Advertisement
ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

ಎ.ಬಿ. ಪಚ್ಚು ಕುಟ್ಟಿದಪಲ್ಕೆ ಬರೆದ ಈ ಭಾನುವಾರದ ಕಥೆ

ಮೇಕೆಗಳೆಲ್ಲವೂ ರಸ್ತೆ ದಾಟಿದ ಮೇಲೆ ಲಾರಿ ಮುಂದಕ್ಕೆ ಚಲಿಸಲು ಆರಂಭಿಸಿತು. ಅದರದ್ದು ಈಗಲೂ ಒಂದೇ ವೇಗ. ನಿಂತುಕೊಂಡಿದ್ದವನು ಮತ್ತೆ ಲಾರಿಯಲ್ಲಿ ಕುಳಿತೆ. ಇನ್ನೊಮ್ಮೆ ನಾಯಿ ಕಡೆಗೆಯೇ ನೋಡಿದೆ. ಆಕಾಶದೆಡೆಗೆ ನೋಡುತ್ತಿದ್ದ ನಾಯಿ ತನ್ನ ಕಣ್ಣಿನಲ್ಲಿ ಏನನ್ನು ತುಂಬಿಕೊಳ್ಳುತಿತ್ತೋ, ಅದರ ಅಂತರಾತ್ಮ ಅದರೊಳಗಿನ ಪರಮಾತ್ಮ ಅದಕ್ಕೆ ಬದುಕಿನ ಯಾವ ದಿವ್ಯ ರಹಸ್ಯವನ್ನು ಹೇಳುತ್ತಿತ್ತೋ ಆ ಮೂಲಕ ಅದು ನನಗೆ ಏನನ್ನು ಪರೋಕ್ಷವಾಗಿ ತಿಳಿಸಲು ಪ್ರಯತ್ನ ಪಡುತ್ತಿದೆಯೋ ಎನ್ನುವುದು ನನಗೆ ಒಂಚೂರೂ ಗೊತ್ತಾಗಲಿಲ್ಲ.
ಎ.ಬಿ. ಪಚ್ಚು ಕುಟ್ಟಿದಪಲ್ಕೆ ಬರೆದ ಈ ಭಾನುವಾರದ ಕಥೆ “ಮೇಘ ಮಲ್ಹಾರ”

Read More

ಎ. ಬಿ. ಪಚ್ಚು ಬರೆದ ಈ ಭಾನುವಾರದ ಕತೆ

ಆ ರಾತ್ರಿ ಯಕ್ಷಗಾನ ಎಲ್ಲಾ ನೋಡಿ ಮುಗಿದು ಬೆಳಿಗ್ಗೆ ಮನೆಗೆ ತಲುಪಿದೆ. ಕಣ್ಣೀರಿನ ಹೊರತು ಆ ದಿನ ಸಮಜಾಯಿಷಿ ಕೊಡಲು ನನ್ನಲ್ಲಿ ಯಾವ ಮಾತುಗಳೂ ಇರಲಿಲ್ಲ. ನಿಜ ನಾನೇನು ತಪ್ಪು ಮಾಡಿರಲಿಲ್ಲ, ಆದರೆ ಯಾಕೋ ನನಗೆ ಅಮ್ಮನನ್ನು ಒಬ್ಬಳನ್ನೇ ಬಿಟ್ಟು ಹೋದ ಆ ತಪ್ಪಿತಸ್ಥ ಭಾವ ಆ ದಿನದಿಂದ ಬಹಳವಾಗಿ ಕಾಡಿತು ಮಹೇಶ. ಆ ನೋವಿನಿಂದಾಗಿ ಆ ದಿನದಿಂದ ನಾನು ಎಂದಿಗೂ ಯಕ್ಷಗಾನದತ್ತ ಕಣ್ಣು ಹಾಯಿಸಲೇ ಇಲ್ಲ.
ಎ.ಬಿ. ಪಚ್ಚು ಬರೆದ ಕತೆ “ಮೈಸಾಸುರ”

Read More

ಎ.ಬಿ. ಪಚ್ಚು ಬರೆದ ಈ ಭಾನುವಾರದ ಕತೆ

ನಾನು ಯಾವತ್ತೂ ಅವಳು ಈ ರೀತಿಯಾಗಿ ಕನಸಿನಲ್ಲಿ ಮಾತಾಡಿದ್ದು ನೋಡಿದ್ದೇ ಇಲ್ಲ. ಹೆಚ್ಚು ಕಡಿಮೆ ನನಗೆ ಎಪ್ಪತ್ತರ ವಯಸ್ಸು. ಮದುವೆಯಾಗಿ ಐವತ್ತು ಸಂವತ್ಸರಗಳೇ ನಮ್ಮ ನಡುವೆ ಹಾಗೇ ಕಳೆದು ಹೋಗಿತ್ತು. ಅಷ್ಟೂ ವರ್ಷಗಳಲ್ಲಿ ಜಾನಕಿ ಕನಸಿನಲ್ಲಿ ಮಾತಾಡಿದ್ದು, ಉಹೂಂ.. ನಾನಂತು ಒಮ್ಮೆಯೂ ಕೇಳಿಯೂ ಇಲ್ಲ, ನೋಡಿಯೂ ಇಲ್ಲ. ಆದರೂ ಆ ರಾತ್ರಿ ಮೊದಲ ಬಾರಿಗೆ ಜಾನಕಿ ಕನಸಲ್ಲಿ ಮಾತಾಡಿದ್ದಳು!!
ಎ.ಬಿ. ಪಚ್ಚು ಬರೆದ ಕಥೆ “ಪೌರ್ಣಮಿ” ನಿಮ್ಮ ಈ ಭಾನುವಾರದ ಓದಿಗೆ

Read More

ಎ.ಬಿ. ಪಚ್ಚು ಬರೆದ ಈ ಭಾನುವಾರದ ಕತೆ “ಮದಿಮಾಲ್”

ಮದಿಮಾಲ್ ನೆನಪಾದರೆ ಯಾಕೋ ನನ್ನ ಕಾಲ್ಗುಣದಿಂದಾಗಿ ಸಾಲು ಸಾಲಾಗಿ ಸತ್ತು ಮಲಗಿದವರೇ ನೆನಪಾಗುತ್ತಿದ್ದರು. ಮೊದಲ ಬಾರಿಗೆ ಆಸೆಯಿಂದ ಗಂಡನ ಮನೆಗೆ ಮದಿಮಾಲ್ ಮೀನು ತೆಗೆದುಕೊಂಡು ಹೋದಾಗ ಅತ್ತೆ ಅದನ್ನು ತೊಟ್ಟೆ ಸಹಿತ ಅಂಗಳಕ್ಕೆ ಬಿಸಾಡಿದ್ದು, ಜಿಮ್ಮಿ ನಾಯಿ, ಮಂಗು ಬೆಕ್ಕು ಆ ಮದಿಮಾಲ್ ಮೀನನ್ನು ಕಚ್ಚಿಕೊಂಡು ಓಡಿ ಹೋದದ್ದು, ಈ ದೃಶ್ಯಗಳೆಲ್ಲವೂ ಕಣ್ಣಿಗೆ ಕಟ್ಟಿದಂತೆಯೇ ಆ ನಂತರವೂ ನನ್ನ ಜೊತೆ ಶಾಶ್ವತವಾಗಿ ಉಳಿದು ಹೋದವು.
ಎ.ಬಿ. ಪಚ್ಚು ಬರೆದ ಈ ಭಾನುವಾರದ ಕತೆ “ಮದಿಮಾಲ್” ನಿಮ್ಮ ಓದಿಗೆ

Read More

ಜನಮತ

ಕಾಲಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಸುತ್ತಾಡಿದ ದೇಶಗಳ ಒಳಗೂ-ಹೊರಗೂ: ಕೆ.ಎನ್.ಲಾವಣ್ಯ ಪ್ರಭಾ ಬರಹ

ಒಮ್ಮೆ ಎಸ್ಕಲೇಟರಿನಲ್ಲಿ ಲೇಖಕಿ ಹೋಗುವಾಗ ಅಕಸ್ಮಾತ್ತಾಗಿ ಅವರ ಸೀರೆ ಸಿಕ್ಕಿಕೊಂಡು ಮೊಣಕಾಲಿನವರೆಗೂ ಹರಿದುಹೋಗುತ್ತಿದ್ದರೂ ಅಕ್ಕಪಕ್ಕದ ಜನ ತಮಗೆ ಸಂಬಂಧವೇ ಇಲ್ಲದವರಂತೆ ತಮ್ಮ ಪಾಡಿಗೆ ಹೋಗುವುದು, ಬಸ್‌ನಲ್ಲಿ ಕೂತಾಗ…

Read More

ಬರಹ ಭಂಡಾರ