Advertisement

Category: ಸರಣಿ

ನಗುವಿನ ನಾಡು ಥೈಲ್ಯಾಂಡ್‌: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಆನೆಯನ್ನು ಕೇವಲ ಒಂದು ಪ್ರಾಣಿಯಾಗಿ ಪರಿಭಾವಿಸಿಕೊಳ್ಳದೆ ಅದನ್ನು ಪೂಜನೀಯ ರೀತಿಯಲ್ಲಿ ಕಂಡ ದೇಶ ಥೈಲ್ಯಾಂಡ್. ಇಲ್ಲಿನ ಸಂಸ್ಕೃತಿ ಸಂಪ್ರದಾಯಗಳಲ್ಲಿ ಆನೆಗೆ ವಿಶೇಷವಾದ ಮಹತ್ವವಿದೆ. ಆನೆ ಇಲ್ಲಿನ ರಾಷ್ಟ್ರೀಯ ಪ್ರಾಣಿ ಎನಿಸಿಕೊಂಡಿದೆ. ಆನೆಗಳನ್ನು ಪೂಜಿಸುವ ವಿಶಿಷ್ಟ ಸಂಪ್ರದಾಯ ಇಲ್ಲಿಯದ್ದು. ಆನೆಯ ಅನೇಕ ಚಿತ್ರಗಳನ್ನು, ಕಲಾಕೃತಿಗಳನ್ನು ಇಲ್ಲಿ ಕಾಣಬಹುದು. 1917ನೇ ಇಸವಿಯವರೆಗೆ ಥೈಲ್ಯಾಂಡ್‌ನ ರಾಷ್ಟ್ರಧ್ವಜದಲ್ಲಿಯೂ ಸಹ ಆನೆಯ ಚಿತ್ರವನ್ನು ಕಾಣಬಹುದಾಗಿತ್ತು. ಉಳಿದೆಲ್ಲಾ ಆನೆಗಳಿಗಿಂತಲೂ ಶ್ವೇತವರ್ಣದ ಆನೆಗೆ ಇಲ್ಲಿ ಹೆಚ್ಚಿನ ಆದ್ಯತೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಥೈಲ್ಯಾಂಡ್ ದೇಶದ ಕುರಿತ ಬರಹ ನಿಮ್ಮ ಓದಿಗೆ

Read More

ಮರೆಯಲಾಗದ ರಾಜನೀತಿಜ್ಞ ಬಿ. ಸುಬ್ಬಯ್ಯ ಶೆಟ್ಟಿ: ರಂಜಾನ್ ದರ್ಗಾ ಸರಣಿ

ಬಾಕ್ರಬೈಲು ಸುಬ್ಬಯ್ಯ ಶೆಟ್ಟಿ ಅವರು 1972-1977 ಮತ್ತು 1978-1983 ಈ ಎರಡು ಅವಧಿಯಲ್ಲಿ ಸುರತ್ಕಲ್ ಶಾಸಕರಾಗಿದ್ದರು. ದೇವರಾಜ ಅರಸು ಅವರ ಮಂತ್ರಿಮಂಡಲದಲ್ಲಿ ಭೂಸುಧಾರಣಾ ಸಚಿವರಾದ ನಂತರ ವಾರ್ತಾ, ಇಂಧನ ಮತ್ತು ಶಿಕ್ಷಣ ಸಚಿವರಾಗಿ ಸೇವೆಸಲ್ಲಿಸಿದರು. ಶಿಕ್ಷಣದಲ್ಲಿಯೂ ಸುಧಾರಣೆ ತಂದರು. ರಾಜ್ಯದಲ್ಲಿ ಇಷ್ಟೊಂದು ಎಂಜಿನಿಯರಿಂಗ್ ಕಾಲೇಜುಗಳಾಗಲಿಕ್ಕೂ ಅವರೇ ಕಾರಣರು. ಕರ್ನಾಟಕದ ಎಲ್ಲ ಹೈಸ್ಕೂಲ್‌ಗಳಲ್ಲಿ ಮಹಿಳಾ ಕರಾಟೆ ಪಟುಗಳ ಮೂಲಕ ಹೆಣ್ಣುಮಕ್ಕಳಿಗೆ ಕರಾಟೆ ಕಲಿಸುವ ಕನಸನ್ನು ಹೊಂದಿದ್ದ ಅವರು ಆ ಕುರಿತು ಯೋಜನೆ ರೂಪಿಸಿದ್ದರು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಸಾವಕಾಶವಾಗಿ ಎಲ್ಲವನ್ನೂ ಹತ್ತಿರದಿಂದ ನೋಡುವ ಕವಿ: ಎಸ್. ಜಯಶ್ರೀನಿವಾಸ ರಾವ್ ಸರಣಿ

ವರ್ತಮಾನದ ಕಾಲದೊಳಗೆ ಇಣುಕಿ ನೋಡುವ, ಜೀವನದ ಜಾಲದಲ್ಲಿ ತನ್ನ ಸ್ಥಾನವನ್ನು ನಿರ್ಧರಿಸಿಕೊಳ್ಳುವಂತಹ ತನ್ನ ಸರಳ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಆತುರಪಡದೆ ಸಾವಕಾಶವಾಗಿ ಎಲ್ಲವನ್ನೂ ಹತ್ತಿರದಿಂದ ನೋಡುತ್ತಾರೆ, ವಸ್ತುಗಳು, ಪರಿಕಲ್ಪನೆಗಳು, ಘಟನೆಗಳನ್ನು ಸೂಕ್ಷ್ಮವಾಗಿ ಆಲಿಸುತ್ತಾರೆ ಮತ್ತು ಪ್ರತಿಯೊಂದೂ ತನ್ನ ಜ್ಞಾನವನ್ನು ತನಗೆ ಬಹಿರಂಗಪಡಿಸಲು ಅವಕಾಶ ಮಾಡಿಕೊಡುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಬಲ್ಗೇರಿಯಾ ದೇಶದ ಕವಿ ಎಕ್ಯಾಟರೀನಾ ಯೊಸಿಫೋವಾ-ರವರ
(Ekaterina Yosifova) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

ಬದುಕಿಗೆ ಪರಿಧಿಯ ಬರೆವ ಕರ್ಮಫಲವೆಂಬ ಕೈವಾರ: ರಾಮ್ ಪ್ರಕಾಶ್ ರೈ ಕೆ ಸರಣಿ

ಸುಜಿಗೆ ಒಳ್ಳೆಯ ಬದುಕಿತ್ತು. ಮಧುವಿನ ಪತ್ನಿಗೂ. ಆದರೆ, ಅವಳಲ್ಲಿನ ಖಾಲಿತನವನ್ನು ತುಂಬಲು ಆಕೆ ಹೊರಟಳು. ಸುಜಿ ಆ ಅವಕಾಶವನ್ನು ಬಳಸಿ ಆಕೆಯ ನಂಬಿಕೆ, ಆತ್ಮಾಭಿಮಾನದ ಜೊತೆಗೆ ಆಟವಾಡಿಬಿಟ್ಟ. ಇವೆಲ್ಲವೂ ನಡೆದಾಗ ಮಧು ಮೂಕ ಪ್ರೇಕ್ಷನಾಗಿದ್ದ. ಆದರೆ ಪತ್ನಿಯ ಮೇಲಿನ ಆತನ ಅಸ್ಖಲಿತ ಪ್ರೇಮ, ಗೌರವಕ್ಕೆ ಧಕ್ಕೆಯಾದಾಗ ಆತ ಹಿಂಸೆಯ ದಾರಿಯ ಹಿಡಿದ. ಸರಿ ತಪ್ಪುಗಳಾಚೆ ಇಂತಹ ಅದೆಷ್ಟೋ ಕ್ರಿಮಿಗಳಿಗೆ ‘ಸಾವು ಮಲಗಿರುತ್ತೆ ನಿನ್ನ ಪಕ್ಕದಲ್ಲೇ, ಗೊತ್ತಾಗೋದು ಎದ್ದಾಗಲೇ’ ಎಂದು ಪಾಠವಾಯಿತು ಆತನ ನಡೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಮಲಯಾಳಂನ ‘ಇಲಾ ವಿಳಾ ಪೂಂಚಿರಾ’ ಸಿನಿಮಾದ ವಿಶ್ಲೇಷಣೆ

Read More

ಮದುವೆಮನೇನೋ ಸಂತೆಕಟ್ಟೇನೋ: ಸುಮಾ ಸತೀಶ್ ಸರಣಿ

ಇಂತಾ ಜೋರಿನ ಅತ್ತೇ ಒಂದು ಪುಂಡ ಹಸಾನ ಪಳಗಿಸಿದ್ಲು. ಆ ಹಸು ಎಷ್ಟು ಜೋರು ಅಂದ್ರೇ ಯಾರಿಗೂ ಹಾಲು ಕರೆಯೋಕೇ ಬಿಡ್ತಿರಲಿಲ್ಲ. ನಮ್ಮತ್ತೇನೂ ಜೋರಲ್ವಾ. ಅದೂ ಜೋರು. ಇಬ್ರಲ್ಲೂ ಬಲು ಸ್ನೇಹ. ನಮ್ಮತ್ತೆ ಹಾಲು ಕರೆದರೆ ಕಮಕ್‌ ಕಿಮಕ್ ಅಂತಿರಲಿಲ್ಲ ತುಡುಗು ಮುಂಡೇದು. ಕೊನೇಗೆ ಮದುವೇ ದಿನ ಹಸೆಮಣೇ ಮೇಲಿದ್ದಾರೆ. ಈ ಹಸಾ ಹಾಲು ಕೊಡಲಿಲ್ಲ ಅಂತಾ ಹೇಳಿದ್ದಾರೆ. ನಮ್ಮತ್ತೆ ಹಸೇಮಣೇ ಮೇಲಿಂದ ಎದ್ದು ಹೋಗಿ ಹಾಲು ಕರೆದುಕೊಟ್ಟು ಬಂದಿದ್ದಾರೆ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಮದುವೆ ಮನೆಯ ಮತ್ತಷ್ಟು ವಿಷಯಗಳ ಕುರಿತ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ