ನಗುವಿನ ನಾಡು ಥೈಲ್ಯಾಂಡ್: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ
ಆನೆಯನ್ನು ಕೇವಲ ಒಂದು ಪ್ರಾಣಿಯಾಗಿ ಪರಿಭಾವಿಸಿಕೊಳ್ಳದೆ ಅದನ್ನು ಪೂಜನೀಯ ರೀತಿಯಲ್ಲಿ ಕಂಡ ದೇಶ ಥೈಲ್ಯಾಂಡ್. ಇಲ್ಲಿನ ಸಂಸ್ಕೃತಿ ಸಂಪ್ರದಾಯಗಳಲ್ಲಿ ಆನೆಗೆ ವಿಶೇಷವಾದ ಮಹತ್ವವಿದೆ. ಆನೆ ಇಲ್ಲಿನ ರಾಷ್ಟ್ರೀಯ ಪ್ರಾಣಿ ಎನಿಸಿಕೊಂಡಿದೆ. ಆನೆಗಳನ್ನು ಪೂಜಿಸುವ ವಿಶಿಷ್ಟ ಸಂಪ್ರದಾಯ ಇಲ್ಲಿಯದ್ದು. ಆನೆಯ ಅನೇಕ ಚಿತ್ರಗಳನ್ನು, ಕಲಾಕೃತಿಗಳನ್ನು ಇಲ್ಲಿ ಕಾಣಬಹುದು. 1917ನೇ ಇಸವಿಯವರೆಗೆ ಥೈಲ್ಯಾಂಡ್ನ ರಾಷ್ಟ್ರಧ್ವಜದಲ್ಲಿಯೂ ಸಹ ಆನೆಯ ಚಿತ್ರವನ್ನು ಕಾಣಬಹುದಾಗಿತ್ತು. ಉಳಿದೆಲ್ಲಾ ಆನೆಗಳಿಗಿಂತಲೂ ಶ್ವೇತವರ್ಣದ ಆನೆಗೆ ಇಲ್ಲಿ ಹೆಚ್ಚಿನ ಆದ್ಯತೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಥೈಲ್ಯಾಂಡ್ ದೇಶದ ಕುರಿತ ಬರಹ ನಿಮ್ಮ ಓದಿಗೆ
