Advertisement

Category: ಅಂಕಣ

ಚಿತ್ತಾಲರ ಕಾದಂಬರಿ ಪ್ರಪಂಚದಲ್ಲಿ ಒಂದೆರಡು ಹೆಜ್ಜೆ

ಕಥಾನಾಯಕ ಪುರುಷೋತ್ತಮ, ಆತನ ತಾಯಿ ಮತ್ತು ಬಳಗದ ನಡುವೆ ನಡೆಯುವ ಕಥಾನಕಗಳೇ ಈ ಕಾದಂಬರಿಯ ವಸ್ತು. ಜೊತೆಗೆ ಒಂದು ಮಹಾನಗರ ಮತ್ತೂ ದೊಡ್ಡದಾಗಿ ವಿಸ್ತರಣೆಯಾಗಬೇಕಾದರೆ ನಡೆಯುವ ತಲ್ಲಣಗಳು, ಹಣ ಅಧಿಕಾರದ ಮುಂದೆ ಮಾನವೀಯತೆ ಗೌಣವಾಗಿ ತನ್ನ ಸ್ವಾರ್ಥಕ್ಕಾಗಿ ಯಾವ ಕೆಲಸಕ್ಕೂ ಇಳಿಯಬಹುದಾದ ಮನುಜನ ಕ್ರೂರತನ, ತನ್ನ ಪ್ರೀತಿಯ ನೆಲವನ್ನು ಉಳಿಸಿಕೊಳ್ಳಲು ಎಲ್ಲಾ ಸ್ವಾರ್ಥಗಳ ಬಿಟ್ಟು ಮಾಡುವ ಹೋರಾಟ ಎಲ್ಲವೂ ಬಹಳ ಸುಂದರವಾಗಿ‌ ನಿರೂಪಿತಗೊಂಡಿದೆ
ಓದುವ ಸುಖ ಅಂಕಣದಲ್ಲಿ ಯಶವಂತ ಚಿತ್ತಾಲರ ಮೂರು ಕೃತಿಗಳ ಕುರಿತು ಬರೆದಿದ್ದಾರೆ ಗಿರಿಧರ್ ಗುಂಜಗೋಡು

Read More

ವಿಯೆಟ್ನಾಮ್ ನಲ್ಲಿರುವ ಚಂಪಾ ಸಾಮ್ರಾಜ್ಯದ ನೋಟಗಳು

ನಾಲ್ಕನೇ ಶತಮಾನದಿಂದ ೧೩ ನೇ ಶತಮಾನದ ವರೆಗೂ ಆಳಿದ ಚಂಪಾ ಸಾಮ್ರಾಜ್ಯವು ಆಮೇಲೆ ಚೈನಿಸ್ , ಡ ವಿಯೆಟ್ ಹಾಗೂ ಪ್ರಬಲರಾದ ಕಾಂಬೋಡಿಯಾದ ಖ್ಮೇರ್ ರಾಜರುಗಳಿಗೆ ಮಣಿದು ಕೊನೆಗೆ ಅಳಿದೇಹೊಯಿತು. ಅವರ ಭೌಗೋಳಿಕ ಪ್ರದೇಶಗಳನ್ನು ಇಂದ್ರಪುರ, ಅಮರಾವತಿ, ವಿಜಯಾ ಕೌತುರಾ ಮತ್ತು ಪಾಂಡುರಂಗ ಎಂದು ಕರೆಯುತ್ತಿದ್ದರು. ಮಿಸಾನ್ ಕಣಿವೆಯು ಅಮರಾವತಿಯ ಭಾಗವಾಗಿತ್ತು. ಅಲ್ಲಿಂದ ಅವರು ಶತ್ರುಗಳಿಂದ ಹಿಮ್ಮೆಟ್ಟಿ ಹೋದಂತೆ ಕಣಿವೆಯೂ ಅನಾಥವಾಗುತ್ತಾ ಹೋಯಿತು. ‘ದೇವ ಸನ್ನಿಧಿ’ ಅಂಕಣದಲ್ಲಿ ಗಿರಿಜಾ ರೈಕ್ವ ವಿಯೆಟ್ನಾಂ ಕುರಿತು ಬರೆದಿದ್ದಾರೆ. 

Read More

ಪಿಜ್ಜಾ ಡೆಲಿವರಿ ಹುಡುಗನೂ ಹಾಗೂ ಓಲ್ಡ್ ಮಾಂಕ್ ಪರಮಾತ್ಮನೂ

ಹೊರಗಡೆಯಿಂದ ನಿಂತು ನಾವು ಸಾವಿರ ಹೇಳಬಹುದು. ಆದರೆ ಒಳಗಿದ್ದು ಕೆಂಡ ಹಾಯುತ್ತಿರುವವರ ಪರಿಸ್ಥಿತಿಗಳು ಭಿನ್ನವಾಗಿರುತ್ತವೆ. ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ಹಿತ ಎನ್ನುವ ಹಾಗೆ; ಏಕ್ತಾ ಕಪೂರ್ ಸೀರಿಯಲ್ಲುಗಳಲ್ಲಿರುವಂತೆ ಅದೆಷ್ಟೋ ಬಾರಿ ಬೇರೆಯಾಗಿ ಮತ್ತೆ ಮತ್ತೆ ಕೂಡಿಕೊಳ್ಳಲೂಬಹುದು. ಮಾತಿನ ಕೊನೆಯಲ್ಲಿ ‘ಹೋಗ್ಲಿ ಬಿಡೋ ಯಣ. ಬಿಟ್ಟೆ ಬಿಡ್ತೀನಿ ಅತಾಗ. ಹೊಯ್ಕೋತ ಹೋಗ್ಲಿ!’ ಎಂದೇನೋ ಅಂದ. ದಾದಾಪೀರ್‌ ಜೈಮನ್ ಬರೆಯುವ ಜಂಕ್ಷನ್‌ ಪಾಯಿಂಟ್‌ ಅಂಕಣ

Read More

ದೂರದೂರಿನ ನೆಂಟತನವೂ, ನೆರೆಹೊರೆಯವರ ಸ್ನೇಹಹಸ್ತವೂ

ಆಸ್ಟ್ರೇಲಿಯ ವಸಾಹತುಶಾಹಿ ಆಡಳಿತದಿಂದ ಕ್ರಮೇಣ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬದಲಾದರೂ ದೇಶವನ್ನು ಆಳುವುದು ಬಿಳಿಯ ರಾಜಕಾರಣಿಗಳೆ ಎನ್ನುವುದು ಸರ್ವೇಸಾಮಾನ್ಯ ಸತ್ಯ. ಇಂಗ್ಲಿಷ್ ಭಾಷೆಯ ಜೊತೆ ಆಮದಾಗಿ ಬಂದಿದ್ದು ವ್ಯವಸ್ಥೆ. ಹೀಗಾಗಿ ಆಸ್ಟ್ರೇಲಿಯಾವು ಇಂಗ್ಲಿಷ್ ಭಾಷೆಯ ಪಾಶ್ಚಾತ್ಯ ದೇಶ. ಈ ಪಟ್ಟದೊಡನೆ ಬಳುವಳಿಯಾಗಿ ಬಂದಿರುವುದು, ನಂಬಿರುವುದು ದೂರದೂರಿನ ನೆಂಟತನ. ಮಾತೃದೇಶ ಬ್ರಿಟನ್, ಅಣ್ಣನಾಗಿ ಅಮೆರಿಕ, ಕಿರಿತಂಗಿಯಾಗಿ ನ್ಯೂ ಝಿಲಂಡ್, ಬಂಧುಬಾಂಧವರು ಯುರೋಪಿಯನ್ ದೇಶದವರು.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಜೋಕು ಮಾಡಲು ಬಳಸುತ್ತಿದ್ದ ಪದದ ನಿಜ ಅರ್ಥ ತಿಳಿಯಿತು

ಮೋಹನ ಸ್ವಾಮಿ ಒಂದು ಕಥಾ ಸಂಕಲನವಾದರೂ ನಿಧಾನವಾಗಿ LGBT ಸಮುದಾಯದೆಡೆಗಿನ ನನ್ನ ಮನೋಭಾವನೆಯನ್ನು ಬದಲಾಯಿಸಿಕೊಳ್ಳಲು ಸಹಾಯಮಾಡಿತು. ನನ್ನೆದುರು ಆ ಸಮುದಾಯದ ವ್ಯಕ್ತಿಗಳು ಸಿಕ್ಕಾಗ ಮಾಮೂಲಿ ಗಂಡು ಹೆಣ್ಣುಗಳ ಹಾಗೇ ಮಾತನಾಡಲು, ಹರಟೆ ಹೊಡೆಯಲು ಸಾಧ್ಯವಾಯಿತು. ಹಾಗಾದರೆ ನಾನು ಈ ವಿಚಾರಲ್ಲಿ ನನ್ನ ಯೋಚನೆಯನ್ನು ನೂರಕ್ಕೆ ನೂರು ಬದಲಿಸಿಕೊಂಡೆನೇ? ಎಂದು ಕೇಳಿದರೆ ಉತ್ತರ ಗೊತ್ತಿಲ್ಲ, ಅಥವಾ ಇಲ್ಲವೆನ್ನಿಸುತ್ತದೆ.
ಓದುವ ಸುಖ ಅಂಕಣದಲ್ಲಿ ವಸುಧೇಂದ್ರರ “ಮೋಹನಸ್ವಾಮಿ” ಕೃತಿಯ ಕುರಿತು ಬರೆದಿದ್ದಾರೆ ಗಿರಿಧರ್ ಗುಂಜಗೋಡು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ