Advertisement

Category: ಸಂಪಿಗೆ ಸ್ಪೆಷಲ್

ಶರಣಗೌಡ ಬಿ.ಪಾಟೀಲ ತಿಳಗೂಳ ಬರೆದ ಪ್ರಬಂಧ

ಅಪ್ಪನ ನಿರ್ಧಾರ ಪಲ್ಲವಿಗೆ ಅಡ್ಡಕತ್ತರಿಯಲ್ಲಿ ಸಿಲುಕಿಸಿತು. ತಾನು ಮಾಡದೇ ಇರುವ ತಪ್ಪಿಗೆ ಶಿಕ್ಷೆ ಅನುಭವಿಸಿದಂತಾಗಿದೆ, ಹೀಗಾಗುತ್ತದೆ ಅಂತ ಕನಸು ಮನಸ್ಸಿನಲ್ಲೂ ಯೋಚನೆ ಮಾಡಿರಲಿಲ್ಲ ನಾನು ಸರಿಯಾಗಿ ಓದಿ ಇಡೀ ಕ್ಲಾಸಿಗೇ ಫಸ್ಟ್ ಬರಬೇಕು ಮುಂದೆ ಕಾಲೇಜು ಸೇರಿ ದೊಡ್ಡ ಸಾಧನೆ ಮಾಡಬೇಕು ಅಂತ ಏನೇನೋ ಕನಸು ಕಂಡಿದ್ದೆ.
ಶರಣಗೌಡ ಬಿ.ಪಾಟೀಲ ತಿಳಗೂಳ ಬರೆದ ಪ್ರಬಂಧ “ವಿಳಾಸ ತಪ್ಪಿದ ಪತ್ರ” ನಿಮ್ಮ ಓದಿಗೆ

Read More

ಮರುಭೂಮಿಯಲ್ಲಿ ಮರುಕಳಿಸುವ ಹುಂಬತನದ ಹಂಬಲಗಳು: ಅಚಲ ಸೇತು ಬರಹ

ಏರಿಯಾದ ಹತ್ತಿರದ ಹಳ್ಳಿಯಲ್ಲಿ ಮನೆ ಮಾಡಿಕೊಂಡು ಡ್ರೋನ್ ಹಾರಿಸಿ ಸೆರೆಹಿಡಿದ ದೃಶ್ಯಗಳನ್ನು ಅಂತರ್ಜಾಲದ ಪುಟಕ್ಕೆ ಮಿನ್ನೇರಿಸುತ್ತಿದ್ದ ನೆವಾಡಾ ನಿವಾಸಿಯ ಲ್ಯಾಪ್ಟಾಪ್, ಡ್ರೋನ್ ಮತ್ತಿತರ ಸಲಕರಣೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡರು. ಹೀಗೆ ಅದಮ್ಯ ಕುತೂಹಲ ತಡೆಯಲಾರದೆ ಎಲ್ಲೆ ಮೀರಿ ವರ್ತಿಸುವರಿಗೆ, ಡ್ರೋನ್ ಹಾರಿಸಿ, ಕ್ಯಾಮೆರಾ ಮೂತಿಯನ್ನು ಬೇಲಿಯ ತೂತಿಗೆ ತೂರಿಸಿ ಒಳಗೆ ಇಣುಕಿ ನೋಡುವ ಚಪಲ ಚನ್ನಿಗರಾಯರಿಗೆ ದೊಡ್ಡ ಮೊತ್ತದ ದಂಡ ಹಾಗು ದೀರ್ಘ ಕಾಲದ ಕಾರಾಗೃಹ ಸಜೆಯಾಗಿದೆ.
ಅಚಲ ಸೇತು ಬರಹ ನಿಮ್ಮ ಓದಿಗೆ

Read More

ಸರೋದ್‌ ಮಾಂತ್ರಿಕ ರಾಜೀವ ತಾರಾನಾಥ್‌ ಇನ್ನಿಲ್ಲ…

“ರಾಗ ಇದೆಯಲ್ಲ ಅದು ಹುಟ್ಟುವಾಗ ಒಂದು ಮಗು ಥರಾನೆ, ಹಂಗೇ ಬೆತ್ತಲೆಯಾಗಿ ಹುಟ್ಟುತ್ತೆ, ಆಮೆಲೆ ಅದಕ್ಕೆ ಅಲಂಕಾರ ಮಾಡೋದು… ಯಾವ ಸ್ವರವನ್ನು ಎಲ್ಲಿ ಅಲಂಕರಿಸಬೇಕು, ಎಷ್ಟು ತೊಡಿಸಬೇಕು ಅಂತ. ಸೊಂಟದ ಡಾಬನ್ನ ನೆತ್ತಿಗೆ ಹಾಕಕ್ಕಾಗಲ್ಲ. ಹಂಗೇ ಕಿರೀಟವನ್ನು ಸೊಂಟಕ್ಕೆ ತೊಡಿಸಕ್ಕೆ ಆಗಲ್ಲ.
ಹೆಸರಾಂತ ಸರೋದ್‌ ಮಾಂತ್ರಿಕ ರಾಜೀವ ತಾರಾನಾಥರು ಇಂದು ತೀರಿಕೊಂಡರು. ಅವರೊಡನೆ ಕಳೆದ ಘಟನೆಗಳ ಕುರಿತು ಕಥೆಗಾರ್ತಿ ಸುಮಂಗಲಾ ಬರೆದಿದ್ದ ಲೇಖನ ನಿಮ್ಮ ಓದಿಗೆ

Read More

ಮದುವೆ ಮದುವೆ ಆ ಸಿಹಿ ಪದವೆ: ಅಚಲ ಸೇತು ಬರಹ

ಅಡುಗೆಮನೆಯ ಸಿಹಿತಿಂಡಿಯ ಡಬ್ಬಕ್ಕೆ ಮುತ್ತಿಗೆ ಹಾಕುವ ಇರುವೆಗಳ ಹಾಗೆ ಮದುವೆಯಾಗಬಯಸುವ ಸಾಲು ಸಾಲು ಮದುಮಕ್ಕಳ ಸಂತೆ ನೆರೆಯಿತು. ರಾತ್ರಿ ಹನ್ನೆರಡು ಗಂಟೆಯೊಳಗೆ ತಮಗೆ ಮದುವೆ ಪರವಾನಗಿ ದೊರಕಬೇಕು ಎಂದು ಕೂಗುತ್ತ ಒಳ ನುಗ್ಗಲು ತಳ್ಳಾಡುತ್ತಿದ್ದ ವಧುವರರ ವರ್ತನೆ ವಿಚಿತ್ರವಾಗಿತ್ತು.
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ

Read More

ಜೊತೆಗಿರುವನು ಚಂದಿರ….: ಮೀನಾ ಮೈಸೂರು ಬರಹ

ಹೊಟ್ಟೆ ತುಂಬುವಷ್ಟು ಅನ್ನ ಸಿಕ್ಕರದೆ ಐಭೋಗವೆಂದು ನಂಬಿದ್ದ ತಾಯಿ, ತನ್ನ ಮಗಳಿಗೆ ತನ್ನ ಗಂಡನಿಗಿಂತಲೂ ವಯಸ್ಸಾದ ಆ ಗ್ರಾಮದಲ್ಲೇ ಸಿರಿವಂತನೆನಿಸಿದ್ದ ಕಲಾಯಿ ವೃತ್ತಿ ಮಾಡುವ ಮುದುಕನಿಗೆ ಮಗಳನ್ನು ಮದುವೆ ಮಾಡಲು ಒಪ್ಪಿಕೊಳ್ಳುವಂತಹ ದೈನೇಸಿ ಸ್ಥಿತಿ. ಆದರೆ ಆ ಮಗಳು ನೆರೆಮನೆಯ ಅದೇ ಜನಾಂಗದ ಹುಡುಗನನ್ನು ಪ್ರೀತಿಸುವುದು ತಂದೆಗೆ ಗೊತ್ತಾಗುತ್ತದೆ.
“ಜೊತೆಗಿರುವನು ಚಂದಿರ” ನಾಟಕದ ಕುರಿತು ಮೀನಾ ಮೈಸೂರು ಬರಹ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ