ಬಿಸಿಲು ಮೂಡುವ ಹೊತ್ತಿಗೆ, ಕೈಯಲ್ಲೊಂದು ಹೊತ್ತಿಗೆಯಿರಲಿ
ಇತ್ತೀಚೆಗೆ ಇತ್ತ ನಾಟಕವೂ ಅಲ್ಲದ, ಅತ್ತ ಸರಳ ಓದುವಿಕೆಯೂ ಅಲ್ಲದ ಮಧ್ಯಮಾರ್ಗದಲ್ಲಿ ನಿಂತ ಆಡಿಯೋ ಪುಸ್ತಕಗಳ ಭರಾಟೆಯೂ ಹೆಚ್ಚಿದೆ. ಕೆಲಸ ಮಾಡುತ್ತಲೇ ಕೇಳಿಸಿಕೊಳ್ಳಬಹುದು. ವಿಚಾರ ತಿಳಿಯಬಹುದು ಎಂಬ ಸಕಾರಾತ್ಮಕ ಅಂಶಗಳ ಬೆಂಬಲವಿದ್ದರೂ, ಏಕಾಂತದಲ್ಲಿ ಈ ಜಗದ ಪರಿವೆ ಇಲ್ಲದೆ, ಮನೋಲೋಕದಲ್ಲಿ ಪಾತ್ರವೇ ನಾವಾಗಿ ವಿಹರಿಸುವ ‘ಓದಿ’ನ ಆನಂದವನ್ನು ಎಂದಿಗೂ ಅವು ನೀಡಲಾರವು. ನಮ್ಮ ಕಲ್ಪನೆಯಲ್ಲಿ ಪಾತ್ರಗಳಿಗೆ ರೂಪ, ಬಣ್ಣ, ನಿಲುವು ಸಿಕ್ಕಂತೆಯೇ ಅವುಗಳಿಗೆ ಧ್ವನಿಯೂ ಲಭಿಸಿರುತ್ತದೆ.
ಎಸ್. ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣ