Advertisement

Category: ಅಂಕಣ

ಆಸ್ಟ್ರೇಲಿಯಾದ ಹೊಸ ರಾಜ, ಹೊಸ ಭವಿಷ್ಯದ ಕನಸುಗಳು

ತನ್ನದೇ ಆದ ‘ಸೂರ್ಯ ಮುಳುಗದ’ ನಾಡು ಯುನೈಟೆಡ್ ಕಿಂಗ್ಡಮ್ ಸಾಮ್ರಾಜ್ಯದ ಅಧಿಪತಿಯಾಗಿದ್ದ, ಅದರ ಜೊತೆಗೆ ಐವತ್ತಾರು ಕಾಮನ್ವೆಲ್ತ್ ರಾಷ್ಟ್ರಗಳ ನಾಯಕಿಯಾಗಿದ್ದ ರಾಣಿ ಎರಡನೆ ಎಲಿಝಬೆತ್ ಕೂಡ ಹೀಗೆಯೆ ಎಪ್ಪತ್ತು ವರ್ಷಗಳ ಸುದೀರ್ಘ ಕಾಲದಲ್ಲಿ ‘ಮುಳುಗದ’ ಸೂರ್ಯನಂತೆ ರಾರಾಜಿಸುತ್ತ ಸಾಮ್ರಾಜ್ಞಿಯಾಗಿದ್ದರು. ‘ನನ್ನ ಜೀವನವನ್ನು ನಿಮ್ಮ ಸೇವೆಗಾಗಿ ಮುಡಿಪಿಟ್ಟಿದ್ದೀನಿ’ ಎನ್ನುತ್ತಾ ಸದಾಕಾಲ ತಮ್ಮ ಕಾರ್ಯಕ್ಷಮತೆ ತೋರಿದರು ಎನ್ನುವುದೀಗ ಇಡೀ ಪ್ರಪಂಚದ ಜನರಿಗೆ ಅತ್ಯುತ್ತಮ ಉದಾಹರಣೆಯಾಗಿದೆ. ಡಾ. ವಿನತೆ ಶರ್ಮಾ ಬರೆಯುವ ‘ಆಸ್ಟ್ರೇಲಿಯಾ ಪತ್ರ’

Read More

ನವಿರು ಹಾಸ್ಯದ ನುಡಿತೋರಣ

ಈ ಪುಸ್ತಕದ ನಿಜವಾದ ಸತ್ವ ಇರುವುದು ಅಮೆರಿಕಾದ ಜಾಗಗಳ ವರ್ಣನೆಯಲ್ಲಲ್ಲ. ಅವರು ಅಮೆರಿಕಾ ಮತ್ತು ಕೆನಡಾ ಪ್ರವಾಸವನ್ನು ಹೇಗೆ ಅರ್ಥಪೂರ್ಣವಾಗಿ ಬಳಸಿಕೊಂಡರು ಅನ್ನುವುದರಲ್ಲಿ. ಅವರ ಪ್ರತಿ ನಡೆ ನುಡಿಯಲ್ಲೂ ಅವರ ವ್ಯಕ್ತಿತ್ವದ ದರ್ಶನವಾಗುತ್ತದೆ. ಹಾಗಂತ ಎಲ್ಲವೂ ಗಂಭೀರವಾಗಿಯೇ ಸಾಗುತ್ತದೆ ಅಂತ ಅಲ್ಲ, ತಪ್ಪಿ ಅವರು ಕೆಎಫ್‌ಸಿ ಚಿಕನ್ ತಿನ್ನಲು ಹೋದ ಪ್ರಸಂಗ, ಆಮೇಲೆ ಡೋನಟ್ ಪರಿಚಯವಿಲ್ಲದ ಅವರು ಅನುಮಾನವೇ ಬೇಡವೆಂದು ತಿನ್ನದಿರುವುದು .. ಹೀಗೆ ಅಲ್ಲಿನ ಅನೇಕ ಘಟನೆಗಳನ್ನು ನವಿರು ಹಾಸ್ಯದಿಂದ ವರ್ಣಿಸುತ್ತಾರೆ.

Read More

ಕುದ್ರಿ ಕುದ್ರಿನ…ಕತ್ತಿ ಕತ್ತಿನ….!

ಬೀಜಗಣಿತವನ್ನು ಕಲಿಸುತ್ತಿದ್ದಾಗ ಮೇಷ್ಟ್ರು 4x ಗೆ 3y ಸೇರಿಸಿದರೆ ಎಷ್ಟಾಗುತ್ತದೆ ಎನ್ನುವುದನ್ನು ಅವರೆಷ್ಟು ಬಾರಿ ಅರ್ಥ ಮಾಡಿಸಲು ಪ್ರಯತ್ನಿಸಿದ್ದರು. ಆದರೆ ನಿಷ್ಕ್ರಿಯಗೊಂಡಂತಿದ್ದ ನಮ್ಮ ಮೆದುಳೊಳಗೆ ಇಳಿಯದೆ ನಮ್ಮೆಲ್ಲರ ಉತ್ತರ ‘ಏಳು’ ಎಂದೇ ಇರುತ್ತಿತ್ತು.  ಅವರಿಗೆ ಕೊನೆ ಕೊನೆಗೆ ಕೋಪ ಬಂದರೂ ಅದನ್ನು ತೋರಿಸಿಕೊಳ್ಳದೇ ಭಿನ್ನವಾದ ಉದಾಹರಣೆಯನ್ನು ನೀಡುತ್ತಾ “ಹೆಲೊ ಜೆಂಟಲ್‌ಮೆನ್ಸ್, ನಾಲ್ಕು ಕುದ್ರಿಗಳೊಳಗ ಮೂರು ಕತ್ತಿಗಳನ್ನ ಕುಡಿಸಿದ್ರ ಎಷ್ಟ್ ಆಗ್ತೆತಿ” ಅಂದಾಗಲೂ ನಾವು ಏಳು ಅಂತಲೇ ಒದರಿಬಿಡುತ್ತಿದ್ದೆವು. ನಮ್ಮ ದಡ್ಡತನಕ್ಕೆ ಅವರು ಹಣಿ ಹಣಿ ಜಜ್ಜಿಕೊಂಡು ಮರುಕಪಟ್ಟು “ನಾಲ್ಕು ಕುದ್ರಿಗೆ ಮೂರು ಕತ್ತಿ ಸೇರಿದ್ರ ಏಳು ಆಗಲ್ಲ ಕಣ್ರಲೇ, ಕುದ್ರಿ ಕುದ್ರಿನ… ಕತ್ತಿ ಕತ್ತಿನ…. ಅವು ಯಾವತ್ತು ಒಂದ ಅಲ್ಲ ಎನ್ನುತ್ತಿದ್ದರು. ʻತಳಕಲ್‌ ಡೈರಿʼಯಲ್ಲಿ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ ಇಸ್ಮಾಯಿಲ್‌ ತಳಕಲ್‌

Read More

ಸಾವೇ ಇಲ್ಲದ ಗಿಡ ಮತ್ತು ಹ್ಯುಮಸ್ಸು

ಆ ಮಣ್ಣಿನ ದಾರಿಯ ಆಚೀಚೆ ಬೇರೆಯವರ ಹೊಲಗಳು ಇವೆ. ಎಲ್ಲರೂ ಸಣ್ಣ ಸಣ್ಣ ಹಿಡುವಳಿದಾರರು. ಅಲ್ಲಿರ್ಪ ಗುತ್ತೆಪ್ಪ, ದುರ್ಗಪ್ಪ, ಬಸಪ್ಪ, ಮಾಲತೇಶ ಹೀಗೇ ಒಬ್ಬೊಬ್ಬರೇ ಕ್ರಮೇಣ ಪರಿಚಯವಾದರು. ನಡೆದುಕೊಂಡು ಹೋದರೆ ಇದೊಂದು ಲಾಭ ಅಲ್ಲವೇ? ಅಲ್ಲಿನ ಬಹಳಷ್ಟು ರೈತರು ಬೆಳೆಯುವ ಬೆಳೆಗಳು ಒಂದೋ ಭತ್ತ, ಮುಸುಕಿನ ಜೋಳ ಇಲ್ಲವೆ ಶುಂಠಿ. ಅಡಿಕೆಗೆ ಬೆಲೆ ಬರುತ್ತಿದೆ ಅಂತ ಕೆಲವರು ಇತ್ತೀಚಿಗೆ ತಮ್ಮ ಗದ್ದೆಯನ್ನು ತೋಟವನ್ನಾಗಿ ಮಾಡುತ್ತಿದ್ದರು. ಆದರೆ ಯಾರೂ ಕೂಡ ಅಲ್ಲಿ ಸಮಗ್ರ ಕೃಷಿ ಮಾಡಿರಲಿಲ್ಲ. ಎಲ್ಲರದೂ ಒಂದೇ ಬೆಳೆ. ಬೆಲೆ ಬಂದರೆ ಲಾಟರಿ ಇಲ್ಲವಾದರೆ ದೇವರೇ ಗತಿ ರೀ!
ಗುರುಪ್ರಸಾದ್‌ ಕುರ್ತಕೋಟಿ ಬರೆಯುವ ‘ಗ್ರಾಮ ಡ್ರಾಮಾಯಣ’ ಅಂಕಣ

Read More

ಮಡಿವಂತಿಕೆಯ ರಂಗಸ್ಥಳದಲ್ಲಿ ಹೊಸ ಪ್ರಸಂಗಗಳ ಗ್ರಹಿಕೆ

ಹೊಸ ಪ್ರಸಂಗಗಳ ಬಗ್ಗೆ ಸಾಮಾನ್ಯವಾಗಿ ಒಂದು ಸೀಮಿತ ಗ್ರಹಿಕೆಯಿರುತ್ತದೆ. ಯಕ್ಷಗಾನವೆಂದರೆ ಅದು ಹಳೆಯ ಕಲೆ, ಅದಕ್ಕೆ ನೂರಾರು ವರ್ಷಗಳ ಪರಂಪರೆಯಿದೆ. ಅದು ಪುರಾಣ ಕತೆಗಳ ಮೌಲ್ಯ ಪ್ರಸಾರಕ್ಕಾಗಿದೆ, ನಮ್ಮ ಜೀವನಕ್ಕೆ ಬೇಕಾಗುವ ಮೌಲ್ಯವೇ ಪುರಾಣಗಳಲ್ಲಿವೆ ಮತ್ತು ಹಳೆಯದೆಲ್ಲವನ್ನು ರಕ್ಷಿಸಬೇಕು ಎನ್ನುವ ನಂಬಿಕೆಯಿಂದಾಗಿ. ಜೊತೆಗೆ ಅದೊಂದು ಗಂಭೀರವಾದ ಕಲೆ ಎನ್ನುವ ದೃಷ್ಟಿಕೋನವೂ ಸೇರಿಕೊಂಡಿದೆ. ಗಂಭೀರವೆಂದರೆ ರಂಜನೆಯಿಲ್ಲದ್ದು ಅನ್ನುವುದು ಒಮ್ಮೊಮ್ಮೆ ಅವರ ಮಾತುಗಳಲ್ಲಿ ಧ್ವನಿಸುತ್ತದೆ. ಇವೆಲ್ಲ ನಂಬಿಕೆಗಳು ವಸಾಹತಿನ ಕಾಲದಲ್ಲಿ ಹುಟ್ಟಿದ ರಾಷ್ಟ್ರೀಯತೆಯ ಕಲ್ಪನೆಯೊಟ್ಟಿಗೆ ಬಂದದ್ದೆಂದು ಕಾಣುತ್ತದೆ. ಯಕ್ಷಾರ್ಥ ಚಿಂತಾಮಣಿ ಅಂಕಣದಲ್ಲಿ ಕೃತಿ ಪುರಪ್ಪೇಮನೆ ಲೇಖನ ಇಲ್ಲಿದೆ. 

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ