Advertisement

Category: ಅಂಕಣ

ಮಾನವೀಯತೆಗಾಗಿಯೇ ಜೀವ ತೇದವರ ನೆನೆಯುತ್ತಾ…

‘ವರ್ಣ’ ಅಪ್ಪಟ ದಲಿತ ಜಗತ್ತಿನ ಪ್ರಾತಿನಿಧಿಕ ಕವಿತೆ. ಕವಿ ಸುಮ್ಮನೆ ಎಲೆಮರೆಯ ಕಾಯಿಯಂತಿದ್ದರೂ ಬಿಡದೆ ಪ್ರಚೋದಿಸಿ ಅಖಾಡಕ್ಕೆ ಕರೆದು ಕೊನೆಗೆ ಮಣ್ಣುಮುಕ್ಕುವ ಉಢಾಳರಿಗೆ ಎಚ್ಚರಿಕೆಯಂತಿದೆ ಈ ಕವಿತೆ. “ಹಸಿರು, ಕೆಂಪು, ಕಪ್ಪು, ಬಣ್ಣಗಳೊಳಗೆ ಕರಗಿಹೋದ ದಲಿತರ ನೆತ್ತರು ಮತ್ತು ಬೆವರು ಉಳ್ಳವರನ್ನು ಉಸಿರುಗಟ್ಟಿ ಸಾಯಿಸಿದರೆ ಆಶ್ಚರ್ಯಪಡಬೇಕಿಲ್ಲ”. ‘ಹಸಿವು’ ಕವಿತೆ ಅವ್ವನ ಉದಾರತನವನ್ನೂ ಆಕೆಯ ಸಂಸ್ಕಾರವನ್ನೂ ದರ್ಶಿಸಿ ದಂಗುಬಡಿಸುತ್ತದೆ. ಹಸಿವು ಎಂದು ಬಂದವರಿಗೆ ತನ್ನ ಪಾಲಿನ ತಟ್ಟೆಯಲ್ಲಿದ್ದ ಹಿಟ್ಟನ್ನು ಕೊಟ್ಟುಬಿಡುತ್ತಾಳೆ. ಅಭಿಷೇಕ್‌ ವೈ.ಎಸ್. ಬರೆಯುವ “ಕಾವ್ಯದ ಹೊಸ ಕಾಲ” ಅಂಕಣ

Read More

ಸಾಂಘಿಕವಾದ ಕ್ರಿಸ್ಮಸ್ ಸೀಸನ್ ಶುಭಾಶಯಗಳು

ಬಹುಶಃ ಪ್ರಪಂಚದಾದ್ಯಂತ ಕೋಟ್ಯಾಂತರ ಮಕ್ಕಳು ಎದುರು ನೋಡುವ, ಹಾಗೆ ಗಪ್ ಚಿಪ್ ಆಗಿ ಚಿಮಿಣಿಯಲ್ಲಿ ಸಾಂಟಾ ಬಂದು ಕೊಡುವ ಉಡುಗೊರೆಗಾಗಿ ಕಾಯುವ ಯಾವೊಂದು ಮಗುವಿಗೂ ನಿರಾಸೆಯಾಗದ ಸಂದರ್ಭ ಈ ಕ್ರಿಸ್ಮಸ್ ಸೀಸನ್. ಇದು ‘giving’ ಸೀಸನ್. ಅಂದರೆ ನಾವು ಮನಃಪೂರ್ವಕವಾಗಿ ಕೈಲಾದಷ್ಟು ದಾನ ಮಾಡುವ ಕಾಲ. ನಾವು ಕೊಡುವ ದಾನವು ಹಣದಿಂದ ಹಿಡಿದು ಬಟ್ಟೆ, ಉಡುಗೆತೊಡುಗೆ, ಮನೆವಸ್ತುಗಳು, ಪೀಠೋಪಕರಣಗಳು, ಪುಸ್ತಕಗಳು, ಆಹಾರ ಪದಾರ್ಥ, ಎಂಬಂತೆ ನಾನಾತರಹವಾಗಿ ನಾವು ದಾನವೀಯಬಹುದು.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ರೈತನ ಮಿತ್ರ ಎರೆಹುಳು ಆದರೆ ಅದರ ವೈರಿ…?

ಮಾನವನ ಪ್ರಕೃತಿಯ ಮೇಲಿನ ದಬ್ಬಾಳಿಕೆಗೆ ಇದೊಂದು ಸಣ್ಣ ಉದಾಹರಣೆ ಅಷ್ಟೆ. ಟ್ರಾಕ್ಟರ್‌ನಂತಹ ಯಂತ್ರ ಎಲ್ಲರಂತೆಯೇ ಜೀವಿಸುವ ಹಕ್ಕಿರುವ ಹಾವಿನ ಜೀವಕ್ಕೆ ಕುತ್ತು ತಂದಿತ್ತು. ಹಾವು ಕಣ್ಣಿಗೆ ಕಾಣುವ ಜೀವ. ಇನ್ನೂ ಸೂಕ್ಷ್ಮವಾಗಿರುವ ಕಣ್ಣಿಗೆ ಕಾಣದ ಎಷ್ಟೋ ಜೀವಗಳು ಮಣ್ಣಿನಲ್ಲಿ ಬೆರೆತು ವಾಸ ಮಾಡುತ್ತವೆ. ಅವುಗಳನ್ನೆಲ್ಲ ಬುಡಮೇಲು ಮಾಡಿ ಕತ್ತರಿಸಿ ಹಾಕಲು ನಮಗೆ ಹಕ್ಕಿದೆಯೆ? ಅಲ್ಲೊಂದು ನಮಗರಿವಿಲ್ಲದೆ ಉಸಿರಾಡುತ್ತಿರುವ ಜಗತ್ತು ಇದೆ. ಅವುಗಳಿಂದ ನಮ್ಮ ಗಿಡ ಮರಗಳಿಗೆ ಪೋಷಣೆಯೂ ನಿರಂತರವಾಗಿ ಸಿಗುತ್ತಿದೆ.
ಗುರುಪ್ರಸಾದ್‌ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣ

Read More

ಅಂಗೈ ಗೆರೆಗಳಾಗುವುದಿಲ್ಲ ಭವಿಷ್ಯದ ಹೆದ್ದಾರಿಗಳು

ನನಗೆ ನನ್ನ ಭವಿಷ್ಯದ ಬಗ್ಗೆ ತಿಳಿಯುವ ಕುತೂಹಲವುಂಟಾಗಿ ನನ್ನ ಅಂಗೈಯನ್ನು ಅವನ ಮುಂದೆ ಮಾಡಿದೆ. ಆ ಭವಿಷ್ಯಗಾರ ಇಡಿ ನನ್ನ ಅಂಗೈ ಜಾಲಾಡಿ ‘ನಿನ್ನ ವಿದ್ಯಾಭ್ಯಾಸ ಇಲ್ಲಿಗೆ ಕೊನೆ ಆಗತೈತಿ. ಇನ್ ಮುಂದಾ ಓದಾಕ ಹೋಗಬ್ಯಾಡ. ಓದಿದ್ರೂ ತಲಿಗೆ ಹತ್ತಾಂಗಿಲ್ಲ. ಈ ಲಾರಿನ ನಿನಗ ಗತಿ ಆಗ್ತೇತಿ’ ಅಂತ ಹೇಳಿ ಇಳಿದು ಹೋಗಿಬಿಟ್ಟ. ಅಂಗೈ ಮೇಲಿನ ಭವಿಷ್ಯ ನಿಜಾನೋ ಸುಳ್ಳೋ ಒಂದು ತಿಳಿಯದ ವಯಸ್ಸದು. ಯಾರಾದ್ರೂ ಏನಾದ್ರೂ ಹೇಳಿಬಿಟ್ಟರೆ ನಂಬಿಬಿಡುವ ಮುಗ್ಧತೆಯೋ ದಡ್ಡತನವೋ ಆಗ ನನ್ನಲ್ಲಿತ್ತು. ಇಸ್ಮಾಯಿಲ್‌ ತಳಕಲ್‌ ಅಂಕಣ

Read More

ಯಕ್ಷಗಾನ ಸಂಘಟಕರ ಸಂದರ್ಶನ…

ನಿಜವಾಗಿ ಹೇಳೊದಂದ್ರೆ ನಮಗೆ ಯಕ್ಷಗಾನದ ಮೇಲಿರೊ ಪ್ರೀತಿನೆ ಯಕ್ಷಗಾನ ಮಾಡಿಸೋಕೆ ಇರೊ ಕಾರಣ. ಇಲ್ಲಿ ಪ್ರತಿ ದಿನ ಒಂದಿಪ್ಪತ್ತು ಜನ ಇಲ್ಲಿ ಸೇರ್ತೇವಲ್ಲ, 365 ದಿನನೂ ಯಕ್ಷಗಾನದ ಏನಾದ್ರು ಒಂದು ಸುದ್ದಿ ಮಾತಾಡೇ ಆಡ್ತಿವಿ. ಮಳೆಗಾಲದಲ್ಲಿ ತಾಳಮದ್ದಲೆ ನೋಡ್ತಿವಿ. ಇಲ್ಲಿ ಈ ತರ ಅರ್ಥ ಹೇಳಿದರು. ಅಲ್ಲೊಂದು ಆಟ ನೋಡಿಕೊಂಡು ಬಂದೆ, ಹಿಂಗಾಯಿತು, ಹಂಗಾಯಿತು ಅಂತ ಏನೊ ಒಂದು ಮಾತು ಇರತ್ತೆ.
“ಯಕ್ಷಾರ್ಥ ಚಿಂತಾಮಣಿ” ಅಂಕಣದಲ್ಲಿ ಕೃತಿ ಆರ್ ಪುರಪ್ಪೇಮನೆ ಬರಹ

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ