ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಚಿದಾನಂದ ಸಾಲಿ ಕತೆ
ಪಿಯುಸಿಯಲ್ಲಿ ಇಮಾಂಸಾಬಿಯ ರೂಮಿನಲ್ಲಿ ಅದ್ಹೇಗೋ ಹೊಂದಿಸಿಕೊಂಡು ನಿಯರ್ ಫಸ್ಟ್‌ಕ್ಲಾಸ್‌ನಲ್ಲಿ ಪಾಸೇನೋ ಆದೆ. ಆದರೆ ಅವನು ಫೇಲಾದ ಹೊಟ್ಟೆಕಿಚ್ಚಿಗೆ ನನ್ನ ಪಾಲಿಗೆ ರೂಮಿನ ಬಾಗಿಲು ಮುಚ್ಚಿಕೊಂಡಿತು. ನಿತ್ಯ ಮನೆಯಲ್ಲಿ ಅಪ್ಪನ ಮತ್ತಿನ ಬಡಬಡಿಕೆಗಳು, ಅದಕ್ಕೆ ಪ್ರತಿಯಾಗಿ ಅಮ್ಮನ ಬೈಗುಳಗಳು ನನ್ನನ್ನು ಚಿತ್ರಹಿಂಸೆಗೆ ಈಡು ಮಾಡಿದವು. ಎದುರಿಗೆ ಕಲ್ಲುಗೋಡೆಯಂತೆ ಇಂಜಿನಿಯರಿಂಗ್. ಇಷ್ಟೆಲ್ಲದರ ನಡುವೆ ಸೋತು ಸುಣ್ಣಾಗಿ ಹೋಗಿದ್ದವನಿಗೆ ಕಾಲೇಜಿನಲ್ಲಿ ಸುರೇಶ್ ಪರಿಚಯವಾದ.
Read More