ಮರ್ಯಾದೆ ಉಳಿಸಿದ ಒಂದು ರೂಪಾಯಿ!: ಬಸವನಗೌಡ ಹೆಬ್ಬಳಗೆರೆ ಬರಹ
ಈಗಿನಂತೆ ಆಗ ಮಕ್ಕಳಿಗೆ ನೋಟ್ ಬುಕ್ಕಿನ ರಾಶಿ ಇರುತ್ತಿರಲಿಲ್ಲ. ಆರು ಪುಸ್ತಕವಿದ್ದರೆ ಆರು ನೋಟ್ಸ್, ಒಂದು ಆಲ್ ರಫ್ ಅಷ್ಟೇ. ಸಮಾಜ ನೋಟ್ಸ್ನಲ್ಲಿ ಇರುವ ಪಾಠಕ್ಕನುಗುಣವಾಗಿ ಪೌರನೀತಿ, ಭೂಗೋಳ, ಇತಿಹಾಸ ಎಂದು ಭಾಗ ಮಾಡಿ ಬಳಸಿಕೊಳ್ಳುತ್ತಿದ್ದೆವು. ಆಗ ಫೇಮಸ್ ಆಗಿದ್ದ ರೇನಾಲ್ಡ್ಸ್ ಪೆನ್ನನ್ನು ಪರೀಕ್ಷೆ ಬರೆಯಲು ಮಾತ್ರ ತೆಗೆದುಕೊಳ್ಳುತ್ತಿದ್ದೆನು. ಒಂದೊಮ್ಮೆ ಅದರ ಇಂಕ್ ಮುಗಿದು ಹೋದರೆ ಅದರ ಕಡ್ಡಿಯನ್ನು ಎಸೆಯುತ್ತಿರಲಿಲ್ಲ.
ಬಸವನಗೌಡ ಹೆಬ್ಬಳಗೆರೆ ಬರಹ ನಿಮ್ಮ ಓದಿಗೆ