Advertisement

Category: ಅಂಕಣ

ಕದ್ದವರು, ಕಳಕೊಂಡವರು, ಕ್ಷಮಿಸಿ ಎಂದವರು

ವಸಾಹತುಶಾಹಿ-ಸಂಬಂಧಿತ ಅನ್ಯಾಯಗಳು ಮತ್ತು ತಾರತಮ್ಯಗಳು ಆಸ್ಟ್ರೇಲಿಯದಲ್ಲಿ ನಡೆಯುತ್ತಲೇ ಬಂದಿದೆ. ಆಸ್ಟ್ರೇಲಿಯಾದ ಅಬೊರಿಜಿನಲ್ ಜನರ ಕುಟುಂಬಗಳಿಂದ ಬಲವಂತವಾಗಿ ಅವರ ಮಕ್ಕಳನ್ನು ಬೇರ್ಪಡಿಸಿ ಬಿಳಿಯರ ಕುಟುಂಬಗಳಿಗೆ ಕೊಟ್ಟು ಬಿಳಿಯರ ಸಂಸ್ಕೃತಿ, ಶಿಕ್ಷಣ, ಕ್ರೈಸ್ತಧರ್ಮಗಳಿಗೆ ಅನುಗುಣವಾಗಿ ಮಕ್ಕಳು ಬೆಳೆಯುವಂತಾಗಿದ್ದು ಎರಡು ನೂರು ವರ್ಷಗಳಿಂದ ನಡೆದ ವಿಷಯ ಕಣ್ಣಿಗೆ ರಾಚುವಂತಿದೆ. ಅಂತಹ ‘ಸ್ಟೋಲನ್ ಜನರೇಶನ್’ ನ ದನಿಯಾಗಿದ್ದ ಅಂಕಲ್ ಆರ್ಚಿ ರೋಚ್ ಕಳೆದ ವಾರಾಂತ್ಯದಲ್ಲಿ ತೀರಿಕೊಂಡರು.  ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಪತ್ರ

Read More

ಹಾವು ಬಾವಲಿಗಳ ಸ್ನೇಹಕ್ಕೆ ಕಾಯುತ್ತ

ತೋಟದ ಮನೆಯಲ್ಲಿ ಎಲ್ಲವೂ ಆಹ್ಲಾದಕರವಾಗಿರಲಿಲ್ಲ! ಹಲವಾರು ಹೆದರಿಕೆ ಬರುವ ಸಂಗತಿಗಳೂ ಇದ್ದವು. ಬಯಲುಸೀಮೆಯಲ್ಲಿ ಹುಟ್ಟಿ ಬೆಳೆದಿದ್ದ ನನಗೆ ತುಂಬಾ ಪರಿಚಿತ ಪ್ರಾಣಿಗಳೆಂದರೆ ಮಂಗಗಳು. ನಮ್ಮ ಮೂಲವಾದ ಕುರ್ತಕೋಟಿ, ಕೆಂಪು ಮಂಗಗಳಿಗೆ ಎಷ್ಟು ಪ್ರಸಿದ್ಧ ಅಂದ್ರೆ ಅವಕ್ಕೆ “ಕುರ್ತಕೋಟಿ ಮಂಗ್ಯ” ಅಂತಲೇ ಬ್ರಾಂಡು. ಅದರ ಜೊತೆಗೆ ಹಾವುಗಳನ್ನು ಬಾಲ್ಯದಲ್ಲಿ ಲಕ್ಷ್ಮೇಶ್ವರದಲ್ಲಿದ್ದಾಗ ಆಗೀಗ ನೋಡಿದ್ದೆನಾದರೂ ಅವುಗಳ ಬಗ್ಗೆ ಭಯವಂತೂ ಇದ್ದೆ ಇತ್ತು. ಗುರುಪ್ರಸಾದ ಕುರ್ತಕೋಟಿ ಅಂಕಣ

Read More

ಮಲ್ಲಿಕಾ ಮತ್ತು ಸೌಭಾಗ್ಯಮ್ಮ … ಎರಡು ಪ್ರಸಂಗಗಳು

ಪ್ರತಿ ಅರ್ಧ ಗಂಟೆಗೊಮ್ಮೆ ಸಾವನ್ನು ಮಡಿಲಲ್ಲಿಟ್ಟುಕೊಂಡು ಸರಿದಾಡುವ ಆಂಬುಲೆನ್ಸ್ ಸದ್ದಿಗೆ ಸಂಕಟವಾಗುತ್ತಿದ್ದ ಹೊತ್ತದು. ಕೆಳಗಡೆ ಶುರುವಾದ ಗಿಜಿ ಗಿಜಿ ಕೇಳಿ ಕಿಟಕಿಯಿಂದ ನೋಡಿದಾಗ ಪೀಜಿ ಓನರ್ ಮತ್ತು ಅವನ ಹೆಂಡತಿ ಸುನೀತಕ್ಕ ಆಂಬುಲೆನ್ಸ್ ಹತ್ತುತ್ತಿದ್ದರು. ಕೂಡಲೇ ಕೆಳಗಡೆ ಓಡಿಹೋದೆ. ನಾನು ಹೋಗುವುದಕ್ಕೂ ಅಂಬುಲೆನ್ಸಿನ ಬಾಗಿಲು ಮುಚ್ಚುವುದಕ್ಕೂ ಸರಿ ಹೋಯಿತು. ಆ ಕ್ಷಣಭಂಗುರತೆಯ ಸಮಯದಲ್ಲೇ ನನಗೆ ಕಂಡಿದ್ದು ಕಣ್ಣೀರು ತುಂಬಿಕೊಂಡಿದ್ದ ಸುನೀತಕ್ಕನ ಕಣ್ಣುಗಳು…
ದಾದಾಪೀರ್‌ ಜೈಮನ್‌ ಅಂಕಣ

Read More

ಬಿಸಿಲ ಧಗೆ, ಚಳಿಯ ಹೊರೆಗಳ ನಡುವೆ ಅರಳುವ ಡಾಫೋಡಿಲ್ ಎಲ್ಲಿದೆ..

ಆಸ್ಟ್ರೇಲಿಯದ  ಹೊಸ ಪ್ರಧಾನಿಗಳು ಚುನಾಯಿತರಾದ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದ ಮೊದಲ ನಾಲ್ಕು ವಾರಗಳಲ್ಲಿ ಊರೂರು, ಅಂದರೆ ವಿದೇಶಗಳನ್ನು, ಸುತ್ತಿದ್ದಕ್ಕೆ ದೇಶದ ಜನರ ಮತ್ತು ವಿರೋಧಪಕ್ಷದ ಟೀಕೆಗೆ ಗುರಿಯಾದರು. ಆದರೂ ಕೂಡ ತಮ್ಮ ಪರದೇಶ ಸುತ್ತಾಟವನ್ನು ಸಮರ್ಥಿಸಿಕೊಂಡು ‘ನೆರೆಹೊರೆಯವರೊಂದಿಗೆ ಆಸ್ಟ್ರೇಲಿಯದ ರಾಜಕೀಯ ಸಂಬಂಧ ಕುಂಟುತ್ತಿತ್ತು, ನಾವು ಆ ದೇಶದ ನಾಯಕರ ವಿಶ್ವಾಸವನ್ನು ಕಳೆದುಕೊಂಡಿದ್ದೆವು. ಹಾಗಾಗಿ ಅವರೊಂದಿಗಿನ ಸಂಬಂಧವನ್ನು ಕುದುರಿಸಿಕೊಳ್ಳುವುದೂ ಮುಖ್ಯವಾಗಿತ್ತು.
ಡಾ. ವಿನತೆ ಶರ್ಮಾ ಅಂಕಣ

Read More

ಇಂಗ್ಲೆಂಡ್ ನ ವಿಶ್ವವಿದ್ಯಾಲಯಗಳ ಪಡಸಾಲೆಯಲ್ಲಿ

ಚಾರ್ಲ್ಸ್ ಡಾರ್ವಿನ್ ಓದಿದ್ದಾನೆ ಎನ್ನಲಾದ ಕ್ರೈಸ್ಟ್ ಕಾಲೇಜಿಗನೊಳಗೆ ಪ್ರವೇಶಿಸಿದೆ. ಅಲ್ಲಿ ಆತನ ಹತ್ತಾರು ಅಡಿಯಷ್ಟು ದೊಡ್ಡ ಅಮೃತಶಿಲೆಯ ಮೂರ್ತಿ ಇದೆ. ಕಾಲೀಜಿನಲ್ಲಿ ಇದ್ದ ಮಗನನ್ನು ನೋಡಲು ಬಂದಿದ್ದ ಆತನ ತಾಯಿಯ ಎದೆಮಟ್ಟದ ಮೂರ್ತಿಯೊಂದನ್ನೂ ಅಲ್ಲಿ ಇರಿಸಿದ್ದಾರೆ. ಅಲ್ಲಿಗೆ ನಾನು ಹೋಗಿದ್ದಾಗ ಯಾರೂ ಅಂದರೆ ಯಾರೂ ಇರಲಿಲ್ಲ, ಆದರೂ ಯಾವ ಕೋಣೆಯ, ಕಾಲೇಜಿನ ಬಾಗಿಲು ಹಾಕಿರಲಿಲ್ಲ. ಮುಖ್ಯದ್ವಾರದ ಬಳಿ ಒಬ್ಬಾತ ಒಳಹೋಗಲು ಬಯಸುವವರಿಗೆ ಒಂದು ಸಣ್ಣ ಬ್ರೋಷರ್ ಕೊಟ್ಟು ಕಳುಹಿಸುತ್ತಿದ್. ಕಂಡಷ್ಟೂ ಪ್ರಪಂಚ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ.

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ