Advertisement

Category: ಅಂಕಣ

ಕಾಡ ತೊರೆಯ ಜಾಡು “ಕಡಿದಾಳು ಶಾಮಣ್ಣ”

ಮನಸ್ಸು ಮಾಡಿದ್ದರೆ ಅಥವಾ ಹಣಸಂಪಾದನೆಯ ಮಾರ್ಗ ಹಿಡಿದದ್ದರೆ ದೊಡ್ಡ ಶ್ರೀಮಂತರಾಗಬಹುದಿತ್ತು. ಅವರು ಒಂದು ಕಾಲದಲ್ಲಿ ಸ್ಥಾಪಿಸಿದ್ದ ಪ್ರೆಸ್ಸಿನ ಮೂಲಕವೋ ಇಲ್ಲಾ ಕೃಷಿಯ ಮೂಲಕವೋ ಧಾರಾಳ ಹಣಗಳಿಕೆ ಮಾಡಬಹುದಾಗಿತ್ತು. ಅಥವಾ ಸಂಗೀತದಲ್ಲಿ ಮುಂದುವರೆದಿದ್ದರೆ ಸರೋದ್‌ನಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಬಹುದಾಗಿತ್ತು. ಹೋರಾಟದ ಹಾದಿಯಲ್ಲಿ ನಡೆಯುತ್ತಿರುವಾಗ ತಾನಾಗಿಯೇ ಬಂದ ಅವಕಾಶವನ್ನು ನಿರಾಕರಣೆ ಮಾಡದಿದ್ದರೆ ಶಾಸಕರಾಗಬಹುದಾಗಿತ್ತು ಅಥವಾ ಕಾಲೇಜು ಉಪನ್ಯಾಸಕರಾಗಬಹುದಾಗಿತ್ತು. ಆದರೆ ಅದ್ಯಾವುದೂ ಆಗದೇ ಸಾಮಾನ್ಯ ರೈತನ ಜೀವನ ನಡೆಸಿದರು.
ಗಿರಿಧರ್‌ ಗುಂಜಗೋಡು ಅಂಕಣ

Read More

ಭಾರತದ ಕ್ರಿಕೆಟ್‍ನ ಸ್ಪಿನ್ನರ್ಸ್‌ಗಳು – 2

ನಿಧಾನವಾಗಿ ನಡೆದು ಬಂದು ಬೋಲಿಂಗ್ ಮಾಡುತ್ತಿದ್ದ ಬೇಡಿ ಅವರ ಬೋಲಿಂಗ್‌ನಲ್ಲಿ ಬಹಳ ಚಾಣಾಕ್ಷರಾಗಿದ್ದರು ಮತ್ತು ನಿಸ್ಸೀಮರು. ಒಂದು ಬಾಲು ನಿಧಾನವಾಗಿ ಬಂದರೆ ಮತ್ತೊಂದು ರಭಸದಿಂದ ಬಂದು ವಿಕೆಟ್ ಉರುಳಿಸಿ ಹೋಗುವುದು! ಇಷ್ಟಾಗಿ ಅವರ ಬೋಲಿಂಗ್ ಶೈಲಿಯಲ್ಲಿ ಕಿಂಚಿತ್ತೂ ವ್ಯತ್ಯಾಸವಿರುತ್ತಿರಲಿಲ್ಲ! ಒಂದು ಓವರ್‌ನಲ್ಲಿ 6 ವಿಧವಾಗಿ ಬಾಲು ಮಾಡುವ ಪ್ರತಿಭೆ ಹೊಂದಿದ್ದ ಬೇಡಿಯವರ ಬೋಲಿಂಗ್‌ಅನ್ನು ಹೇಗೆ ಆಡುವುದಪ್ಪ ಎಂದು ಬ್ಯಾಟ್ಮನ್‌ರನ್ನು ಕಾಡುತ್ತಿತ್ತು, ಯಾಕೆಂದರೆ ಏನು ಮಾಡಿದರೂ ಅವರು ನಡೆಯುವ ಶೈಲಿ, ರೀತಿ, ಹಾವಭಾವ ಯಾವುದರಲ್ಲೂ ಬದಲಾವಣೆ ಇರುತ್ತಿರಲಿಲ್ಲ.
ಇ.ಆರ್. ರಾಮಚಂದ್ರನ್ ಬರೆಯುವ ಅಂಕಣ

Read More

‘ಒಂದು ಅಂಕ ಮುಗಿದು’ ಧ್ಯಾನಿಸುತ್ತಾ….

‘ತುಂಬೆಗಿಡ ಮತ್ತು ಹುಡುಗಿ’ ಸತ್ತು ಮಣ್ಣಾದ ಹುಡುಗಿಯೊಬ್ಬಳ ಸಮಾಧಿಮೇಲೆ ನೆಟ್ಟ ತುಂಬೆ ಗಿಡದ ವಿಷಯವಿರುವ ಕವಿತೆ. ಬದುಕಿನ ಉತ್ತರಗಳ ಹಂಗು ಹುಡುಗಿಗೂ, ತುಂಬೆಗಿಡಕ್ಕೂ ಇಲ್ಲ. ಬದುಕಿನ ನಶ್ವರತೆಗಳು, ಹುಟ್ಟು, ಸಾವಿನ ಕುರಿತು ಏಳುವ ಜಿಜ್ಞಾಸೆಗಳು ಕವಯತ್ರಿಯ ಭಾವಾತ್ಮಕತೆಯ ತೀವ್ರತರ ಹುಡುಕಾಟವನ್ನು ದರ್ಶಿಸುತ್ತವೆ. ‘ನೀನೆ ಒಂದು ಅಪೂರ್ಣ ಚಿತ್ರ’ ಕವಿತೆಯೂ ಬದುಕಿನ ಎಲ್ಲಾ ಕ್ಷಣಗಳಿಗೆ ಮುಖಾಮುಖಿಯಾಗಿ ಮುಪ್ಪಿನಲ್ಲಿ ಹಿಂದಿನ ಪುಟಗಳನ್ನು ತಿರುವಿಹಾಕುವ ವ್ಯಕ್ತಿಯೊಬ್ಬನ ಕುರಿತು ಬರೆದ ಕವಿತೆ.
ಅಭಿಷೇಕ್‌ ವೈ.ಎಸ್. ಬರೆಯುವ ಅಂಕಣ “ಕಾವ್ಯದ ಹೊಸ ಕಾಲ”

Read More

ಆಸ್ಟ್ರೇಲಿಯನ್ ಕ್ಯಾಂಪಿಂಗ್ ಕಥಾನಕಗಳು – ಭಾಗ ಎರಡು

ಹಾಗೆಂದು ನಮ್ಮೆಲ್ಲಾ ಅನುಭವಗಳು ಆನಂದತುಲಿತಮಯ, ಅದ್ಭುತರಮ್ಯ, ಲೋಕಾತೀತವಾದವೇನಲ್ಲ. ಹೆಚ್ಚಿನ ಬಾರಿ ಖುಷಿಖುಷಿಯಿಂದ ಕೂಡಿದ್ದರೂ, ಒಮ್ಮೊಮ್ಮೆ ಗೊಳೋ ಎಂದು ಅತ್ತಿರುವುದೂ ನಿಜ. ಇಂತಹ ಕ್ಯಾಂಪಿಂಗ್ ಸಾಹಸಗಳಲ್ಲಿ ಕೆಲವು ಬಾರಿ ಅಪರಿಚಿತ ದೇಶಗಳಲ್ಲಿ, ಸ್ಥಳಗಳಲ್ಲಿ ಪರಿಸ್ಥಿತಿ ಕೈಕೊಟ್ಟು ಕ್ಯಾಂಪಿಂಗ್ ಪಟು ಜೀಬೀ ಪೇಚಿಗೆ ಸಿಲುಕಿ, ನಾನು ನಮ್ಮ ಮಕ್ಕಳ ಮೈದಡವುತ್ತಾ ಕಂಗಾಲಾಗಿ ಕಣ್ಣೀರಿಟ್ಟಿದ್ದೂ ನಿಜ. ಆದರೂವೆ… ಧೈರ್ಯಗೆಡದೆ ಜರ್ಮನ್ ಪೊಲೀಸರಿಗೆ ಇಂಗ್ಲೀಷಿನಲ್ಲಿ ಉತ್ತರಿಸಿದ್ದಿದೆ.
ಡಾ. ವಿನತೆ ಶರ್ಮ ಬರೆಯವ “ಆಸ್ಟ್ರೇಲಿಯಾ ಪತ್ರ”

Read More

ಅಯ್ಯೋ ಸರ್ ಇಲ್ಲಿ ಹಲ್ಲಿಗಳು ಇವೆ!

ನನ್ನ ಬೆಂಗಳೂರಿನ ತರಬೇತಿಗಳು ಮುಗಿದ ತಕ್ಷಣ ನಾನು ರಾಮ್ ಇಬ್ಬರೂ ಕಾರಿನಲ್ಲಿ ಹಳ್ಳಿಗೆ ಹೊರಟೆವು. ಅದೇ ವಾರಾಂತ್ಯದಲ್ಲಿ ವಿನೋದ ಅವರಿಗೂ ಕೂಡ ಬರಲು ಹೇಳಿದ್ದೆ. ಅವರೂ ಹಳ್ಳಿಯಲ್ಲಿ ನಾವು ಸಧ್ಯ ವಾಸಕ್ಕಿದ್ದ ಹೊಸ ಮನೆಯನ್ನು ಇನ್ನೂ ನೋಡಿರಲಿಲ್ಲ. ಅದೂ ಅಲ್ಲದೆ ರಾಮನನ್ನು ಅವರಿಗೆ ಪರಿಚಯಿಸಿದಂತಾಗುತ್ತದೆ ಎಂಬುದು ನನ್ನ ಯೋಚನೆ. ಬೆಂಗಳೂರಿನಿಂದ ನಮ್ಮ ಹಳ್ಳಿಗೆ ಹೋಗಲು ಹೆಚ್ಚು ಕಡಿಮೆ ಏಳು ಗಂಟೆಗಳು ಬೇಕು. ರಾಮನಿಗೆ ಅದು ಮೊದಲ ಆಘಾತ!
ಗುರುಪ್ರಸಾದ್‌ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣ

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ