Advertisement

Tag: ಟಿ.ಎಸ್. ಗೋಪಾಲ್

ಚಾಮರಾಜನಗರದ ಚಾಮರಾಜೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಮಂಟಪದ ಮೇಲಂಚಿನ ಕೋಷ್ಠಗಳೂ ಗಾರೆಶಿಲ್ಪಗಳೂ ಭಗ್ನವಾಗಿದ್ದರೂ ಈ ಮಾದರಿಯ ಉತ್ತಮಶಿಲ್ಪಗಳನ್ನು ಪ್ರತಿನಿಧಿಸುತ್ತವೆ. ಶಿವನ ಲೀಲಾಮೂರ್ತಿಗಳನ್ನೂ ದೇವಿಯ ವಿವಿಧ ರೂಪಗಳನ್ನೂ ಈ ಗಾರೆಶಿಲ್ಪಗಳಲ್ಲಿ ಕಾಣುತ್ತೀರಿ. ಶಿವನ ಗುಡಿಗೆ ಅಭಿಮುಖವಾಗಿ ನಂದಿಮಂಟಪ, ಗುಡಿಯನ್ನು ನವೀಕರಿಸುವ ಜನೋತ್ಸಾಹದ ಫಲವಾಗಿ ವಿಚಿತ್ರಬಣ್ಣ ಬಳಿದುಕೊಂಡ ದೊಡ್ಡನಂದಿಯಿದೆ…”

Read More

ಶೆಟ್ಟಿಕೆರೆಯ ಯೋಗಮಾಧವ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಮುಖ್ಯಗರ್ಭಗುಡಿಯಲ್ಲಿರುವ ಯೋಗಮಾಧವನ ವಿಗ್ರಹವು ಹೊಯ್ಸಳ ಶಿಲ್ಪಗಳಲ್ಲಿ ಬಹು ಅಪೂರ್ವಮಾದರಿಯ ವಿಗ್ರಹವೆಂದು ಹೇಳಬಹುದು. ಪೀಠದಿಂದ ಅಂದಾಜು ಎಂಟು ಅಡಿಗಳಷ್ಟು ಎತ್ತರವಿರುವ ಈ ವಿಗ್ರಹದ ಸೊಬಗು ಬೆರಗುಮೂಡಿಸುವಂಥದು. ತಾವರೆಯಂತಹ ಪೀಠದ ಮೇಲೆ ಪದ್ಮಾಸನದಲ್ಲಿ ಕುಳಿತ ಮಾಧವ. ಮೇಲುಗೈಗಳಲ್ಲಿ ಚಕ್ರಶಂಖಗಳಿವೆ….”

Read More

ಡಂಬಳದ ದೊಡ್ಡಬಸವೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ತಳದಿಂದ ತುದಿಯವರೆಗೆ ನಕ್ಷತ್ರಾಕಾರದಲ್ಲಿರುವುದೇ ಈ ಕಟ್ಟಡದ ವಿಶೇಷ. ಇಡೀ ಕಟ್ಟಡವೇ ನಕ್ಷತ್ರಾಕಾರದಲ್ಲಿರುವುದರಿಂದ ಇತರ ದೇಗುಲಗಳಲ್ಲಿ ಕಾಣುವಂತಹ ವಿಶಾಲವಾದ ಭಿತ್ತಿಯುಳ್ಳ ರಚನೆಯನ್ನು ಇಲ್ಲಿ ಕಾಣಲಾಗದು. ಅದಕ್ಕೆ ಬದಲಾಗಿ ಉನ್ನತವಾದ ಕಂಬಗಳನ್ನೂ ಕಿರುಗೋಪುರಗಳನ್ನೂ ಅಳವಡಿಸಲಾಗಿದೆ…”

Read More

ಲಕ್ಷ್ಮೇಶ್ವರದ ಸೋಮನಾಥ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಕಲ್ಯಾಣ ಚಾಲುಕ್ಯರ ಪ್ರಮುಖ ದೊರೆ ಆರನೆಯ ವಿಕ್ರಮಾದಿತ್ಯನ ಕಾಲದಲ್ಲಿ ನಿರ್ಮಿತವಾಗಿರಬಹುದಾದ (ಕ್ರಿ.ಶ. 1006) ಸೋಮನಾಥ ಗುಡಿಗೆ ಸಂಬಂಧಿಸಿದಂತೆ ಅನೇಕ ಶಾಸನಗಳು ಲಭ್ಯವಿವೆ. ಮುಂದಿನ ಶತಮಾನಗಳಲ್ಲಿ ಈ ಪ್ರದೇಶವು ಅನೇಕ ರಾಜವಂಶಗಳ ಆಳ್ವಿಕೆಗೆ ಒಳಪಟ್ಟ ಸಂದರ್ಭದಲ್ಲಿ ಸೋಮೇಶ್ವರ ದೇಗುಲವನ್ನು ಜೀರ್ಣೋದ್ಧಾರ ಮಾಡಿದ ಹಾಗೂ ದಾನದತ್ತಿಗಳನ್ನೂ ಒದಗಿಸಿದ ವಿವರಗಳಿವೆ…”

Read More

ಹುಂಚದ ಪಂಚಬಸದಿ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಬಸದಿಯ ಎದುರಿಗೆ ಇರುವ ಭವ್ಯವಾದ ಮಾನಸ್ತಂಭ ಈ ಬಸದಿಯ ವಿಶೇಷ ಆಕರ್ಷಣೆ. ನಲವತ್ತು ಅಡಿಗಳಷ್ಟು ಎತ್ತರವಾದ ಈ ಸ್ತಂಭವನ್ನು ವಿಶಾಲವಾದ ವೇದಿಕೆಯ ಮೇಲೆ ನಿರ್ಮಿಸಲಾಗಿದೆ. ಈ ಮಾದರಿಯ ಮಾನಸ್ತಂಭ ಇಡಿಯ ದೇಶದಲ್ಲೇ ಅಪೂರ್ವವೆಂದು ಅಭಿಪ್ರಾಯಪಡಲಾಗಿದೆ. ವೇದಿಕೆಯ ಸುತ್ತಲಿನ ಕೆತ್ತನೆ ಆಕರ್ಷಕವಾಗಿದೆ..”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ