Advertisement

Category: ಅಂಕಣ

ಸುಳಿಯ ಸೆಳವಿಗೆ ಸಿಲುಕದೇ…

ಮನುಷ್ಯ ಮುಕ್ತವಾಗಿ ಮತ್ತು ಸ್ವಚ್ಛಂದವಾಗಿ ಬೇರೆಯವರ ಜೊತೆ ಕಲೆಯಲು ರಂಗಭೂಮಿಗೆ ಬರಬೇಕು. ಅಲ್ಲಿ ಇರುವ ಮಜವೇ ಬೇರೆ. ಪ್ರೀತಿಯಲ್ಲಿ, ಸಲಿಗೆಯಲ್ಲಿ ಮತ್ತು ಸ್ನೇಹದಲ್ಲಿ ಕಾಲೆಳೆಯುವ ಬಗೆಗಳು ಇಲ್ಲಿ ಪಡೆದುಕೊಳ್ಳುವ ಆಯಾಮವೇ ಬೇರೆ. ಮೇಕಪ್‍ಗೆ ಕೂತರೆ ಮತ್ತು ರಂಗಕ್ಕೆ ಬಂದರೆ ಅಲ್ಲಿ ಅವರ ಚಹರೆ ಬೇರೆ. ಈ ಎಲ್ಲ ತಿಳಿದು ಮತ್ತು ಸಮುದ್ರದ ಬಗೆಗೆ ನನ್ನಲ್ಲಿ ಮೊದಲಿಂದ ಇರುವ ಸೆಳೆತದಿಂದ ಹೊರಟೆ. ಟಿಟಿಯಲ್ಲಿ ಹುಡುಗರ ಗೇಲಿ. ಪರಸ್ಪರ ಕಾಲೆಳೆಯುವ ಗುಣ ನಗು ತರಿಸುತ್ತಿತ್ತು.
ಎನ್.ಸಿ. ಮಹೇಶ್‌ ಬರೆಯುವ “ರಂಗ ವಠಾರ” ಅಂಕಣ

Read More

ಟಿಶ್ಯೂಮಾರುವ ಹುಡುಗ ಸುಳ್ಳು ಹೇಳಲಿ ಬಿಡಿ

ಕೊನೆಗೂ ಉಷಾ ಇದ್ದ ಅಪಾರ್ಟ್ಮೆಂಟ್ ಬಂತು. ಲಿಫ್ಟ್ ಕಾರ್ನರ್ ಪ್ರವೇಶ ಮಾಡುವ ಮೊದಲೇ ಒಂದು ಮಂಟಪದಂತಹ ಜಾಗದಲ್ಲಿ ನಿಂತು ಅದರ ನಾಲ್ಕೂ ಮೂಲೆಗೂ ಹಬ್ಬಿದ್ದ ಮಲ್ಲಿಗೆ ಬಳ್ಳಿಯನ್ನು ನೋಡುತ್ತಾ ಅದರ ಸುಗಂಧವನ್ನು ಅಘ್ರಾಣಿಸಲು ನಿಂತರು. ಇಹದಲ್ಲಿ ನಿಂತು ಪರಲೋಕಕ್ಕೆ ಕೈಚಾಚಿ ನಿಂತ ಘಳಿಗೆಯಾಗಿ ನನಗದು ಕಂಡಿತು. ಆ ಕ್ಷಣದಲ್ಲಿ ನನಗವರ ಮೇಲೆ ಕ್ಯಾಬಲ್ಲಿ ಉಕ್ಕಿದ್ದ ಕೋಪವೆಲ್ಲಾ ಮಾಯವಾಯಿತು. ಉಷಾಳ ಗಂಡ ಅನಿಕೇತ್ ನೋಡುವುದಕ್ಕೆ ನಿಜಕ್ಕೂ ಚೆನ್ನಾಗಿದ್ದ.
ದಾದಾಪೀರ್‌ ಜೈಮನ್‌ ಬರೆಯುವ ಅಂಕಣ

Read More

ಆಶ್ರಯ ಕೊಡು-ಕೊಳ್ಳುವಿಕೆಯ ಕಹಿ ಸತ್ಯ

ತಮ್ಮ ದೇಶದಲ್ಲಿ ನಡೆಯುತ್ತಿರುವ ಆಂತರಿಕ ಯುದ್ಧ, ಗಲಾಟೆ, ಹಿಂಸೆ, ಸಾವು, ಮಿಲಿಟರಿ ಆಡಳಿತ ಎಂಬಂತೆ ಜೀವಹಾನಿಕಾರಕ ಪರಿಸ್ಥಿತಿಯಿದ್ದು ಜೀವ ರಕ್ಷಿಸಿಕೊಳ್ಳಲು ದೇಶ ಬಿಟ್ಟು ಬರುವ ಜನರು ಇತ್ತೀಚಿನ ದಶಕಗಳಲ್ಲಿ ಹೆಚ್ಚುತ್ತಿದ್ದಾರೆ. ಅಲ್ಲದೆ ಮಾನವ ಹಕ್ಕುಗಳ ಉಲ್ಲಂಘನೆ ಎಂಬ ಕಾರಣವನ್ನು ಮುಂದೆ ಮಾಡಿಕೊಂಡು ಕೂಡ ಸಾವಿರಾರು ಜನರು ದೇಶ ತೊರೆದು ಬೇರೆ ಕಡೆ ಆಶ್ರಯವನ್ನು ಬೇಡಿಕೊಂಡು ಹೋಗುತ್ತಾರೆ. ಇವರು ‘ಅಸೈಲಮ್ ಸೀಕರ್’ ಎಂದು ಕರೆಸಿಕೊಳ್ಳುತ್ತಾರೆ.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ದುಬಾರಿ ಲೋಕದಲ್ಲಿ ರಂಗಪ್ರದರ್ಶನಗಳ ಪೂರ್ವಾಪರ

ಧೈರ್ಯ ಮಾಡಿ ರಂಗಮಂದಿರದ ಬಾಡಿಗೆ ಕಟ್ಟಿ ನಾಟಕ ಮಾಡಲು ಮುಂದಾಗುತ್ತೇವೆ ಅಂತಿಟ್ಟುಕೊಳ್ಳಿ. ಜನ ಬರಬೇಕಲ್ಲ ? ಪೆಟ್ರೋಲ್ ದರ ಯಾವ ಶಿಖರವನ್ನ ಗುರಿಯಾಗಿಟ್ಟುಕೊಂಡಿದೆ ಎನ್ನುವುದು ತಿಳಿಯುತ್ತಿಲ್ಲ. ಅಡುಗೆ ಅನಿಲ ದರ ಕೇಳಿದರೆ ಎದೆ ಸ್ಫೋಟಗೊಳ್ಳುತ್ತದೆ. ಅಡುಗೆಗೆ ಬಳಸುವ ಎಣ್ಣೆ ತನಗೆ ಬೆಲೆ ಬರುತ್ತಿರುವುದಕ್ಕೆ ವ್ಯರ್ಥವಾಗಿ ಹಿಗ್ಗುತ್ತಿದೆ. ನೀವು ರಂಗಮಂದಿರಗಳ ಬಾಡಿಗೆ ದರ ಏರಿಸಿದರೆ ನಾವು ರಂಗತಂಡಗಳವರು ಏನು ಮಾಡಬೇಕು? ಎನ್. ಸಿ. ಮಹೇಶ್.  ಬರಹ

Read More

ಒಳ್ಳೆಯ ಮತ್ತು ಕೆಟ್ಟ ಸಮಾಚಾರಗಳ ಬೇವುಬೆಲ್ಲ

ಶುಭಕೃತ್ ಸಂವತ್ಸರವು ಅಡಿಯಿಟ್ಟಿದೆ. ಆದರೆ ಕಾಲವು ಅದೇ ಪ್ರಕಾರ ಒಳಿತುಕೆಡುಕುಗಳನ್ನು ಒಟ್ಟಿಗೆ ಕಟ್ಟಿಕೊಂಡು ಸಾಗುತ್ತಿದೆ.  ಪ್ರಕೃತಿ ವಿಕೋಪವೆಂಬ ಬೇವು, ಮಾನವೀಯತೆ ಎಂಬ  ಬೆಲ್ಲವನ್ನು  ಸಮಾನ ಮನಸ್ಸಿನಿಂದ ಸ್ವೀಕರಿಸಬೇಕಾಗಿದೆ. ಆಸ್ಟ್ರೇಲಿಯಾದಲ್ಲಿ  ಟೆನಿಸ್ ಪಟು ಆಶ್ ಬಾರ್ಟಿ ನಿವೃತ್ತಿಯ ಬೇಸರ. ಆದರೆ ಅವರ ಮುಂದಿನ ನಿರ್ಧಾರ ಖುಷಿ ಕೊಡುವುದು. ಪ್ರವಾಹವು ನೋವು ಕೊಡುವುದು. ಡಾ. ವಿನತೆ ಶರ್ಮ ಬರೆದ ಆಸ್ಟ್ರೇಲಿಯಾ ಪತ್ರದಲ್ಲಿ ಅಲ್ಲಿನ ಕ್ಷೇಮ ಸಮಾಚಾರಗಳನ್ನು ತಿಳಿಯೋಣ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ