ಕಳ್ಳಿಗಾಡಿನ ಇತಿಹಾಸ: ಕರಾಳ ವಾಸ್ತವದ ಜೀವಂತ ಚಿತ್ರಣ
‘ಕಳ್ಳಿಗಾಡಿನ ಇತಿಹಾಸ’ ಎಂಬ ಶೀರ್ಷಿಕೆಯಿದ್ದರೂ, ಇದು ಪ್ರಪಂಚದ ಯಾವುದೇ ಅಭಿವೃದ್ಧಿ ಹೊಂದದ ಅಥವಾ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ನಡೆಯುವ ಶೋಷಿತ ಸಮುದಾಯದ ಇತಿಹಾಸವೇ ಆಗಿದೆ. ಯಾವುದೇ ರಾಜಕೀಯ ವ್ಯವಸ್ಥೆಯಾದರೂ ಶೋಷಿತವರ್ಗದ ನೋವು ನಲಿವುಗಳನ್ನು ಅರ್ಥ ಮಾಡಿಕೊಳ್ಳದೇ ಹೋದಾಗ, ಆ ಜನರು ಅನುಭವಿಸುವ ಕಷ್ಟಕಾರ್ಪಣ್ಯಗಳನ್ನು ಹೇಳತೀರದು. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಡೆದಂಥ ಇಂಥ ಅನೇಕ ಕಥೆಗಳು ಕರ್ನಾಟಕದ ಮಣ್ಣಿನಲ್ಲೂ ದಾಖಲಾಗಿರುತ್ತವೆ.
ತಮಿಳಿನ ವೈರಮುತ್ತು ಬರೆದಿರುವ “ಕಳ್ಳಿಕಾಟ್ಟು ಇತಿಹಾಸಂ” ಕಾದಂಬರಿಯನ್ನು ಡಾ. ಮಲರ್ವಿಳಿ ‘ಕಳ್ಳಿಗಾಡಿನ ಇತಿಹಾಸ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದು, ಈ ಕೃತಿಯ ಕುರಿತು ಕೆ. ಪ್ರಭಾಕರನ್ ಬರಹ