ವ್ಯಕ್ತಿಗಳ ತಲ್ಲಣಗಳ ಮೂಲಕ ರಾಜಕೀಯ ಸಾಮಾಜಿಕ ಪ್ರಶ್ನೆಗಳನ್ನು ಕೇಳುವ ಇಷಿಗುರೊ: ಎಸ್. ಸಿರಾಜ್ ಅಹಮದ್ ಅಂಕಣ
“ಸ್ಟೀವನ್ಸ್ ತನ್ನ ವೃತ್ತಿಯ ಹುಸಿ ಘನತೆ ಮತ್ತು ಹೊಣೆಗಾರಿಕೆಗಳಲ್ಲಿ ಅವನ ಒಳ ಬದುಕು ಎಷ್ಟು ಮುರುಟಿಹೋಗಿದೆ ಎಂದರೆ ಅವನು ಅಪರೂಪಕ್ಕೆ ಎಂಬಂತೆ ರೊಮ್ಯಾಂಟಿಕ್ ಕಾದಂಬರಿಯನ್ನು ಓದುವುದು ತನ್ನ ವೃತ್ತಿಗೆ ಅಗತ್ಯವಾಗಿ ಬೇಕಾದ ಇಂಗ್ಲೀಷನ್ನು ಸರಿಪಡಿಸಿಕೊಳ್ಳಲು ಮಾತ್ರ! ಸ್ಟೀವನ್ಸ್ ಏನು ಓದುತ್ತಾನೆ, ಅವನ ಕತ್ತಲಗೂಡಿನಂತಹ ಕೋಣೆಯಲ್ಲಿ ಯಾಕೆ ಒಂದು ಹೂಗುಚ್ಛವನ್ನೂ ಇಡಲು ಜಾಗವಿಲ್ಲ ಎಂದೆಲ್ಲ ಯೋಚಿಸುತ್ತ, ಅವನ ಅಂತರಂಗವನ್ನು ತಡವಿ, ಒಳಗನ್ನು ಅರಿತುಕೊಳ್ಳುವ ಆಸೆಯಿಂದ ಹೊರಡುವ ಮಿಸ್ ಕೆಂಟನ್ ಗೆ ಅಲ್ಲಿ ಕಾಣುವುದು ಇಂಥ ಒಣ ಶಿಷ್ಟಾಚಾರ, ವೃತ್ತಿಯ ಬಗೆಗಿನ ಕುರುಡು ನಿಷ್ಠೆ. ಮಾತ್ರ.”
ಎಸ್. ಸಿರಾಜ್ ಅಹಮದ್ ಬರೆಯುವ ಅಂಕಣ