Advertisement

Tag: ಎಂ ಎಸ್ ಆಶಾದೇವಿ

ವಾಸ್ತವವಾದಿ ನೆಲೆಯಲ್ಲಿ ಮೈತಳೆದ ಕತೆಗಳು

ಸಿನಿಕತನದಲ್ಲಾಗಲೀ, ಅಸಹಾಯಕತೆಯಲ್ಲಾಗಲೀ ಇವರು ಅಳುತ್ತಾ, ಹಣೆಬರೆಹವನ್ನು ಹಳಿಯುತ್ತಾ ಕೂಡುವುದಿಲ್ಲ. ಹೀಗಿದ್ದಾಗಲೂ ಬಿಗಿಹುಬ್ಬಿನ ಕಾರ್ಪಣ್ಯದ, ಶಠತ್ವದ ಬದುಕನ್ನೂ ಇವರು ನಡೆಸುವುದಿಲ್ಲ. ಬದಲಿಗೆ ಅದೇ ಜೀವನೋತ್ಸಾಹದ, ಲವಲವಿಕೆಯ ವ್ಯಕ್ತಿತ್ವವನ್ನು ಕೊನೆಯವರೆಗೂ ಉಳಿಸಿಕೊಳ್ಳುತ್ತಾರೆ. ತಿಳಿಗೇಡಿಯನ್ನು ಕಟ್ಟಿಕೊಂಡೇ ಬದುಕನ್ನು ಗೆಲ್ಲುತ್ತಾ ಹೋಗುವ ಈ ಹೆಣ್ಣು ಮಕ್ಕಳು ಇವರಿಬ್ಬರೂ ಮನೆಯಲ್ಲಿಲ್ಲದ ಹೊತ್ತಿನಲ್ಲಿ ಆತ ಮಿತಿಮೀರಿ ತಿಂದ ಜಾಮೂನಿನ ಕಾರಣಕ್ಕೆ ಕಳೆದುಕೊಳ್ಳುವುದು ವಿಕಟ ವ್ಯಂಗ್ಯದಂತೆ ನಮಗೆ ಕಾಣಿಸುತ್ತದೆ.
ಶೋಭಾ ಗುನ್ನಾಪೂರ ಕಥಾ ಸಂಕಲನ “ಭೂಮಿಯ ಋಣ”ಕ್ಕೆ ಎಂ.ಎಸ್. ಆಶಾದೇವಿ ಬರೆದ ಮುನ್ನುಡಿ

Read More

ಎ.ಎನ್.‌ ಪ್ರಸನ್ನ “ಅಲೆಗಳು” ಕಾದಂಬರಿಗೆ ಎಂ. ಎಸ್ . ಆಶಾದೇವಿ ಮುನ್ನುಡಿ

ಇಲ್ಲಿಂದ ಮುಂದಿನ ಗೋವಿಂದಪ್ಪನವರ ಸಂಬಂಧವು ವಿಸ್ತಾರಗೊಳ್ಳುತ್ತಾ ಹೋಗುತ್ತದೆ. ಅದಕ್ಕೆ ಈ ಸಂಬಂಧ ಎಷ್ಟು ಕಾರಣ ಎನ್ನುವುದು ಕಾದಂಬರಿಯಲ್ಲಿ ಎಲ್ಲೂ ಪ್ರಸ್ತಾಪವಾಗುವುದಿಲ್ಲ. ಆದರೆ, ವೈದ್ಯರ ಹತ್ತಿರ ಹೋದ ಗೋವಿಂದಪ್ಪನವರಿಗೆ ಇನ್ನಿರುವುದು ಎರಡೋ ಮೂರೋ ವರ್ಷವೋ ಎನ್ನುವುದು ತಿಳಿದಾದ ಮೇಲೆ, ಗೋವಿಂದಪ್ಪನವರು ಬಲುಬೇಗ ಅದನ್ನು ಸತ್ಯವಾಗಿ ಒಪ್ಪಿಕೊಂಡದ್ದೇ ಹಕ್ಕಿಯಂತೆ ಹಗುರವಾಗುತ್ತಾ ಹೋಗುವುದು ಮಾತ್ರ ನಮ್ಮಲ್ಲಿ ಬೆರಗನ್ನೂ ಸಂತೋಷವನ್ನೂ ಉಂಟುಮಾಡುತ್ತದೆ. ಸಾವನ್ನು ಘನತೆಯಿಂದ ಒಪ್ಪುವುದು ಹುಲುಮಾನವರಿಗೆ ಅಸಾಧ್ಯ ಎನ್ನುವ ನಮ್ಮ ರೂಢಿಗತ ನಂಬಿಕೆಯನ್ನೇ ಗೋವಿಂದಪ್ಪ ತಿರುವುಮುರುವು ಮಾಡುತ್ತಾರೆ.
ಎ.ಎನ್. ಪ್ರಸನ್ನ ಹೊಸ ಕಾದಂಬರಿ “ಅಲೆಗಳು” ಗೆ ಎಂ.ಎಸ್. ಆಶಾದೇವಿ ಬರೆದ ಮುನ್ನುಡಿ

Read More

ಶ್ರುತಿ ಬಿ.ಆರ್‌. ಕವನ ಸಂಕಲನಕ್ಕೆ ಎಂ.ಎಸ್. ಆಶಾದೇವಿ ಬರೆದ ಮುನ್ನುಡಿ

“ಕಲ್ಲಾಗುವುದು ಶಾಪವೋ ಶಿಕ್ಷೆಯೋ ಆಗದೆ ತನ್ನ ಆಯ್ಕೆಯೇ ಆಗಬಹುದಾದ ಸಾಧ್ಯತೆಯನ್ನು ಹೇಳುತ್ತಲೇ ಕಲ್ಲಾಗುವುದು ಕೂಡ ಬಂಡಾಯದ ಒಂದು ಪರಿಯೂ ಹೌದು ಎನ್ನುವುದನ್ನು ಸೂಚಿಸುತ್ತಿದೆ. ಪಾಂಡವರು ಬಂದು ಬಾಳು ಕೊಡದ ಕಾರಣಕ್ಕಾಗಿ ಇನ್ನೂ ಮುಡಿ ಕಟ್ಟಿಲ್ಲದ ದ್ರೌಪದಿಯಾಗಲೀ, ರಾತ್ರಿ ಪಾಳಿಯಲ್ಲಿ ಕಾಲ್ ಸೆಂಟರಿನಲ್ಲಿ ಕೆಲಸ ಮಾಡುತ್ತಿರುವ ಸೀತೆಯಾಗಲೀ, ಸೇಲ್ಸ್ ಗರ್ಲ್ ಆಗಿರುವ ರಾಧೆಯಾಗಲೀ ಧ್ವನಿಸುತ್ತಿರುವುದು ಹೆಣ್ಣಿನ ಮುಗಿಯದ ಹೋರಾಟವನ್ನೇ.”

Read More

‘ಕಾವ್ಯದ ಮೇಲಿನ ಅನುರಕ್ತಿ ಇಲ್ಲಿದೆ’:ಭುವನಾ ಕವಿತೆಗಳಿಗೆ ಆಶಾದೇವಿ ಮುನ್ನುಡಿ

“ಟ್ರಯಲ್ ರೂಮಿನ ಅಪ್ಸರೆಯರಿಗೆ ಕೊನೆಗೂ ಉಳಿಯುವು ಆಯ್ಕೆ ಯಾವುದು? ಸ್ವಮರುಕವೆ? ಆಕ್ರೋಶವೆ? ವಿಷಾದವೆ? ಈ ಪ್ರಶ್ನೆಗಳ ಪ್ರಸ್ತಾಪವೇ ಹಳಹಳಿಕೆಯಂತೆ ಕಂಡರೆ ಅದು ಸಂವೇದನೆಯ ದೋಷವಲ್ಲವೆ? ಸಂಕೀರ್ಣವಾದ ಹೆಣ್ಣಿನ ವಿಷಯಗಳನ್ನು ಸರಳಗೊಳಿಸದೇ ಅದರ ಸಾಂದ್ರತೆಯಲ್ಲಿ ಇದು ಮಂಡಿಸುತ್ತದೆ.”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ