Advertisement

Category: ಸರಣಿ

‘ಇನ್ಫೋಸಿಸ್ (?)  ಪ್ರಶ್ನೆ’ ಕಳಿಸಿ ಪೇಚಿಗೆ ಸಿಲುಕಿದ್ದು!!: ಬಸವನಗೌಡ ಹೆಬ್ಬಳಗೆರೆ ಸರಣಿ

ತಕ್ಷಣ ನನಗೆ ಎಂತಹಾ ತಪ್ಪು ಮಾಡಿದೆ ಅನಿಸಿತು. “ತಣ್ಣೀರನ್ನೂ ಸಹ ತಣಿಸಿ ಕುಡಿಯಬೇಕಂತೆ” ಎಂಬ ಗಾದೆಮಾತಿನಂತೆ ತಾಳ್ಮೆಯಿಂದ ನಾನು ತಾಳಿಕೊಂಡು ತಕ್ಷಣ ಮರು ಉತ್ತರ ಕೊಡಲಿಲ್ಲ. ‘ಆತುರಗಾರನಿಗೆ ಬುದ್ಧಿ ಮಟ್ಟ” ಎಂಬ ಗಾದೆ ಮಾತು ನನಗೆ ನೆನಪಿಗೆ ಬಂದು ಆತುರದಲ್ಲಿ ನಾನು ಮಾಡಿದ ಈ ಅವಸರದ ತಪ್ಪು ನನ್ನ ಬಹಳ ಬಾಧಿಸಿತು. ನಾನು ಅವರಿಗೆ ಕರೆ ಮಾಡಿ ಹೇಳೋಣವೆಂದರೆ ಅವರು ಬೈದರೆ ಏನು ಗತಿ? ಎಂದು ಹೆದರಿ “ಸಾರಿ ಸಿಸ್ಟರ್ ಸಾರಿ…”
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಪ್ರಾಚೀನ ವಜ್ರ ಗಣಿಗಾರಿಕೆ: ಡಾ. ಎಂ. ವೆಂಕಟಸ್ವಾಮಿ ಸರಣಿ

ವಜ್ರಗಳನ್ನು ಅಲಂಕಾರ/ಆಭರಣಗಳಾಗಿ, ಕತ್ತರಿಸುವ ಸಾಧನಗಳಾಗಿ, ದುಷ್ಟತನವನ್ನು ದೂರ ಮಾಡಲು “ತಾಲಿಸ್ಮನ್” ಆಗಿ ಬಳಸಲಾಗುತ್ತಿತ್ತು. ತಾಲಿಸ್ಮನ್ ಎಂದರೆ ಕೆತ್ತಿದ ವಜ್ರದುಂಗುರ ಅಥವಾ ರತ್ನಕಲ್ಲು ಮಾಂತ್ರಿಕ ಶಕ್ತಿಯನ್ನು ಹೊಂದಿರುತ್ತದೆ ಮತ್ತು ಅದೃಷ್ಟವನ್ನು ತರುತ್ತದೆ ಎಂದು ಭಾವಿಸಲಾಗಿತ್ತು. ಪ್ರಾಚೀನ ಭಾರತದಲ್ಲಿ ವಜ್ರದ ಗುಣಲಕ್ಷಣಗಳನ್ನು ಮತ್ತು ಮಾಂತ್ರಿಕ ಶಕ್ತಿಯನ್ನು ಅಧ್ಯಯನ ಮಾಡಲಾಗಿದ್ದು, ವಜ್ರಗಳ ಮಹತ್ವ ಎಷ್ಟೆಂದರೆ “ಮ್ಯಾಂಡಲಿನ್” ಎಂಬ ವೃತ್ತಿಪರ ವಜ್ರಗಳ ತಜ್ಞರೆ ಇದ್ದರು. ಆದರೆ ಅದರ ಬಗ್ಗೆ ಅನೇಕ ಅನುಮಾನಗಳಿವೆ.
ಡಾ. ಎಂ. ವೆಂಕಟಸ್ವಾಮಿ ಅನುವಾದಿತ “ಭಾರತದಲ್ಲಿ ಪ್ರಾಚೀನ ಗಣಿಗಾರಿಕೆ” ಸರಣಿ

Read More

ದಾಯಾದಿ ಮಚ್ಚರ: ಕೆ. ಸತ್ಯನಾರಾಯಣ ಕಥಾ ಸರಣಿ

ಅಲ್ಲೇನು ದ್ವೇಷದ ಬಾಕಿ ಇರಲಿಲ್ಲ. ದೊಡ್ಡಪ್ಪ ಹೃತ್ಪೂರ್ವಕವಾಗಿ ಸಹಕರಿಸುವುದಲ್ಲದೆ, ಸ್ಮಶಾನಕ್ಕೂ ಹೋದರಂತೆ. ಹೆಣಕ್ಕೆ ಬೆಂಕಿ ಹಾಕಿದ ಮೇಲೆ, ಅದು ಉರಿದು ತಲೆ ಸಿಡಿಯುವ ಶಬ್ದ ಬರುವ ತನಕವೂ ಬೆಂಕಿಯ ಬೆಳಕಿನಲ್ಲಿ, ಅಲ್ಲಿದ್ದವರಿಗೆಲ್ಲ ಮಂಡ್ಯದಲ್ಲಿ ನೋಡಿದ ಹೆಣದ ವಾರಸುದಾರನ ಜೊತೆ ಯಾವ ಭೂಮಿಯ ವಿಷಯಕ್ಕೆ ಜಗಳ ಶುರುವಾಗಿ ಹೊಡೆದಾಟವಾಗಿ ಏನೇನಾಯಿತು ಎಂದು ಎಲ್ಲವನ್ನೂ ವಿವರವಾಗಿ ಹೇಳುತ್ತಿದ್ದರಂತೆ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”

Read More

“ನಾಟಕ”ದ ಬದುಕಿನ ಹಾದಿಗಳು…: ಜುಲೇಖಾ ಬೇಗಂ ಜೀವನ ವೃತ್ತಾಂತ

ಒಂದು ದಿವಸಕ್ಕೆ ನಾಲ್ಕು ಕೆ.ಜಿ ಅಕ್ಕಿ ಹಾಕಿದರೆ ಎಲ್ಲರ ಹೊಟ್ಟೆ ತುಂಬುವಷ್ಟಾಗುತ್ತದಲ್ಲಾ. ಊರಿಂದ ಅಡುಗೆಯವರನ್ನೊಬ್ಬರನ್ನು ಕರೆತಂದರೆ ಸಮಸ್ಯೆ ಬಗೆಹರಿದಂತೆ. ಹಣ ಹರಿದುಬರುವುದನ್ನು ಬಲಪಡಿಸಿದರೆ, ವ್ಯರ್ಥ ಪೋಲಾಗುವುದು ನಿಂತರೆ ಕಂಪೆನಿ ಉದ್ಧಾರವಾಗದೇ ಏನು? ಈ ಮೂಲಭೂತ ತಿಳುವಳಿಕೆಯೇ ಇಲ್ಲದಿದ್ದರೆ ಕಂಪೆನಿ ನಡೆಸಲು ಖಂಡಿತಾ ಆಗುವುದಿಲ್ಲವೆಂದೆ. ಕಂಪೆನಿ ಕಟ್ಟಬೇಕೆಂಬ ಆಸೆ ಇದ್ದರಷ್ಟೆ ಸಾಲದು, ಅನುಭವಗಳೂ ಬೇಕು ಎಂಬುದು ಅವರಿಗೆ ಅರ್ಥವಾಗುವ ಹೊತ್ತಿಗೆ ಕಂಪೆನಿ ನಷ್ಟದ ಬಹುದೂರದ ಹಾದಿಯನ್ನು ಕ್ರಮಿಸಿಯಾಗಿತ್ತು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ”

Read More

ವೈಕಂ, ದೇವರಾಜ ಅರಸು, ಮೇಷ್ಟ್ರು ಅರುಣ್‌ದೇವ್, ಪ್ರೊಫೆಸರ್ ಎಂ.ಡಿ.ಎನ್ ಮತ್ತು `ದ್ಯಾವನೂರು’: ಎಸ್. ಗಂಗಾಧರಯ್ಯ ಅನುಭವ ಕಥನ

ತುಂಬಾ ಹತ್ತಿರಕ್ಕೆ ಹೋಗಿ ನಿಂತು ಕತ್ತೆತ್ತಿ ನೋಡಿ `ನಮಸ್ತೆ ಸರ್’ ಅಂದೆ. ಮುಗುಳ್ನಕ್ಕರು. ನಂತರ ಅವರು ತಮ್ಮೆದುರಿಗೆ ರಸ್ತೆ ಪಕ್ಕದಲ್ಲಿದ್ದ ಚರಂಡಿಯ ಬಳಿ ಬಂದು ನಿಂತು `ಇಲ್ಲೊಬ್ರು ಎಳ್ನೀರು ಕೊಚ್ತಾ ಇದ್ರಲ್ಲ, ಅವ್ರು ಇವತ್ತು ಬಂದಿಲ್ವೇನಪ್ಪ’ ಅಂತ ಆ ವ್ಯಕ್ತಿಯ ಹೆಸರಿಡಿದು ಕೇಳಿದರು. ಅವರು ಕೇಳಿದ ವ್ಯಕ್ತಿಯ ಹೆಸರು ನನಗೀಗ ಮರೆತುಹೋಗಿದೆ. ಹೌದು ನಾನೂ ನೋಡಿದ್ದೆ. ಅಲ್ಲೊಬ್ಬರು ಹಳ್ಳಿಯಿಂದ ಎಳನೀರು ತಂದು ಮಾರಾಟ ಮಾಡುತ್ತಿದ್ದರು.
ಎಸ್.‌ ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ