎಲ್.ಜಿ.ಮೀರಾ ಅಂಕಣ

ಬೆಳಿಗ್ಗೆ ಏಳುವ ಸಮಯದಿಂದ ಹಿಡಿದು ರಾತ್ರಿ ಮಲಗುವ ಸಮಯದ ತನಕ ಪ್ರತಿಯೊಂದೂ ಅಂದರೆ ಇಂಚಿಂಚು ಜೀವನವೂ ನಿರ್ಬಂಧಮಯವಾದ ಜೀವನಶೈಲಿ ಇರುವ ಸನ್ನಿವೇಶ ಇದು. ಮಕ್ಕಳನ್ನು ಅದರಲ್ಲೂ ವಿಜ್ಞಾನ ಶಿಕ್ಷಣ ಆರಿಸಿಕೊಂಡವರಿಗೆ ಜಂಗಮವಾಣಿಯನ್ನು ಮುಟ್ಟಲೂ ಬಿಡದ, ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳಿಗೆ ತೊಡಗಿಸದ ಮನೆಗಳಿವೆ, ವಿದ್ಯಾರ್ಥಿನಿಲಯಗಳಿವೆ! ಈ ವ್ಯವಸ್ಥೆಗೆ ಕೆಲವು ಮಕ್ಕಳು ಹೇಗೋ ಹೊಂದಿಕೊಂಡರೆ ಇನ್ನು ಕೆಲವರು ಆ `ಸೆರೆಮನೆ’ಯಿಂದ ಓಡಿ ಹೋಗಿಬಿಡುವುದು, ಅಥವಾ ದಿಕ್ಕು ಕಾಣದೆ ಆತ್ಮಹತ್ಯೆ ಮಾಡಿಕೊಳ್ಳುವುದು ಇಂತಹ ಅತಿರೇಕದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಹದಿನೇಳನೆಯ ಬರಹ

Read More

ಬದುಕಿನ ಪಯಣದಲ್ಲಿ ತಂಗುದಾಣಗಳೂ ಇರಲಿ: ಎಸ್. ನಾಗಶ್ರೀ ಅಜಯ್ ಅಂಕಣ

ನಮಗೇನು ಬೇಕು? ಒಂದು ಒಳ್ಳೆಯ ಬಿಡುವು, ನಮ್ಮದೆನ್ನುವ ಸ್ವಲ್ಪ ಸಮಯ, ಜೀವನಕ್ಕೊಂದು ಗುರಿ, ಹತ್ತಿರದವರ ಮೆಚ್ಚುಗೆ ಮತ್ತು ಅಹಂಕಾರಕ್ಕಿಂತ ವಿನಮ್ರತೆಯಲ್ಲಿ ಸುಖ ಕಾಣುವ ಮನಃಸ್ಥಿತಿ. ಪ್ರತಿದಿನವೂ ಅರ್ಧಗಂಟೆಯಾದರೂ ವ್ಯಾಯಾಮ, ನಡಿಗೆ, ಯೋಗ ಇತ್ಯಾದಿಗೆ ಸಮಯ ಮೀಸಲಿಡುವುದು, ಮರೆತುಹೋದ ಹವ್ಯಾಸಗಳೊಂದಿಗೆ ಮತ್ತೆ ಸಖ್ಯ ಬೆಳೆಸುವುದು, ಹೊಸತನ್ನು ಕಲಿಯುವುದು, ಉದ್ಯೋಗ ಮತ್ತು ವೈಯಕ್ತಿಕ ಬದುಕಿನ ನಡುವೆ ಅಂತರ ಕಾಯ್ದುಕೊಳ್ಳುವುದು ಹಾಗೂ ನಮ್ಮ ಇಂದಿನ ಬದುಕು ಹಲವರ ಕನಸೆಂಬುದನ್ನು ಮನಗಾಣುವುದು ಸಹಾಯ ಮಾಡಬಹುದು.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ ಬರಹ ನಿಮ್ಮ ಓದಿಗೆ

Read More

ಚುನಾವಣಾ ಕಣಕ್ಕೆ ಪ್ರವೇಶ: ಡಾ. ವಿನತೆ ಶರ್ಮ ಅಂಕಣ

ಈ ಬಾರಿ ಈ ಡಟ್ಟನ್ ಮಹಾಶಯ ವಲಸಿಗರ ಮನ ಓಲೈಸುವ ಪ್ರಯತ್ನಕ್ಕೆ ಇಳಿದಿದ್ದಾರೆ. ಪ್ರತಿದಿನವೂ ಆಸ್ಟ್ರೇಲಿಯನ್ ನಗರಗಳ ಹೊರವಲಯಗಳಲ್ಲಿ ವಾಸಿಸುತ್ತಿರುವ ವಲಸಿಗ ಸಮುದಾಯಗಳಿಗೆ ಭೇಟಿಕೊಟ್ಟು, ಭರವಸೆಗಳನ್ನು ಕೊಡುತ್ತಿದ್ದಾರೆ. ತಾವು ವಲಸಿಗರ ‘ಆಸ್ಟ್ರೇಲಿಯನ್ ಕನಸು’ ಎಂಬುದಕ್ಕೆ ಬೆಂಬಲ ಕೊಟ್ಟು, ವಲಸಿಗರ ಜೀವನವನ್ನು ಹಸನು ಮಾಡುವ ಮಾತನ್ನು ಆಡುತ್ತಿದ್ದಾರೆ. ವಲಸಿಗರೂ ಅಷ್ಟೇ, ಬಹಳ ಆಸಕ್ತಿಯಿಂದ ಚುನಾವಣಾ ವಿಷಯಗಳಲ್ಲಿ ಭಾಗವಹಿಸುತ್ತಿದ್ದಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ