ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕೇಶವ ಮಳಗಿ ಬರೆದ ಕತೆ
ಭಾಳ ಸಿಹಿಸುದ್ದಿಯೇನೂ ಅಲ್ಲ. ಆದರೂ, ಕಹಿಯಂತೂ ಅಲ್ಲಲ. ತೇರಿಗೆ ಹೂವುಹಣ್ಣು ಹಾಕವರಿದ್ರ ಇವತ್ತೇ ತಗೊಂಡು ತಯಾರಾಗ್ರಿ. ನಾಳೆ ಶಿಗತಾವೋ ಇಲ್ಲೋ. ಭಯಂಕರ ತುಟ್ಟಿನು ಇರತಾವು. ಬಿಸಿಲು ಏರಾಕ ಹೊಂಟೈತಿ. ಜರಾ ಚಹಾ ಕುಡೀತಿರೇನು ನೋಡ್ರಿ, ಹೇಳುತ್ತ ತಾನೂ ಹಗುರಾದಂತೆ ಬೋಲ್ಡಿ ಬಾಬಾ ಕೊಳವೆಗೆ ತಂಬಾಕು ತುಂಬಿ ಕಿಡಿ ಹಚ್ಚಿದ. ರುಕುಮವ್ವ, ಚಂದ್ರವ್ವಳನ್ನು ಕೈಯಿಂದ ಎಳೆದುಕೊಳ್ಳುತ್ತ ಬೆನ್ನು ಸವರಿ, ಸಮಾಧಾನ ಆತಿಲ್ಲವಾ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕೇಶವ ಮಳಗಿ ಬರೆದ ಕಥೆ