‘ಮೋಹಿತ’ನ ಮೋಹಕ ಕವಿತೆಗಳು: ಅಬ್ದುಲ್ ರಶೀದ್ ಕವನ ಸಂಕಲನಕ್ಕೆ ಎಸ್. ಮಂಜುನಾಥ್ ಮುನ್ನುಡಿ
ಕರಗಿ-ಹರಿಯುವ- ಈ ಶಬ್ದಗಳನ್ನು ಬಳಸಬೇಕಾಗುವುದರಿಂದ ರಶೀದರದ್ದು ಒಂದು ‘ದ್ರವ ಪ್ರತಿಭೆ’! ತನ್ನನ್ನು ಪೂರಾ ಬಿಟ್ಟುಕೊಟ್ಟೇ ಹರಿದುಹೋಗುವಂತಿರುವುದು ನದಿಯ ಜೀವಂತಿಕೆ ತಾನೇ? ಇಷ್ಟು ಹೇಳಿದರೆ ರಶೀದರ ಕವಿತೆಯ ಗುಣವನ್ನು ಪೂರ್ತಿ ಹೇಳಿದಂತಾಗುವುದಿಲ್ಲ. ಅಷ್ಟು ವೈಚಿತ್ರ್ಯಗಳನ್ನು ಒಳಗೊಂಡುದು ಅದು. ಮಾತಿನಲ್ಲಿ ಪ್ರತಿಮೆಯಲ್ಲಿ ಚಿಂತನೆಯಲ್ಲಿ ಭಾವನೆಯಲ್ಲಿ ಹಾಗೆ ವಿಚಿತ್ರವಾದುದು. ಒಂದು ಕಾರಣ: ಇದು ಕವಿತೆಗೆ ಸೇರುವುದು. ಇದು ಸೇರಲಾರದ್ದು ಎಂಬ ಭೇದವಿರದೆ ಏನೆಲ್ಲವನ್ನು ಬೇಕಾದರೂ ಒಳಗೊಳ್ಳುವಂಥದು. ಹಾಗಿದ್ದೂ ಅಂತಿಮವಾಗಿ ಸಹಜತೆಯೇ ಹೆಗ್ಗುರುತಾದ್ದು.
ಅಬ್ದುಲ್ ರಶೀದ್ ಕವನ ಸಂಕಲನ “ನರಕದ ಕೆನ್ನಾಲಿಗೆಯಂಥ ನಿನ್ನ ಬೆನ್ನ ಹುರಿ”ಗೆ ಎಸ್. ಮಂಜುನಾಥ್ ಬರೆದ ಮುನ್ನುಡಿ