Advertisement

Category: ವಾರದ ಕಥೆ

ಓಬಿರಾಯನ ಕಾಲದ ಕಥಾಸರಣಿಯಲ್ಲಿ ವ್ಯಾಸರಾವ್ ನಿಂಜೂರು ಬರೆದ ಕಥೆ

“ನರ್ಸಪ್ಪಯ್ಯ ಹಳೆಯ ಫೆವರ್ಲೂಬಾ ಅಲಾರಾಮ್ ಗಡಿಯಾರ ನೋಡುತ್ತಾರೆ, ನಾಲ್ಕು ಗಂಟೆ ಹತ್ತು ನಿಮಿಷ ತೋರಿಸುತ್ತಿತ್ತದು. ತಾನು ಎದ್ದಾಗಲೂ ಅದು ಅದೇ ಟೈಮ್ ತೋರಿಸುತ್ತಿದ್ದುದ್ದು ನೆನಪಾಗಿ, ಹಿಂದಣ ದಿನ ಸಂಜೆಯೇ ಅದು ನಿದ್ರಾಪರವಶವಾಗಿದೆ ಎಂದೂ, ತಾನು ಕೀ ಕೊಡಲು ಮರೆತು ಹೋಗಿದ್ದೂ ನೆನಪಾಗಿ ಒಲೆಗಳ ಕಟ್ಟಿಗೆ ಹಿಂದೆ ಮಾಡಿ ಗ್ಯಾಸ್ ಲೈಟ್ ಆರಿಸಿ ತಗಣೆಗಳ ಸೈನ್ಯವಿರುವ ಬೆಂಚಿಗೆ ತನ್ನ ಬೆನ್ನು ಬಲಿಕೊಟ್ಟರು.”

Read More

ಲಾರ್ಡ್ ಕಾರ್ನ್ ವಾಲಿಸ್ ಮತ್ತು ಕ್ವೀನ್ ಎಲಿಜಬೆತ್: ಅಬ್ದುಲ್ ರಶೀದ್ ಬರೆದ ಹೊಸ ಕಥೆಯ ಪೂರ್ಣರೂಪ

“ಈಗಲೂ ಹಾಗೆಯೇ. ಅವಳು ಮಣಿಸಬೇಕು. ನಾನು ತಣಿಯಬೇಕು. ಅವಳಿಗೆ ಅಷ್ಟೇ ಸಾಕು. `ನಾನು ಬೇಟೆಯ ನಾಯಿ, ನೀನು ಓಡುತ್ತಿರುವ ಜಿಂಕೆ’ ಎಂದು ಮೂವತ್ತು ವರ್ಷಗಳಿಂದ ಅಟ್ಟಿಸಿಕೊಂಡು ಬೇಟೆಯಾಡುತ್ತಲೇ ಇರುತ್ತಾಳೆ. ಅವಳು ನನ್ನ ಪಾಲಿನ ದೇವರು. ಇಷ್ಟು ಹೇಳಿದ ಮೇಲೆ ನನ್ನ ಮತ್ತು ಅವಳ ಹುಚ್ಚು ಬೇಟೆಯ ಕುರಿತು ಓದುಗರಾದ ನಿಮಗೆ ಕುತೂಹಲವೂ ಉದ್ರೇಕವೂ ಏಕಕಾಲದಲ್ಲಿ ಉಂಟಾಗುತ್ತಿರಬಹುದು.”

Read More

ಓಬೀರಾಯನ ಕಾಲದ ಕಥಾಸರಣಿಯಲ್ಲಿ ಗುರುರಾಜ ಮಾರ್ಪಳ್ಳಿ ಬರೆದ ಕತೆ

“ಮನುಷ್ಯನಿಗೆ ಹಾಳಾಗಲಿಕ್ಕೆ ಒಂದು ಕಾಲ. ಒಳ್ಳೆಯದಾಗಲಿಕ್ಕೆ ಒಂದು ಕಾಲ. ಸಾಮಾನ್ಯ ಅದೇ ಟೈಮಿಗೆ ಇರಬಹುದು, ವೆಂಕಟರಾಯರ ದಂಡು ಮದರಾಸಿನಿಂದ ಹೆಂಡತಿಯನ್ನು ಕರೆದುಕೊಂಡು ಟಾಂಗಾದಿಂದ ಬರುತ್ತಿತ್ತು. ಆ ಬ್ಯಾಗು ಹೋಲ್ಡಾಲು, ಹೆಂಡತಿಯ ತುಟಿಗೆ ಮೆತ್ತುವ ರಂಗು; ಆ ಚಪ್ಪಲಿ, ಆ ಬೂಟ್ಸು, ಹ್ಯಾಟು, ಪ್ಯಾಂಟು, ಕೋಟು, ವಾಕಿಂಗ್ ಸ್ಟಿಕ್, ಐ ರಿಮೆಂಬರ್ ಎವರಿಥಿಂಗ್, ಅಂಡರ್ಸ್ಟೇಂಡ್…”

Read More

ನವೀನ್ ಮಧುಗಿರಿ ಬರೆದ ಕಥೆ “ಬೆಳಕು”

“ಇಷ್ಟೊತ್ತು ಗುಡುಗುತ್ತಿದ್ದ ಯಜಮಾನ ಈಗ ನಕ್ಕ. ‘ಎಲ್ಲಾ ನಂದೇ; ಇಲ್ಲಿರೋ ಕಾಡು, ಮರ, ಭೂಮಿ ಎಲ್ಲಾ ನಂದೇ..’ ಗಹಗಹಿಸಿ ಜೋರಾಗಿ ನಕ್ಕ. ಜೋರುಮಳೆ ಬಂದು ನಿಂತಂತೆ ಯಜಮಾನನ ನಗು ನಿಂತಿತು. ಐದಾರು ಬಾರಿ ಚಿಲುಮೆಯ ಕಿಡಿ ಕತ್ತಲಿನಲ್ಲಿ ಯಜಮಾನನ ಕೈ ಬಾಯಿಯ ಹಾದಿಯಲ್ಲಿ ಓಡಾಡಿತು. ಆ ಸಮಯ ಅಲ್ಲಿರುವ ಪ್ರತಿಯೊಬ್ಬರ ಉಸಿರಾಟದ ಶಬ್ದವು ಸ್ಪಷ್ಟವಾಗಿ ಕೇಳಿಸುವಷ್ಟು ನಿಶ್ಯಬ್ದ ಇತ್ತು. ಆ ನಿಶ್ಯಬ್ದವನ್ನು ಸೀಳಿ ಯಜಮಾನನ ಆಜ್ಞೆಯ ನುಡಿ ಬಂತು.”

Read More

ಓಬಿರಾಯನಕಾಲದ ಕಥಾಸರಣಿಯಲ್ಲಿ ಕುಕ್ಕೇಟಿ ಮಾಧವ ಗೌಡ ಬರೆದ ಕಥೆ

“ಅಜ್ಜ ಅಡ್ಕಾರಿಗೆ ಹೋದದ್ದು ಯಾಕೆ ಎಂದು ಅಮೇಲೆ ತಿಳಿಯಿತು. ಅವರು ಕ್ಷೌರ ಮಾಡಿಸಿಕೊಳ್ಳಲು ಹೋಗಿದ್ದರು. ಮರುದಿನ ಅಮ್ಮ ಅಜ್ಜನ ಸ್ವಚ್ಛ ಬಟ್ಟೆಗಳನ್ನು ಮಡಚಿ ತಂದು ಅಜ್ಜನಿಗೆ ಕೊಟ್ಟರು. ನಾನು ಕಿಸ್ತು ಕಟ್ಟಲು ಹೋಗುವ ನಮ್ಮ ಅಜ್ಜನ ಸಡಗರವನ್ನು ಗಮನಿಸುತ್ತಿದ್ದೆ. ಯಾವುದೋ ರಾಜಕಾರ್ಯಕ್ಕೆ ಹೋಗುವವರಂತೆ ಅಜ್ಜ ಸಂಭ್ರಮಿಸುತ್ತಿದ್ದರು. ಒಗೆದು ಶುಚಿಯಾಗಿದ್ದ ಮೊಣಕಾಲಿನ ಕೆಳಗೆ ಬರುವಂಥ ಮುಂಡು ಉಟ್ಟು”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ