Advertisement

Tag: ಗಿರೀಶ್ ಕಾಸರವಳ್ಳಿ

ಕಲ್ಪನೆಯಿಂದ ವಾಸ್ತವಕ್ಕೆ…: ಗಿರೀಶ್‌ ಕಾಸರವಳ್ಳಿ ಕೃತಿಯ ಆಯ್ದ ಭಾಗ

ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ನನ್ನ ಸಹಪಾಠಿಯಾಗಿದ್ದ ನಾಸೀರುದ್ದೀನ್ ಶಾ ಭಾರತ ಸಿನಿ ಉದ್ಯಮದಲ್ಲಿ ನಾನು ಮೆಚ್ಚುವ ನಟರಲ್ಲಿ ಒಬ್ಬರು. ಯಾವ ಪಾತ್ರವನ್ನು ಕೊಟ್ಟರೂ ಆ ಪಾತ್ರಕ್ಕೆ ವಿಶಿಷ್ಟತೆ ತರಬಲ್ಲ ಶಕ್ತಿ ಇರುವ ಅಪರೂಪದ ನಟ. ಆದರೆ ಈ ಸಿನಿಮಾದಲ್ಲಿ ನನ್ನ ಅನುಭವ ಅಷ್ಟು ಹಿತಕರವಾಗಿರಲಿಲ್ಲ. ಕನ್ನಡದ ಸಂಭಾಷಣೆ ನೆನಪಿಟ್ಟುಕೊಳ್ಳಲು ಅಸಾಧ್ಯವಾಗಿ ಅವರಿಗೆ ಇರುಸುಮುರುಸಾಗುತ್ತಿತ್ತು. ಅದರಿಂದ ಹುಟ್ಟಿದ ಅಸಹನೆ ಚಿತ್ರೀಕರಣದ ವೇಳೆಯಲ್ಲೂ ಪ್ರತಿಧ್ವನಿಸುತ್ತಿತ್ತು.
ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಚಲನಚಿತ್ರಗಳ ಸಂಕಥನ “ಬಿಂಬ ಬಿಂಬನ” ದಿಂದ “ಮನೆ” ಚಿತ್ರದ ಕುರಿತ ಮಾತುಕತೆ ನಿಮ್ಮ ಓದಿಗೆ

Read More

ಚಲನಚಿತ್ರ ಭಾಷೆಯ ಕಲಿಕೆ ಮತ್ತು ಘಟಶ್ರಾದ್ಧ…

ಸಿನಿಮಾ ಮಾಧ್ಯಮವನ್ನು ಸಶಕ್ತವಾಗಿ ದುಡಿಸಿಕೊಳ್ಳುವವರು ದೃಶ್ಯ ಬಿಂಬಗಳ ಜೊತೆಗೇ, ಶಾಬ್ದಿಕ ರೂಪದ ಬಿಂಬಗಳನ್ನೂ ಸೃಷ್ಟಿಮಾಡುತ್ತಿರುತ್ತಾರೆ. ಸಂಕಲನ ತಂತ್ರದ ಮೂಲಕವೂ ಬಿಂಬವನ್ನು ಸಂಶ್ಲೇಷಿಸುತ್ತಿರುತ್ತಾರೆ. ವಾಸ್ತು, ವೇಷಭೂಷ, ಸೂಕ್ತ ನಟ ನಟಿಯರ ಬಳಕೆ, ಇತ್ಯಾದಿ ಅಂಶಗಳು ಪರಿಣಾಮಕಾರಿಯಾದ ಬಿಂಬ ನಿರ್ಮಾಣಕ್ಕೆ ಎಷ್ಟು ಅಗತ್ಯವೋ ಸಮಯದ ನಿರ್ವಹಣೆಯಲ್ಲಿ ಕೈಗೋಲಾಗಿ ಬರುವ ಸಂಗೀತ, ಚಿತ್ರದ ಲಯ, ತಂತ್ರ ಸೌಷ್ಠವಗಳೂ ಬಿಂಬ ನಿರ್ಮಾಣದಲ್ಲಿ ಅಷ್ಟೇ ಮುಖ್ಯ ಪಾತ್ರ ವಹಿಸುತ್ತಿರುತ್ತವೆ.
ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಚಲನಚಿತ್ರಗಳ ಸಂಕಥನ “ಬಿಂಬ ಬಿಂಬನ”  ನಾಳೆ ಬಿಡುಗಡೆಯಾಗಲಿದ್ದು, ಈ ಕೃತಿಗೆ ಅವರು ಬರೆದ ಮಾತುಗಳು ಹಾಗೂ ಘಟಶ್ರಾದ್ಧ ಚಲನಚಿತ್ರದ ಕುರಿತ ಮಾತುಕತೆಯ ಆಯ್ದ ಭಾಗ ನಿಮ್ಮ ಓದಿಗೆ

Read More

ಗಿರೀಶ್‌ ಕಾಸರವಳ್ಳಿ ಚಿತ್ರಗಳ ಸಂಕಥನ

ನಮ್ಮ ಹೆಚ್ಚಿನ ಚಿತ್ರಗಳಲ್ಲಿ ಮಳೆ ಬಳಕೆಯಾಗುತ್ತಿದ್ದುದು ಒಂದೋ ಹಾಡು, ನೃತ್ಯದ ಚಿತ್ರಣದಲ್ಲಿ, ಇಲ್ಲವೇ ಫೈಟಿಂಗ್‌ಗೆ ಹಿನ್ನೆಲೆಯಾಗಿ. ಅಲ್ಲೆಲ್ಲಾ ಮಳೆಯು ನಡೆಯುತ್ತಿರುವ ಘಟನೆಗೆ ಹಿನ್ನೆಲೆ ಒದಗಿಸುತ್ತಿತ್ತು ಅಷ್ಟೇ. ಅದು ಪಾತ್ರವಾಗಿ ಬಂದ ಉದಾಹರಣೆ ಕಡಿಮೆ. ಹಾಗೆ ಮಾಡಿದಾಗಲೂ ಮಳೆಯು ಸಿನಿಮಾಕ್ಕೆ ತರುವ ರಮ್ಯತೆಗೇ ಹೆಚ್ಚು ಒತ್ತು ಇರುತ್ತಿತ್ತು. ಹಾಗಾಗದೇ ಮಳೆ ಒಂದು ಪಾತ್ರವೇ ಆಗಬೇಕು ಎಂಬ ಉದ್ದೇಶ ನಮ್ಮದಾಗಿತ್ತು.
ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಚಲನಚಿತ್ರಗಳ ಸಂಕಥನ “ಬಿಂಬ ಬಿಂಬನ” ದಿಂದ “ದ್ವೀಪ” ಚಿತ್ರದ ಕುರಿತ ಮಾತುಕತೆ ನಿಮ್ಮ ಓದಿಗೆ

Read More

ಸಿನಿಲೋಕದಲ್ಲಿ ವಿಹರಿಸುತ್ತಾ….

ಜಗತ್ತಿನಲ್ಲಿ ಮೂಡಿದ ಎಲ್ಲ ವಿಪ್ಲವಗಳಿಗೆ ಪ್ರತಿಸ್ಪಂದಿಸುತ್ತಾ ಬಂದ ಜಾಗತಿಕ ಸಿನಿಮಾ ಇಪ್ಪತ್ತೊಂದನೆಯ ಶತಮಾನದ ಬೆಳವಣಿಗೆಗೆ ಹೇಗೆ ಪ್ರತಿಕ್ರಿಯಿಸುತ್ತಿದೆ ಎನ್ನುವುದನ್ನು ಈ ನಲವತ್ತು ಸಿನಿಮಾಗಳು ದಾಖಲಿಸುತ್ತವೆ. ಹಾಗಾಗಿ ಈ ಲೇಖನಗಳು ಒಂದು ಸಾರ್ಥಕ ಪ್ರಯತ್ನ ಎಂದು ನನ್ನ ಅನಿಸಿಕೆ. ಹೀಗೆ ಹೇಳುತ್ತಲೇ ಕಳೆದೆರಡು ದಶಕಗಳಲ್ಲಿ ಜಾಗತಿಕ ಸಿನಿಮಾಗಳಲ್ಲಿ ಮೂಡಿಬಂದ ಹೊಸಾ ಶೈಲಿಯಾದ ʻಸ್ಲೋ ಸಿನಿಮಾ ಚಳುವಳಿʼಯ ಒಂದೆರಡು ಕೃತಿಗಳನ್ನು ಪರಿಚಯಿಸಿದ್ದರೆ ಸಾಂದರ್ಭಿಕವಾಗಿ ಇನ್ನಷ್ಟು ಉಪಯುಕ್ತತೆ ಬರುತ್ತಿತ್ತೇನೋ. ಹಾಲಿವುಡ್ ಉದ್ದಿಮೆಯ ಜನಪ್ರಿಯ ಸಿದ್ಧಸೂತ್ರಕ್ಕೆ ಪರ್ಯಾಯವಾಗಿ ಮೂಡಿಬಂದದ್ದೇ ʻಸ್ಲೋ ಸಿನಿಮಾ ಚಳುವಳಿʼ.
ಎ.ಎನ್. ಪ್ರಸನ್ನರವರ ಆಯ್ದ ಜಾಗತಿಕ ಸಿನಿಮಾಗಳ ಕುರಿತ ಲೇಖನಗಳ ಸಂಕಲನ “ಸಿನಿ ಲೋಕ 21”ಕ್ಕೆ ಗಿರೀಶ್‌ ಕಾಸರವಳ್ಳಿ ಬರೆದ ಮುನ್ನುಡಿ

Read More

ಮುಕುಂದ ತೆಗೆದ ಮುಖಚಿತ್ರಗಳ ಕತ್ತಲೆ ಬೆಳಕಿನ ಲಾಸ್ಯ

”ಏಕಾಂತದಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತು ಯೋಚಿಸುತ್ತಿರುವಾಗ, ತನ್ನ ಪಕ್ಕದಲ್ಲಿ ಕುಳಿತವರೂ ಗಮನಕ್ಕೆ ಬಾರದಂತೆ ಅಂತರ್ಮುಖಿಯಾಗಿದ್ದಾಗ, ಅನಿರೀಕ್ಷಿತವಾದ್ದೊಂದು ಸಂಭವಿಸಿದಾಗ ಥಟ್ಟನೆ ಪ್ರತಿಕ್ರಿಯಿಸುವಾಗ ಪ್ರಕಟವಾಗುವುದು ವ್ಯಕ್ತಿಯ ಆಂತರ್ಯದ ವ್ಯಕ್ತಿತ್ವ.”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ