Advertisement

Category: ಸರಣಿ

ಸಲಕರಣೆಗಳನ್ನು ಅನ್ವೇಷಿಸುವ ಮನುಷ್ಯರ ಮನೋಲೋಕದ ಕತೆಯಿದು

ನ್ಯೂಯಾರ್ಕ್ ಸರ್ಕಾರ ಎ.ಸಿ. ವಿದ್ಯುತ್ ನ ಅಪಾಯದ ಕುರಿತು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಿ, ಎಂಜಿನಿಯರುಗಳು ಮತ್ತು ತಜ್ಞರಿಂದ ಮಾಹಿತಿ ಕಲೆ ಹಾಕಿತು. ವೆಸ್ಟಿಂಗ್‌ಹೌಸ್‌ನ ಪರವಿದ್ದ ಎಂಜಿನಿಯರುಗಳು ಅಪಾಯವನ್ನು ಅಲ್ಲಗೆಳೆದರೆ, ಎಡಿಸನ್ ಪರವಿದ್ದ ತಜ್ಞರು ಎ.ಸಿ. ವಿದ್ಯುತ್ ವ್ಯವಸ್ಥೆಯನ್ನು ಮಾನವರನ್ನು ಅರೆಗಳಿಗೆಯಲ್ಲೇ ಕೊಲ್ಲಬಲ್ಲ ರಕ್ಕಸ ಶಕ್ತಿಯೆಂಬಂತೆ ಬಿಂಬಿಸಿದರು. ವೆಸ್ಟಿಂಗ್‌ಹೌಸ್ ಮತ್ತು ಎಡಿಸನ್ ನಡುವಿನ ಈ ವ್ಯಾವಹಾರಿಕ ಕದನದಲ್ಲಿ, ತಾನು ನಿರ್ಲಿಪ್ತನೆಂದು ಘೋಷಿಸಿಕೊಂಡ ಹೆರಾಲ್ಡ್ ಬ್ರೌನ್, ಎ.ಸಿ. ವಿದ್ಯುತ್ತಿನ ವಿರುದ್ಧ..”

Read More

ಬಾಲ್ಯದ ಆಟ..ಆ ಹುಡುಗಾಟ ಇನ್ನೂ ಮರೆತಿಲ್ಲಾ..

“ಆಮೇಲೆ ನಾನು ಆ ಕೋಣೆಯ ಕಿಟಕಿಯ ಮುಂದೆ ಕುಳಿತು ಪಾಠ ಕೇಳುತ್ತಿದ್ದೆ. ಒಂದು ಸಲ ಕಪ್ಪು ಹಲಗೆಯ ಮೇಲೆ ಗಣಿತ ಸಮಸ್ಯೆಯೊಂದನ್ನು ಬರೆದು ಉತ್ತರ ಬರೆಯಲು ತಿಳಿಸಿದರು. ನಾನು ಮನದಲ್ಲೇ ಕೂಡಿಸಿ ಕಳೆದು ಭಾಗಿಸಿ ಥಟ್ಟನೆ ಉತ್ತರ ಹೇಳಿದೆ. ಹೀಗೆ ಹೇಳಲು ಕಾರಣವೂ ಇತ್ತು. ನನ್ನ ಬಳಿ ಕಚ್ಚಾ ನೋಟಬುಕ್ ಕೂಡ ಇರಲಿಲ್ಲ. ಹೀಗಾಗಿ ಮನದಲ್ಲೇ ಲೆಕ್ಕಾಚಾರ ಮಾಡುವುದು ಅನಿವಾರ್ಯವಾಗಿತ್ತು. ನನ್ನ ಉತ್ತರದಿಂದ ಮಾಸ್ತರರಿಗೆ ಖುಷಿಯಾಯಿತು. ನನಗೆ ಒಳಗೆ ಕರೆದರು.”
ರಂಜಾನ್ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ ಹದಿನಾಲ್ಕನೇ ಕಂತು ಇಲ್ಲಿದೆ.

Read More

ನೇತ್ರಾವತಿಯಲ್ಲಿ ಹರಿದು ಹೋದ ನೀರೆಷ್ಟೋ…

ಏನೇನೋ ಚಿಂತಿಸುತ್ತ ಇದಿನಬ್ಬ ಕುಳಿತಿದ್ದಾನೆ; ಅಷ್ಟರಲ್ಲೇ ದೂರದಲ್ಲಿ ಒಂದು ಸಣ್ಣ ತಂಡ ನಡೆದು ಬರುತ್ತಿದೆ. ಇದಿನಬ್ಬನಿಗೆ ಮತ್ತೆ ಬದುಕುವ ಆಸೆ ಚಿಗುರಿತು, ಅಪರಿಚಿತರಾದರೇನು? ಮನುಷ್ಯರನ್ನು ಕಂಡೆನಲ್ಲಾ ಅನ್ನುವ ಖುಷಿ. ಹತ್ತಿರವಾದಂತೆ ಮುಖ ಚಹರೆ ಸ್ಪಷ್ಟವಾಗತೊಡಗಿತು. ಹೌದು, ಯೂಸುಫ್ ಮತ್ತು ಇತರ ಸಹ ಯಾತ್ರಿಕರು. ದೂರದಲ್ಲಿ ಬಂದವರಿಗೂ ಪರಿಚಯ ಸಿಕ್ಕಿರಬೇಕು. ಎಲ್ಲರೂ ಇದಿನಬ್ಬರ ಕಡೆಗೆ ಓಡಿ ಬಂದರು.  ಉಳಿದವರು ಎಲ್ಲಿ ಹೋದರೋ ಗೊತ್ತಾಗಲಿಲ್ಲ.”

Read More

ಬಿಟ್ಟೇನೆಂದರೂ ಬಿಡದೀ…..

ಅಪರಾಧ ಮಾಡಿದ್ದು ನಿಜವಾದರೆ ಖಂಡಿತ ಬರತಾನೆ. ಬೇರೆಯವರಾಗಿದ್ದರೆ ಬರತಿರಲಿಲ್ಲ, ಇವನು ಮಾತ್ರ, ತಪ್ಪು ಮಾಡಿದ್ದರೆ, ಬಂದೇ ಬರತಾನೆ, ಅಂದುಕೊಂಡೆ. ರಝುಮಿಖಿನ್ ಗುಟ್ಟು ರಟ್ಟು ಮಾಡುವುದರಲ್ಲಿದ್ದ, ಜ್ಞಾಪಕ ಇದೆಯಾ? ನಿನ್ನ ಕೆರಳಿಸಬೇಕು ಅಂತ ಸುದ್ದಿ ಹರಡಿದ್ದು ನಾವೇನೇ. ಆ ಸುದ್ದಿ ಕೇಳಿ ರಝುಮಿಖಿನ್ ನಿನಗೆ ಬಂದು ಹೇಳತಾನೆ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

Read More

ನಾಟಕದ ಹೊಟ್ಟೆ ನೋವೂ ಮತ್ತು ತಪ್ಪಿದ ಹಾಜರಾತಿ

ನಮ್ಮ ಅಡುಗೆ ಭಟ್ಟರು, ಹಿರಿಯ ವಿದ್ಯಾರ್ಥಿಗಳು ಆಗಿಂದಾಗ್ಗೆ ಈ ಬಗ್ಗೆ ಆಡುತ್ತಿದ್ದ ಮಾತುಗಳನ್ನು ಕೇಳಿಸಿಕೊಂಡಿದ್ದೆವಾದರೂ ಹುಡುಗು ಬುದ್ಧಿಯ ನಮಗೆ ಇದೇನು ಮುಖ್ಯ ಎನಿಸಿರಲಿಲ್ಲ. ಅದುವರೆಗೆ ನಾವ್ಯಾರು ಅದನ್ನು ನೋಡಿರಲಿಲ್ಲ. ನೋಡಿರದ ನಮ್ಮಗಳ ಕಲ್ಪನೆಯಲ್ಲಿ ಹೊಸ ಹಾಸ್ಟೆಲ್ ‘ಹತ್ತಾರು ರೂಮುಗಳಿವೆಯಂತೆ! ತರಗತಿಗೊಂದೊಂದು ರೂಮು ಕೊಡುತ್ತಾರಂತೆ! ಸ್ನಾನಕ್ಕೆ ಕಕ್ಕಸ್ಸಿಗೆಲ್ಲ ಸಪರೇಟ್ ರೂಮುಗಳಿವೆಯಂತೆ! ಸದಾ ನೀರು ಬರುತ್ತಲೇ ಇರುತ್ತದಂತೆ! ದಿನಾ ಸ್ನಾನ ಮಾಡಬೇಕಂತೆ!”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ