Advertisement

Tag: ಅಕ್ಷತಾ ಕೃಷ್ಣಮೂರ್ತಿ

ಕಾಡಿನ ಮನೆಯ ಅಕ್ಕರೆಯ ಕಾವು

ಕಾಜುಗಾರ ಅವರು ಕಾಜುವಾಡಾದ ಮನೆಯನ್ನು ಶಿಕ್ಷಕರಿಗೆ ಬಿಟ್ಟುಕೊಟ್ಟಿದ್ದಾರೆ.  ಸದ್ಯಕ್ಕೆ ಅವರ ಮನೆ ಶಿಕ್ಷಕರಿಂದ ತುಂಬಿದೆ. ನಾಲ್ಕೈದು ಜನ ಶಿಕ್ಷಕ ,ಶಿಕ್ಷಕಿಯರು, ಒಂದೇ ಗ್ಯಾಸ್ ಒಲೆಯಲ್ಲಿ ತಯಾರಾಗುವ ಸಾಮೂಹಿಕ ಭೋಜನ. ಅದು ಬೇಕು ಇದು ಇರಲಿ ಎಂಬ ಯಾವುದೇ ತಗಾದೆ ಇಲ್ಲ.  ಇದ್ದ ಸಾಮಾನು ಗಮನಿಸಿ ಆಯಾ ದಿನದ ಮೆನು ರೆಡಿಯಾಗುತ್ತಿತ್ತು. ಏಕೆಂದರೆ ಒಮ್ಮೊಮ್ಮೆ ಅಡುಗೆಗೆ ಬೇಕಾದ ಪದಾರ್ಥಗಳು ಅಣಶಿಯಲ್ಲಿ ಸಿಗುತ್ತಿರಲಿಲ್ಲ. ಅದನ್ನು ದೂರದ ಕುಂಬಾರವಾಡಾ, ಜೋಯಿಡಾದಿಂದ ತರಿಸಬೇಕಿತ್ತು. ಇದ್ದ ಸಾಮಾನಿನಲ್ಲಿಯೆ ‘ಅಗ್ದಿ’ ಬೆಸ್ಟ ಎನಿಸಿದ ‘ಉಂಚಾ ಕ್ವಾಲಿಟಿ’ಯ ಸಾಮಾನು ತೆಗೆದು ಆರಿಸಿ ಅಂಗಡಿಯ ದಿನಕರ ಮಾಮಾ ಅವರು  ಮಾಸ್ತರರಿಗೆ..”

Read More

ಎರಡು ದಿನಗಳ ನಂತರ ಮಕ್ಕಳನ್ನು ನೋಡಿದ ಪಾಲಕರ ಕಣ್ಣು ತುಂಬಿತು

ಪರೀಕ್ಷೆ ಮುಗಿಸಿದ ಈಗಾಗಲೆ ಅಣಶಿಯಲ್ಲಿದ್ದ ಮಕ್ಕಳನ್ನು ಅವರವರ ಮನೆಗೆ ಮುಟ್ಟಿಸುವ ಜವಬ್ದಾರಿಯುತ ಕೆಲಸ ಶಿಕ್ಷಕರದ್ದಾಗಿತ್ತು. ಮಾರನೆಯ ದಿನ ಮಕ್ಕಳು ಮನೆಗೆ ತಲುಪಿದರು ಎಂಬ ತೃಪ್ತಿಯ ನಗು ಅವರಲ್ಲಿತ್ತು. ಆದರೆ ಶಿಕ್ಷಕರು ಮಕ್ಕಳನ್ನು ಮನೆಗೆ ಮುಟ್ಟಿಸುವ ಹೊತ್ತಲ್ಲಿ ಕೆಲವು ಮಕ್ಕಳ ಮನೆಗಳಿಗೆ ನೀರು ನುಗ್ಗಿ, ಕಷ್ಟ ಪಟ್ಟು ದುಡಿದ ಆಹಾರ ಧಾನ್ಯಗಳು, ಬಟ್ಟೆ, ಸಾಮಾನುಗಳೆಲ್ಲ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದವು.”

Read More

ಅಣಶಿ ಘಟ್ಟದ ಮೇಲಿನ ಹಾದಿ

ಈ ಘಟ್ಟದ ಮಾರ್ಗದಲ್ಲಿ ಸಾಗುತ್ತಿದ್ದರೆ ಯಾರೋ ಹಿಂಬದಿಯಿಂದ ನಮ್ಮನ್ನು ಗಮನಿಸುತ್ತ ಅನುಸರಿಸುತ್ತ ಬಂದ ಹಾಗೆ ಅನಿಸುತ್ತದೆ. ಪಡ್ಡೆ ಹುಡುಗರ ಹಾಗೆ ಸೀಟಿ ಹಾಕುತ್ತ ನಮ್ಮ ಬೆನ್ನ ಹಿಂದೆಯೇ ಯಾರೋ ಬಂದಂತೆ ಅನಿಸಿ, ತಿರುಗಿ ನೋಡಿದರೆ ಯಾರೂ ಕಾಣುವುದಿಲ್ಲ.  ಇದ್ದಕ್ಕಿದ್ದಂತೆ ಸೀಟಿಯ ಸದ್ದು ನಿಲ್ಲುತ್ತದೆ. ಹೀಗೆ ಕಾಡುವ ಪಡ್ಡೆ ಹುಡುಗನ ಹೆಸರು ‘ನೀಲಿ ಸಿಳ್ಳಾರ’.  ಈ ವಿಶಿಷ್ಟ ಹಕ್ಕಿರಾಯ ಕಾಡಿನ ಸೊಬಗು ಹೆಚ್ಚಿಸುವವ. -ಅಕ್ಷತಾ ಕೃಷ್ಣಮೂರ್ತಿ ಬರೆಯುವ ‘ಕಾಳಿಯಿಂದ ಕಡಲಿನವರೆಗೆ’ ಸರಣಿಯಲ್ಲಿ ಕಾಡಿನ ವಿಸ್ಮಯಗಳ ವಿವರ. 

Read More

ಹಸಿರಿನ ಮಡಿಲಲ್ಲಿ ಕುಣಬಿಯವರ ಹಾಡುಹಬ್ಬ

“ಒಂದು ನಿರ್ದಿಷ್ಟ ಮರದ ಬುಡದಿಂದ ತುದಿಯವರೆಗೂ ಹಣ್ಣುಗಳು ಇದ್ದರೆ ಬಹಳ ಮಳೆಯೆಂದು, ಕಡಿಮೆ ಹಣ್ಣು ಇದ್ದರೆ ಮಳೆ ಕಡಿಮೆ ಎಂದು, ನಡು ನಡುವೆ ಹಣ್ಣು ಇದ್ದರೆ ಮಳೆ ಒಮ್ಮೊಮ್ಮೆ ಹೆಚ್ಚು ಕಡಿಮೆ ಆಗಬಹುದೆಂದೂ ಖಚಿತವಾಗಿ ಹೇಳುತ್ತಾರೆ. ಕುಣಬಿ ಸಮುದಾಯಕ್ಕೆ ಯುಗಾದಿಯೆಂದರೆ ಪ್ರಕೃತಿಯ ಮಡಿಲಿನಲ್ಲಿ ಕುಳಿತೊಂದು ಹಾಡು ಹಾಡಿದಂತೆ.
ಈ ವರ್ಷದ ಯುಗಾದಿಯ ಸಂಭ್ರಮಕ್ಕೆ ಅಕ್ಷತಾ ಕೃಷ್ಣಮೂರ್ತಿ ಬರಹ ನಿಮ್ಮ ಓದಿಗೆ…”

Read More

ಅಕ್ಷತಾ ಕೃಷ್ಣಮೂರ್ತಿ ಪುಸ್ತಕಕ್ಕೆ ಡಾ. ಸರಜೂ ಕಾಟ್ಕರ್ ಬರೆದ ಮಾತುಗಳು

“ಅಕ್ಷತಾ ನದಿ ಹಾಗೂ ಸಮುದ್ರ ಎರಡನ್ನು ಕಂಡವರು. ಕಾಳಿ ನದಿಯಲ್ಲಿ ಈಜಾಡಿದವರು. ಅರಬ್ಬೀ ಸಮುದ್ರವನ್ನು ಅಪ್ಪಿಕೊಂಡಿದ್ದವರು. ಕಾಳಿ ಅಣೆಕಟ್ಟು ಒಡೆದಿದೆ ಎಂಬ ಗಾಳಿ ಸುದ್ದಿ ಹರಡಿದಾಗ ಜನರಲ್ಲಿ ಎದ್ದ ಕೋಲಾಹಲವನ್ನು ಬಹಳ ಸಮರ್ಥವಾಗಿ ಕವಿತೆಯೊಂದರಲ್ಲಿ ಕಟ್ಟಿಕೊಟ್ಟಿದ್ದಾರೆ. ಅದೇ ಕಾಳಿಯನ್ನು ಅಣೆಕಟ್ಟಿನಲ್ಲಿ ಬಂಧಿಸಿ ಖೈದಿ ಮಾಡಿದ್ದನ್ನು ಅವರು ಇನ್ನೊಂದು ಕವಿತೆಯಲ್ಲಿ ಚಿತ್ರಿಸಿದ್ದಾರೆ.”

Read More
  • 1
  • 2

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ