Advertisement

Category: ಅಂಕಣ

ಒಂದು ಬಾಗಿಲನ್ನು ಹೊಕ್ಕು ಹೊರಬಂದ ಮೇಲೆ…: ಆಶಾ ಜಗದೀಶ್ ಅಂಕಣ

“ಶಾಂತಿಯವರು ವಸ್ತುವಿನ ಆಯ್ಕೆಯಲ್ಲಿ ತೋರಿಸುವ ಕಾಳಜಿ ಬಹಳ ಮುಖ್ಯ. ಅವರ ಕಥೆಗಳಲ್ಲಿ ವಸ್ತು ವೈವಿಧ್ಯತೆಯನ್ನು ಕಾಣಬಹುದು. ಶಾಂತಿಯವರು ಕಥೆಯ ವಿಚಿತ್ರ ತಿರುವುಗಳು ಮತ್ತು ಕುತೂಹಲವನ್ನು ಕೊನೆಯವರೆಗೂ ಕಾಯ್ದುಕೊಂಡು ಹೋಗುವ ಆಕರ್ಷಕ ರೀತಿಯಿಂದಾಗಿ ಓದುಗರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡುತ್ತಾರೆ. ಜಯರಾಮ ಹುಚ್ಚನಾದ ಕಥೆ ಅದಕ್ಕೊಂದು ಉತ್ತಮ ನಿದರ್ಶನ. ಜಯರಾಮ ಹುಚ್ಚ ಯಾಕಾದ ಎನ್ನುವುದನ್ನು ತಿಳಿಯಲಿಕ್ಕೆ ನಾವು ಪೂರಾ ಕಥೆಯನ್ನು ಓದಲೇಬೇಕು.”

Read More

ಕೀಳರಿಮೆಯ ರೋಗಕ್ಕೆ ಶಿಕ್ಷಣದ ಮದ್ದರೆದು…: ಶ್ರೀಹರ್ಷ ಸಾಲಿಮಠ ಬರೆಯುವ ಹೊಸ ಅಂಕಣ

“ಒಮ್ಮೆ ಸೈಕಲ್ ಕೊಳ್ಳಲು ಹೋಗಿದ್ದಾಗ ನಾನು ಒಂದು ಸೈಕಲ್ಲನ್ನು ತೊರಿಸಿ “ಇದು ಎಷ್ಟು” ಅಂತ ಕೇಳಿದೆ. ಸೇಲ್ಸ್ ಮನ್ ಬಿಳಿಯ. ಆತ ಬೆಲೆ ಎಷ್ಟು ಅಂತ ಹೇಳದೆ “ಅದು ದುಬಾರಿ” ಎಂದಷ್ಟೇ ಹೇಳಿದ. ನೀನು ಕಂದುಬಣ್ಣದವನು ನಿನಗೆ ಅದನ್ನು ಕೊಳ್ಳುವ ಯೋಗ್ಯತೆಯಿಲ್ಲ ಎಂದು ಆತ ಪರೋಕ್ಷವಾಗಿ ಹೇಳಿದ್ದ. ಅಸಲಿಯತ್ತೆಂದರೆ ನಾನು ಕಟ್ಟುವ ತೆರಿಗೆಯೇ ಆತನ ಆದಾಯಕ್ಕಿಂತ ಹೆಚ್ಚಿತ್ತು!”

Read More

ಯೋಗಿಯೂ ಆಗದ, ಜೋಗಿಯೂ ಆಗದ ಬೇಸಿಗೆ ರಜೆ: ವಿನತೆ ಶರ್ಮಾ ಅಂಕಣ

“ಸಮುದ್ರತಟ ಮತ್ತು ಕಣಿವೆ ಪರಸ್ಪರ ಮುಖವನ್ನ ದೂರಮಾಡಿಕೊಂಡು ಒಂದು ಜೋಗಿಯಾಗಿ ಇನ್ನೊಂದು ಯೋಗಿಯಾಗಿರುವಂತೆ ಅನಿಸುತ್ತದೆ. ಐವತ್ತು ವರ್ಷಗಳ ಹಿಂದೆ ಸ್ಥಳೀಯ ಅಬರಿಜಿನಲ್ ಸಮುದಾಯಗಳು ಜೀವನ ಮಾಡುತ್ತಿದ್ದ ಮತ್ತು ಅಲ್ಲಲ್ಲಿ ಹರಡಿದ್ದ ನೂರಾರು ಎಕರೆ ಫಾರ್ಮ್ ಗಳನ್ನು ಬಿಟ್ಟರೆ ಹೊರಗಿನವರಿಗೆ ಇಲ್ಲಿನ ಬೆಟ್ಟಕಣಿವೆ ಪ್ರದೇಶದ ಪರಿಚಯ ಅಷ್ಟೊಂದಿರಲಿಲ್ಲವಂತೆ. ಜನ ಬೀಚುಗಳಿಗೆ ಬಂದು ಹೋಗುತ್ತಿದ್ದರು.”

Read More

2020- ಕನಸು ನನಸುಗಳ ತಂತಿ ಮೀಟುತ್ತಾ…: ಮಧುಸೂದನ್ ವೈ ಎನ್ ಅಂಕಣ

“ಇನ್ನು ಭವಿಷ್ಯತ್ತಿನ ಕಾಲಕ್ಕೆ ಹೊರಳೋಣ. ಇಂದಿನಿಂದ ಇಪ್ಪತ್ತು ವರುಷಗಳ ನಂತರ ಅಂದರೆ 2040ರ ಹೊತ್ತಿಗೆ ನಿಮ್ಮ ಕತೆಯೇನು? “ಕ್ರಿಸ್ತಪೂರ್ವ” ದಂತೆ ಹಿಂದಿನಿಂದ ಲೆಕ್ಕ ಹಾಕಿದರೆ ನಮ್ಮಲ್ಲಿ ಎಷ್ಟೋ ಜನರ ಎಕ್ಸ್ಪೈರಿ ಡೇಟು ಮುಗಿದಿರುತ್ತದೆ! ಶತಾಯುಷಿಯಾಗುವ ಇಚ್ಛೆಯಿರದಿದ್ದಲ್ಲಿ. ಎಲ್ಲ ಚನ್ನಾಗಿದ್ದರೆ ನಾನು 53 ವರ್ಷ ಆಯಸ್ಸು ಸವೆಸಿರುತ್ತೇನೆ. ಇತ್ತಲಾಗೆ ಪೂರ್ತಿ ಮುದುಕನೂ ಅಲ್ಲ ಅತ್ತಲಾಗೆ ದುಡಿವ ವಯಸ್ಕನೂ ಅಲ್ಲ.”

Read More

ಗೋಕುಲ ನಿರ್ಗಮನದ ಪುತಿನ ಮತ್ತು ಎಚ್ ಎಸ್ ವಿ: ಲಕ್ಷ್ಮಣ ವಿ.ಎ. ಅಂಕಣ

“ಹಿರಣ್ಯಕಶಪುವಿಗೆ ಕಂಬ ಮಾತ್ರ ಕಂಡಿತು; ಪ್ರಹ್ಲಾದನಿಗೆ ಕಂಬದ ಒಳಗೆ ಅಡಗಿರುವ ನರಸಿಂಹ ಕಂಡ! ಕಾಣಲಿಕ್ಕೆ ದೃಷ್ಟಿಯಷ್ಟೇ ಸಾಲದು…. ಅದೃಷ್ಟವೂ ಇರಬೇಕು. ಅದಕ್ಕೆ ಮಹಾಕವಿಗಳು ಹೇಳಿದ್ದು ಕಂಡ ಕಂಡವರಿಗೆಲ್ಲಾ ಕಾಣುವುದಿಲ್ಲ…. ಕಂಡವರಿಗಷ್ಟೇ ಕಾಣಬೇಕಾದ್ದು ಕಾಣುವುದು ಎಂದು! ಅದನ್ನೇ ನಾವು ದರ್ಶನ ಎನ್ನುವುದು. ಇಂತಹ ದರ್ಶನದಿಂದ ತುಂಬಿರುವುದರಿಂದಲೇ ಪುಟ್ಟಪ್ಪನವರು ತಮ್ಮ ಕಾವ್ಯಕ್ಕೆ ರಾಮಾಯಣ ದರ್ಶನನಂ ಎಂದು ಹೆಸರಿಟ್ಟರು.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ