Advertisement

Category: ಸಂಪಿಗೆ ಸ್ಪೆಷಲ್

ಹೊಸ ಮನೆ… ಹೊಸ ಏರಿಯಾ.. ಹೊಸ ಸಮಸ್ಯೆಗಳು…: ಎಚ್. ಗೋಪಾಲಕೃಷ್ಣ ಸರಣಿ

ಅವತ್ತು ಜೋರು ಮಳೆ. ಮಳೆ ಬಂದು ನಿಂತ ನಂತರ ನಮ್ಮ ಸೈಕಲ್ ಜಾಥಾ ಶುರು ಆಯಿತು. ರಾಮಚಂದ್ರಪುರದ ಕಿರು ರಸ್ತೆಗೆ ಬಂದೆವು. ಕತ್ತಲಿನಲ್ಲಿ ಒಬ್ಬ ಮಧ್ಯ ವಯಸ್ಕರು ಕೈಯಲ್ಲಿ ಒಂದು ಟಾರ್ಚ್ ಹಿಡಿದು ನಿಂತಿದ್ದರು. ಸ್ವಾಮೀ ನಿಲ್ಲಿ, ನಿಲ್ಲಿ ಸಾರ್ ಅಂತ ನಮ್ಮನ್ನು ತಡೆದರು. ಎಲೆಕ್ಟ್ರಿಕ್ ವೈರ್ ರಸ್ತೆ ಮೇಲೆ ಅಲ್ಲೆಲ್ಲಾ ಬಿದ್ದು ಕರೆಂಟ್ ಹರಿತಾ ಇದೆ. ಈ ರೋಡಿನಲ್ಲಿ ಹೋಗಬೇಡಿ ಅಂತ ಹೇಳಿ ಎಂ ಎಸ್ ಪಾಳ್ಯದ ಮೂಲಕ ಹೋಗಿ ಅಂತ ಸೂಚಿಸಿದರು. ಇದು ನಾಲ್ಕು ಕಿಮೀ ಹೆಚ್ಚು ದೂರ. ಆದರೂ ಜೀವ ನಮ್ಮದು ತಾನೇ?
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೦ನೇ ಬರಹ ನಿಮ್ಮ ಓದಿಗೆ

Read More

ನವರಾತ್ರಿಯಲ್ಲಿ ನನಗೆ ಅಮ್ಮ ಸಿಕ್ಕಳು…: ಗಾಯತ್ರಿ ರಾಜ್ ಬರಹ

ಕಣ್ಣು ತೇವಗೊಂಡು, ಭಾವ ಗಂಟಲುಬ್ಬಿ ಬಂದು, ಆ ನವದುರ್ಗೆಯರಲ್ಲೂ, ನನ್ನಲ್ಲೂ, ನನ್ನ ಮಗಳಲ್ಲೂ ಅಮ್ಮನನ್ನೇ ಗುರುತಿಸುತ್ತಾ ಅವಳು ಕಲಿಸಿದ ದೇವರ ನಾಮ ಗುನುಗುತ್ತೇನೆ. ಅವಳನ್ನೇ ಮೈವೆತ್ತಂತೆ ಮತ್ತೆ ಮತ್ತೆ ಮೈದುಂಬಿ ಹಾಡುವಾಗ, ನನ್ನ ಮಗಳು ಕೂಡ ನನ್ನ ಜೊತೆ ಗುನುಗುತ್ತಾ ಮುಗುಳ್ನಗುತ್ತಾಳೆ. ತಲೆಮಾರುಗಳ ಸಂಯೋಜನೆಯೊಂದು ಸಜೀವವಾಗಿ ಕಣ್ಣೆದುರು ನಿಂತಂತಾಗುತ್ತದೆ. ನನ್ನೊಳಗಿನ ಅಮ್ಮ ಈಗ ಅವಳ ತುಟಿಯಲ್ಲಿ ಮೂಡುತ್ತಿದ್ದಳೆ. ಅವಳೂ ಕೂಡ ನಾಳೆ ನಾ ಅಮ್ಮನಿಂದ ಕಲಿತು, ಕಲಿಸಿದ ಹಾಡನ್ನೇ ತನ್ನದೇ ದನಿಯಲ್ಲಿ, ತನ್ನದೇ ಭಾವದಲ್ಲಿ ಪುನರ್ಜೀವಗೊಳಿಸುತ್ತಾಳೆ.
ನವರಾತ್ರಿ ಆಚರಣೆಯಲ್ಲಿ ಅಮ್ಮನ ನೆನಪುಗಳ ಕುರಿತು ಗಾಯತ್ರಿ ರಾಜ್ ಬರಹ

Read More

ಮಾನವನ ವಿಕಾಸಕ್ಕೆ ಪ್ರಶ್ನಿಸುವುದೇ ಆಧಾರ: ನಮ್ರತಾ ಪೊದ್ದಾರ್‌ ಬರಹ

ಬಹಳ ಪೋಷಕರು ಮಕ್ಕಳ ಕುತೂಹಲಭರಿತ ಪ್ರಶ್ನೆಗಳಿಗೆ ನಕ್ಕು ಸುಮ್ಮನಾಗಿಯೋ ಅಥವಾ ಅರೆಬರೆ ಉತ್ತರ ಕೊಟ್ಟೋ ಜಾರಿಕೊಳ್ಳುತ್ತಾರೆ. ತಮ್ಮ ನಂಬಿಕೆಗಳಿಗೆ ಹಾಗೂ ಆಚಾರ, ವಿಚಾರಕ್ಕೆ ಸರಿಹೊಂದದೆ ಇರುವ ಪ್ರಶ್ನೆಗಳನ್ನು ಮಕ್ಕಳು ಕೇಳಿದಾಗ ಕಸಿವಿಸಿಗೊಂಡು ಕೋಪಿಸಿಕೊಳ್ಳುವುದನ್ನು ನೋಡಿದ್ದೇವೆ. ಯಾವುದೇ ವಿಷಯದ ಬಗ್ಗೆ ಗೊತ್ತಿಲ್ಲದಿರುವುದು ಅವಮಾನದ ಮಾತಲ್ಲ. ನಾವೇ ಏನೋ ಊಹೆ ಮಾಡಿಕೊಂಡು, ಖಾಲಿ ಇರುವ ಜಾಗದಲ್ಲಿ ಏನೋ ತುಂಬಿಕೊಂಡು ಸತ್ಯವನ್ನು ಹುಡುಕುವ ಗೋಜಿಗೆ ಹೋಗದಿರುವುದು ತಪ್ಪು.
ನಮ್ರತಾ ಪೊದ್ದಾರ್‌ ಬರಹ ನಿಮ್ಮ ಓದಿಗೆ

Read More

ಅಪರೂಪದ ಗ್ರೂಪ್ ಫೋಟೋ: ಜಯಂತ ಕಾಯ್ಕಿಣಿ ಬರಹ

ವ್ಯಕ್ತಿಗತವಾಗಿ ವಿಭಿನ್ನ ಹುಡುಕಾಟ, ನೋಟ, ನಿಲುವುಗಳಿದ್ದರೂ, ಒಟ್ಟಾರೆ ಸೇರಿ ಏನೋ ಒಂದು ಒಳ್ಳೆಯದರಲ್ಲಿ ತೊಡಗಿರುವ ಭಾವವೊಂದು ಇಲ್ಲಿ ನಿಚ್ಚಳವಾಗಿದೆ. ‘ಬೇಂದ್ರೆ-ತರಾಸು ತೊಡೆನಾಟʼ ಇದಕ್ಕೆ ಸೊಗಸಾದ ಸಾಕ್ಷಿ. ಬೇಂದ್ರೆ ಮತ್ತು ಅಡಿಗರ ನಡುವೆ ಕಾಯ್ಕಿಣಿ, ಎಕ್ಕುಂಡಿ, ಶರ್ಮ ಇರುವುದೇ ಒಂದು ರೂಪಕ. ಬಹುಶಃ ಇದು ಆಗ ನಡೆದಿದ್ದ ಕುಮಟಾ ಸಾಹಿತ್ಯ ಸಮ್ಮೇಳನಕ್ಕೆ ಬಂದ ಕೆಲವು ಅತಿಥಿಗಳು ಗೋಕರ್ಣವನ್ನೂ ನೋಡಿಕೊಂಡು ಹೋಗಲು ಬಂದಾಗ ನಡೆದ ಕೂಟ ಕಲಾಪ….
ಕವಿ, ಕತೆಗಾರ, ಸಿನಿಮಾ ಹಾಡುಗಳ ಸರದಾರ, ಜಯಂತ ಕಾಯ್ಕಿಣಿ ತಮ್ಮ ತಂದೆ; ವಿದ್ವಾಂಸ, ವಿಮರ್ಶಕ, ಸಂಶೋಧಕ ಗೌರೀಶ ಕಾಯ್ಕಿಣಿ ಮತ್ತು ಅವರ ಸಮಕಾಲೀನ ಬರಹಗಾರರರನ್ನು ಅಪರೂಪದ ಫೋಟೋವೊಂದರ ಮೂಲಕ ನೆನಪಿಸಿಕೊಂಡಿದ್ದಾರೆ.

Read More

ತಾವರೆಯ ಧ್ಯಾನ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಲಲಿತ ಪ್ರಬಂಧ

ರೀಲ್ಸ್‌ನಲ್ಲಿ ತೋರಿಸಿದ ಹಾಗೆ ಎರಡು ದಿನಗಳಲ್ಲಿ ಅದರಲ್ಲಿ ಸೃಷ್ಟಿಯ ಕುರುಹುಗಳು ಕಂಡುಬರಬೇಕಿತ್ತು. ದಿನ ಎರಡಾಯಿತು ಮೂರಾಯಿತು ಬೀಜ ಕದಲಲಿಲ್ಲ. ಬೀಜಗಳನ್ನು ಹೊರತೆಗೆದು ಕೈಯಲ್ಲಿಟ್ಟು ನೋಡಿದ. ತಿರುಗಿಸಿ ತಿರುಗಿಸಿ ನೋಡಿದರೂ ಬೀಜ ನಿಸ್ತೇಜವಾಗಿ ಬಿದ್ದುಕೊಂಡಿತ್ತು. ಅದು ಮೊಳಕೆಯೊಡೆಯುವ ಯಾವ ಮನಸ್ಸನ್ನೂ ಮಾಡಲಿಲ್ಲ. ಮೊದಮೊದಲು ಧ್ರುವನ ಈ ತಳಮಳವನ್ನು ನೋಡಿ ನಾನು ಜೋರಾಗಿ ನಗುತ್ತಿದ್ದೆ. ಮೊದಲೇ ಹೇಳಿದ್ದೆ ನಿಂಗೆ ಇದು ವರ್ಕ್ ಔಟ್ ಆಗಲ್ಲ ಅಂತ. ಸುಮ್ನೆ ಟೈಮ್ ವೇಸ್ಟ್. ರೀಲ್ಸ್‌ನಲ್ಲಿ ಸುಮ್ನೆ ತೋರಿಸಿ ನಮ್ಮನ್ನು ಮಂಗ ಮಾಡ್ತಾರೆ.
ರವೀಂದ್ರ ನಾಯಕ್‌ ಸಣ್ಣಕ್ಕಿಬೆಟ್ಟು ಬರೆದ ಲಲಿತ ಪ್ರಬಂಧ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ