Advertisement

Category: ಅಂಕಣ

ಯೂಲಿಸಿಸ್ ಕಾದಂಬರಿಗೆ ಶತಮಾನದ ಮೆರುಗು

ಇಂಗ್ಲೀಷ್ ಭಾಷೆಯ ಅತಿ ಕ್ಲಿಷ್ಟ ಕಾದಂಬರಿ ಎಂದೇ ಹೆಸರುವಾಸಿಯಾಗಿರುವ ಜೇಮ್ಸ್ ಜಾಯ್ಸ್‌ರ ಯೂಲಿಸಿಸ್ ಬಗ್ಗೆ ಎಷ್ಟು ಬರೆದರೂ ಸಾಕಾಗದೇನೋ. ಹದಿನೆಂಟು ಖಂಡಗಳಲ್ಲಿ ಒಂದೊಂದು ಅಧ್ಯಾಯವನ್ನೂ ಒಂದೊಂದು ಶೈಲಿಯಲ್ಲಿ ಬರೆಯಲಾಗಿದೆ. ಒಂದು ಚಾಪ್ಟರ್ ಸ್ವಗತದ ಶೈಲಿಯಲ್ಲಿದ್ದರೆ ಇನ್ನೊಂದು ಪ್ರಶ್ನೋತ್ತರದ ಮಾದರಿಯಲ್ಲಿದೆ. ಮತ್ತೊಂದು ನಾಟಕದ ಶೈಲಿಯಲ್ಲಿದೆ ಎನ್ನುವ  ಕಾವ್ಯಾ ಕಡಮೆ , ಈ ಓದು ಸುಲಭಕ್ಕೆ ದಕ್ಕುವಂತಹುದಲ್ಲ ಎನ್ನುತ್ತಾರೆ.  1922ನೇ ಇಸವಿಯಲ್ಲಿ ಪ್ಯಾರಿಸ್ಸಿನ ಶೇಕ್ಸ್‌ಪಿಯರ್…

Read More

ಹಬ್ಬಗಳಿರಬೇಕು… ಬದುಕನ್ನು ಸವಿಯಲು

ಹಬ್ಬಗಳ ಮಹತ್ವವನ್ನು ಇತ್ತೀಚಿನ ದಿನಗಳಲ್ಲಿ ನಾವು ಕಳೆದುಕೊಳ್ಳುತ್ತಿದ್ದೇವೆ. ಮಕ್ಕಳಿಗೆ ಹಬ್ಬಗಳ ಹೆಸರೆ ಸರಿಯಾಗಿ ಗೊತ್ತಾಗದಾಗಿರುವುದು ವಿಪರ್ಯಾಸ. ಹಬ್ಬಗಳ ಪರಿಚಯವೇ ತಿಳಿಯದಿದ್ದಾಗ, ಅದರ ಪರಂಪರೆ
ಅರಿಯುವುದು ದೂರದ ಮಾತು.  ಯಾವುದೇ ಹಬ್ಬವಿರಲಿ, ಯಾವುದೇ ಜನಾಂಗಕ್ಕೆ ಸೇರಿದ್ದಾಗಿರಲಿ, ಅದರ ಬಗ್ಗೆ ತಿಳಿದಾಗ ಆಚರಣೆ ಬಗ್ಗೆ ಗೌರವ ಹೆಚ್ಚುತ್ತದೆ. ಹಿಂದುಗಳಾದವರು ಕ್ರೈಸ್ತರ ಹಬ್ಬಕ್ಕೆ ನಿರ್ಲಕ್ಷ್ಯ ಮಾಡುವುದು, ಕ್ರೈಸ್ತರು ಮುಸಲ್ಮಾನರ ಹಬ್ಬಕ್ಕೆ ಅಗೌರವ ತೋರುವುದು, ಮುಸಲ್ಮಾನರು ಹಿಂದುಗಳ ಹಬ್ಬಕ್ಕೆ…

Read More

ಇರುಳಿನ ಹೊಸ ಬಣ್ಣ

ಆಗಾಗ ಊರಿನ ಬಂಧುಗಳು ತಂದು ಕೊಡುವ ಕುರ್ಲಿ ಸರಿಯಾಗಿ ಸ್ವಚ್ಛಗೊಳಿಸಿ ಹದವಾದ ಮಸಾಲೆಯೊಂದಿಗೆ ಬೇಯಿಸುವ ಕೆಲಸವು ರಾತ್ರಿಯಾದೊಡನೆ ಶುರುವಾಗುತ್ತದೆ. ಜೋರು ಮಳೆ ಬೀಳುವಾಗ, ಚಳಿ ತನ್ನ ಚಹರೆಯ ತೋರಿಸುತ್ತಿರುವಾಗ ಕಾಜುವಾಡಾದ ಯಾವುದೋ ಓಣಿಯ ಮನೆಯ ಬೆಂಕಿ ಒಲೆಯಲ್ಲಿ ತನ್ನ ತಾ ಹಸಿಯಾಗಿಯೆ ಕೆಂಡದಲ್ಲಿ ಸುಟ್ಟುಕೊಳ್ಳುವ ಏಡಿ ತನ್ನ ಅಮೋಘ ಪರಿಮಳವನ್ನು ಸುತ್ತಲಿನ ಲೋಕಕ್ಕೂ ಹರಡುತ್ತದೆ.

Read More

ಪ್ರತಿಭಟನೆಯ ದೃಷ್ಟಿಕೋನ ಮೀರಿ ಯೋಚಿಸುವ ಕೊಡಗಿನ ಗೌರಮ್ಮ

ಮೊದಲ ತಲೆಮಾರಿನ ಲೇಖಕಿಯರು ವಿಧವಾವಿವಾಹ, ಶೋಷಣೆ, ಸ್ತ್ರೀ ಸ್ವಾತಂತ್ರ್ಯ ಮೊದಲಾದ ವಿಷಯಗಳನ್ನು ಕುರಿತು ಬಹಳ ದಿಟ್ಟವಾಗಿ ಬರೆದಿದ್ದರೂ ಸ್ತ್ರೀ ವ್ಯಕ್ತಿತ್ವವನ್ನು ಕೇವಲ ಶೋಷಣೆ ಹಾಗೂ ಅದರ ವಿರುದ್ಧ ಪ್ರತಿಭಟಿಸುವ ಹೆಣ್ಣಿನ ಮಾದರಿಯನ್ನು ಹೊರತುಪಡಿಸಿ ನೋಡಲು ಸಾಧ್ಯವಾದರೆ ಅವಳನ್ನು ಹೊಸದಾದ ದೃಷ್ಟಿಕೋನದಲ್ಲಿ ಅರಿಯಲು ಸಾಧ್ಯವಾಗುತ್ತದೆ ಎಂಬುದು  ಕೊಡಗಿನ ಗೌರಮ್ಮ ಅವರ ನಿಲುವಾಗಿತ್ತು. ಈ ಕಾರಣಕ್ಕಾಗಿ ಹೆಣ್ಣೊಬ್ಬಳು ಬದುಕಿದ, ಭಾವಿಸಿದ ಅನುಭವಗಳನ್ನು ಕುರಿತು ಬರೆದು…

Read More

ಚೆಕೊವ್‌ರ ಏಳು ಅಪರೂಪದ ಕತೆಗಳು

ಮಗಳೊಂದಿಗೆ ಒಂದು ದಿನ ಕಳೆಯುವ ಸುಖ ಈ ಎಲ್ಲ ವೈಭವಕ್ಕಿಂತ ಮಿಗಿಲಾದುದು ಎಂದು ಕನಸು ಕಾಣುತ್ತ ದಿನ ಮುಗಿಸುತ್ತಿರುತ್ತಾಳೆ ನತಾಲ್ಯಾ. ಅಷ್ಟರಲ್ಲಿ ಅವಳ ಮರಿ ದೆಲ್, ಅಂದರೆ ಪತಿ ದೇವರ ಆಗಮನವಾಗುತ್ತದೆ. ಸಣ್ಣದೊಂದು ಕೆಲಸದಲ್ಲಿದ್ದ ಆಕೆಯ ಗಂಡ ನಿಕಿಟಿನ್ ಹೆಂಡತಿ ಪ್ರಸಿದ್ಧಳಾಗುತ್ತಲೇ ಕೆಲಸ ಬಿಟ್ಟು ಅವಳ ಹಣದಲ್ಲೇ ಐಶಾರಾಮಿ ಜೀವನ ನಡೆಸುತ್ತಿದ್ದಾನೆ. ಹೆಚ್ಚಿನ ಹಣಕ್ಕಾಗಿ ಪೀಡಿಸುತ್ತಿದ್ದಾನೆ. ನತಾಲ್ಯಾ ಎಷ್ಟು ಬಿಡಿಸಿಕೊಳ್ಳಲು ಯತ್ನಿಸಿದರೂ…

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ