Advertisement

Category: ದಿನದ ಅಗ್ರ ಬರಹ

ಸಮರ್ಥ ಕೆಲಸದ ಗುಟ್ಟು… ಎಂದಾದರೂ ಆದೀತೇ ರಟ್ಟು?: ಎಲ್.ಜಿ.ಮೀರಾ ಅಂಕಣ

ಆ ಇಬ್ಬರು ಹಿರಿಯ ಅಧ್ಯಾಪಕಿಯರ ಮುಖ ನೋಡಿದೆ. ಅವರಲ್ಲೊಬ್ಬರು `ಹೇ… ಸುಲಭ ಇದು. ನೋಡಿ, ಒಬ್ರು ಈ ಕಡೆ, ಇನ್ನೊಬ್ರು ಆ ಪಕ್ಕದ ಕುರ್ಚೀಲಿ ಕೂತ್ಕೊಳಿ. ನಾನು ಇಲ್ಲಿ ಕೂತ್ಕೋತೀನಿ. ನೂರರಿಂದ ಶುರುವಾಗೋ ಅರ್ಜಿ ಎಲ್ಲಾ ನೀವು ತಗೊಳ್ಳಿ, ಇನ್ನೂರರಿಂದ ಶುರುವಾಗೋದು ನೀವು, ಮುನ್ನೂರರಿಂದ ಶುರುವಾಗೋದು ನಾನು ತಗೋತೀನಿ.. ಬೇಗ ಬೇಗ ಇವುಗಳನ್ನ ನಾವು ಪ್ರತ್ಯೇಕ ಮಾಡ್ಬಹುದು’ ಅಂದರು. ಅದೇ ರೀತಿಯಲ್ಲಿ ಕೆಲಸ ಶುರುವಾಗಿಯೇ ಹೋಯಿತು, ಮತ್ತು ಹತ್ತು-ಹದಿನೈದು ನಿಮಿಷಗಳಲ್ಲಿ ಮುಗಿದೇ ಹೋಯಿತು!!
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ತಾರನೆಯ ಬರಹ

Read More

ಭಕ್ತೆ-ಕಾವ್ಯ: ಸುಕನ್ಯಾ ಕನಾರಳ್ಳಿ ಅಂಕಣ

ಪ್ರಾಪಂಚಿಕ ಮದುವೆಗೆ ಬೆಚ್ಚಿ ಬೀಳುತ್ತಿದ್ದ ನಿದರ್ಶನಗಳಲ್ಲಿ ಸುಮಾರು ಹದಿನೇಳನೆಯ ಶತಮಾನದ ಕೇರಳದಲ್ಲಿದ್ದ ಅನುಭಾವಿನಿ ನಂಗ ಪೆಣ್ಣು ಒಂದು ಉತ್ತಮ ಉದಾಹರಣೆ. ಕೊಚ್ಚಿನ್ ರಾಜಾಸ್ಥಾನವಾದ ತ್ರಿಪ್ಪುನಿತ್ತುರದಲ್ಲಿದ್ದ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ್ದ ಈಕೆಯ ಮದುವೆಯ ದಿನ ಭರ್ಜರಿ ಮೆರವಣಿಗೆಯಲ್ಲಿ ವಧುವಿನ ಮನೆಗೆ ಬರುತ್ತಿದ್ದ ವರನಿಂದ ತಪ್ಪಿಸಿಕೊಳ್ಳಲು ಓಡಿ ಹೋಗಿ ತ್ರಿಪ್ಪುನಿತ್ತುರದಲ್ಲಿದ್ದ ದೇವಸ್ಥಾನದ ವಿಷ್ಣುವಿನಲ್ಲಿ ಲೀನವಾಗಿದ್ದಳು. ಈಗಲೂ ನಂಗ ಪೆಣ್ಣು ಹಬ್ಬದ ದಿನದಂದು ಮೂರ್ತಿಯನ್ನು ವರನಾಗಿ ಮೆರವಣಿಗೆಯಲ್ಲಿ ಅವಳ ತಂದೆಯ ಮನೆಗೆ ಹೊತ್ತೊಯ್ಯಲಾಗುತ್ತದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಆರನೆಯ ಬರಹ

Read More

ಸುಂದರ ಕಾಡಿನ ರೋಚಕ ಕಥೆಗಳು ಭಾಗ -೩: ರೂಪಾ ರವೀಂದ್ರ ಜೋಶಿ ಸರಣಿ

ಈ ಹೂವು ಪಾರಿಜಾತದಂತೇ ತಾನೇ ತಾನಾಗಿ ಮರದಿಂದ ಉದುರುವಂಥದ್ದು. ಅದಕ್ಕೇ ನಾವೆಲ್ಲಾ ಬೆಳಗ್ಗೆ ಬೇಗನೆ ಎದ್ದು, ಮುಖ ತೊಳೆದವರೇ, ಆ ಮರದತ್ತ ಓಡುತ್ತಿದ್ದೆವು. ಕಾರಣ, ಬೇರೆಯವರು ಬಂದು ಆರಿಸಿಕೊಂಡರೆ? ಎಂಬ ಆತಂಕ ಒಂದು ಇರುತ್ತಿತ್ತಲ್ಲಾ… ಓಡುತ್ತ ಹೋದವರೇ, ಮರದ ಬುಡಕ್ಕೆ ಬಿದ್ದ ಹೂವನ್ನು ಆರಿಸಿ, ಕಾಡು ಎಲೆಗಳ ಕೊಟ್ಟೆ ಮಾಡಿ ಅದರಲ್ಲಿ ತುಂಬಿಕೊಳ್ಳುತ್ತಿದ್ದೆವು. ಪುಟ್ಟ ವೃತ್ತಕಾರದ ಈ ಹೂವಿಗೆ ಸುತ್ತಲೂ ಕಣ್ಣು ರೆಪ್ಪೆಯಂಥ ಸೂಕ್ಷ್ಮವಾದ ಬೆಳ್ಳನೆಯ ಚೂಪನೆಯ ಎಸಳುಗಳು. ಮಧ್ಯದಲ್ಲಿ ಒಂದು ರಂದ್ರ. ಹಿಂಭಾಗ ಗುಮ್ಮಟೆಯಂತೆ ಇರುತ್ತದೆ. ಅದರ ಸುಗಂಧ ಅದ್ಭುತ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹನ್ನೆರಡನೆಯ ಕಂತು

Read More

ಕೋಮಾವೂ, ಮಂಜನ ಚಕ್ಕುಲಿಯೂ… : ವಿನಾಯಕ ಅರಳಸುರಳಿ ಅಂಕಣ

ತೊಡೆಯ ಮೇಲೆ ಪೆಟ್ಟು ತಿಂದ ಶಿವುವಿಗೆ ತಾನು ಮಂಜುವನ್ನು ಸೋಲಿಸಲಾರೆ ಎಂಬುದು ಅರ್ಥವಾಯಿತೋ ಏನೋ? ಇನ್ನೂ ಬೀಳಲಿರುವ ಒದೆಗಳಿಂದ ತಪ್ಪಿಸಿಕೊಳ್ಳಲು ಇರುವ ಏಕಮಾತ್ರ ಉಪಾಯವೆಂಬಂತೆ ಅವನು ತನ್ನ ಕಾಲು ಹಿಡಿದುಕೊಂಡು ನೆಲಕ್ಕೆ ಬಿದ್ದುಕೊಂಡು “ಅಯ್ಯೋ.. ಅಮ್ಮಾ.. ಅಯ್ಯಯ್ಯಮ್ಮಾ” ಎನ್ನುತ್ತಾ ಒದ್ದಾಡತೊಡಗಿದ. ತಾನಾಗಿ ಹೊಡೆಯಲಾಗದ ಮಂಜುವಿಗೆ ಮೇಷ್ಟರ ಕೈಯಿಂದ ಹೊಡೆಸುವ ಉಪಾಯವೂ ಅವನದಾಗಿತ್ತೋ ಏನೋ? ಪರಿಸ್ಥಿತಿಯ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿ, ಬೇಗ ಈ ವಿಷಯ ಮೇಷ್ಟರನ್ನು ಮುಟ್ಟುವಂತೆ ಮಾಡಲೆಂದು ಎದೆ, ಕಾಲು ಹಿಡಿದುಕೊಂಡು ಒದ್ದಾಡುತ್ತಾ “ಅಯ್ಯೋ.. ಅಮ್ಮಾ‌‌.. ನಂಗ್ ಉಸಿರಾಡುಕಾತಿಲ್ಯೋ.. ಅಪ್ಪಯ್ಯೋ.. ಅಬ್ಯೋ” ಎಂದು ಇನ್ನೇನು ಐಸಿಯುಗೆ ಸೇರಿಸಬೇಕಾದ ರೋಗಿಯಂತೆ ನಟಿಸತೊಡಗಿದ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ

Read More

ರಾಜ್ಕುಮಾರ್ ಅಂದ್ರ ಏನಂದ್ಕಂಡೆ?: ಎಂ. ಜವರಾಜ್‌ ಹೊಸ ಕಾದಂಬರಿಯ ಆಯ್ದ ಭಾಗ

ಪಂಚಾಯ್ತಿ ಆಫೀಸ್ ಮಗ್ಗುಲು ಬೀದಿಲಿದ್ದ ಕುಂಟ ಸಿದ್ದಪ್ಪನ ಮನೆಯ ಅಂಗಳದಲ್ಲಿ ಒಂದಷ್ಟು ಜನ ಮಾತಾಡ್ತ ನಿಂತಿದ್ದರು. ಅಲ್ಲಿಗೆ ನಾಕಾರು ಪೇಪರು ಬರುತ್ತಿದ್ದವು. ಕುಂಟ ಸಿದ್ದಪ್ಪ ಬಿಳಿಪಂಚೆ ಬಿಳಿ ಶರ್ಟು ಹಾಕೊಂಡು ಕ್ರಾಪ್ ತಲೆ ಬಾಚ್ಕೊಂಡು ಕಾಲಿನ ಮೇಲೆ ಕಾಲು ಹಾಕಿಕೊಂಡು “ಇದು ಗೋಕಾಕ್ ಚಳುವಳಿ ಅಂತ. ಅವ್ರೊಬ್ಬ ದೊಡ್ ಕವಿ. ಅವ್ರು ಸರ್ಕಾರಕ್ಕೆ ಬರ್ದ ಪತ್ರನ ಇಟ್ಕೊಂಡು ನಡಿತಿರ ಹೋರಾಟ ಇದು. ಏಯ್‌ ನೋಡ್ರಪ್ಪ, ಬಾಯಿಲ್ಲಿ” ಅಂತ ಕರೆದು, “ನೀನು ಐದ್ನೆ ಕ್ಲಾಸಾ? ನಾಕ್ನೆ ಕ್ಲಾಸಾ?” ಅಂದ. ನಾನು, ʼಹುʼ” ಎನ್ನುವವನಂತೆ ತಲೆದೂಗಿದೆ. “ಹೌದಾ? ಹೋಗು, ಇನ್ಮೇಲ ಇಂಗ್ಲಿಸ್ ಗಿಂಗ್ಲಿಸ್ ಓದಂಗಿಲ್ಲ, ಬರೀ ಕನ್ನಡ. ನಿನ್ತವು ಇಂಗ್ಲಿಸ್ ಬುಕ್ಸ್ ಇದ್ರ ತೂದು ಬಿಸಾಕಿ ಕನ್ನಡ ಇಟ್ಗ” ಅಂದ. ಅಲ್ಲೊಬ್ಬ ಕೇಳ್ತಿದ್ದವನು “ಇದ್ಕ ರಾಜ್ಕುಮಾರ್ ಯಾಕ್ ಮದ್ಯಕ್ ಬಂದ?” ಅಂತ ಕೇಳಿದ.
ಎಂ. ಜವರಾಜ್‌ ಹೊಸ ಕಾದಂಬರಿ “ಪೋಸ್ಟ್‌ಮ್ಯಾನ್‌ ಗಂಗಣ್ಣ” ಕೃತಿಯ ಆಯ್ದ ಭಾಗ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ