ಓದಿದ ಕವಿತೆಗಳು ಜೀವನದ ಕದ ತಟ್ಟುವುದರ ಕುರಿತು: ಆಶಾ ಜಗದೀಶ್ ಅಂಕಣ
ಈ ಪದ್ಯ ಓದಿದ ಎಷ್ಟೋ ವರ್ಷಗಳ ನಂತರ ಇದು ನನ್ನ ಜೀವನದಲ್ಲಿ ನನ್ನ ಅನುಭವಕ್ಕೆ ಬರುತ್ತದೆ ಎಂದು ನಾನು ತಿಳಿದಿರಲಿಲ್ಲ. ಕವಿಯೊಬ್ಬನ ಭಾವ ಓದುಗನ ಭಾವ ಆಗುವುದೇ ಒಂದು ಸಾಕ್ಷಾತ್ಕಾರ. ಇಷ್ಟಪಟ್ಟ ಹಲವಾರು ಕವಿತೆಗಳೊಂದಿಗೆ ನಾವು ಕನೆಕ್ಟ್ ಆಗುವುದೇ ಹಾಗೆ. ಯಾವುದನ್ನು ನಾವು ತೀವ್ರವಾಗಿ ಅನುಭವಿಸಿರುತ್ತೇವೆಯೋ ಅದೇ ಭಾವ ಪದಗಳಾಗಿ ನಮ್ಮ ಮುಂದೆ ನಿಂತಾಗ ನಮಗೆ ಸೋಲದೆ ವಿಧಿ ಇರುವುದಿಲ್ಲ.
ಆಶಾ ಜಗದೀಶ್ ಬರೆವ ಪಾಕ್ಷಿಕ ಅಂಕಣ.