‘ಡಿಸೆಂಬರ್ ಬಂದಿತು, ಚಳಿಯಾಕೆ ಬಂದಳು’: ಮಹಾಲಕ್ಷ್ಮೀ ಕೆ.ಎನ್. ಬರಹ
ಈ ಬೆಟ್ಟಕ್ಕೆ, ಆ ಮರಕ್ಕೆ, ಹೆಂಚಿನ ಪುಟ್ಟ ಮನೆಗೆ ಹಿಮದ ಹೊದಿಕೆ ಬಂದುಬಿಡುತ್ತೆ. ನಮ್ಮನ್ನೂ ಆ ಹೊದಿಕೆ ಆವರಿಸಿಬಿಡುತ್ತದೆ. ವಿಸ್ಮೃತ ದೃಶ್ಯವನ್ನು ತಂದಿಟ್ಟುಬಿಡುತ್ತದೆ. ಹೆಜ್ಜೆ ಇಟ್ಟಲ್ಲೆಲ್ಲಾ ಹಿಮಮಣಿ ಕಾಲಿಗೆ ಮುತ್ತಿಡುತ್ತದೆ. ಎಳೆಕೂಸಿನ ಕೈ ಕಾಲುಗಳ ಮೆತ್ತಗೆ ಹಿಡಿದು ತೊಳೆಯುವಂತೆ ನಮ್ಮನ್ನು ತಣ್ಣಗೆ ಸೋಕಿ ತೊಳೆಯುತ್ತದೆ ಮಂಜು. ಹಿಮವು ನೆಲದ ಮೇಲೆ ಆವರಿಸಿದಾಗ ಧ್ವನಿ ಹೀರಿಕೊಳ್ಳುವ ಸಾಧನವಾಗಿ ಕಾರ್ಯನಿರ್ವಹಿಸುವುದರಿಂದ ಇಷ್ಟು ದಿನದ ಸದ್ದು ಸಪ್ಪಳ ಸುಮ್ಮನಾಗುತ್ತದೆ.
ಡಿಸೆಂಬರ್ ಚಳಿಯ ಕುರಿತು ಮಹಾಲಕ್ಷ್ಮೀ ಕೆ.ಎನ್. ಬರಹ
