ಸಮ-ಬೆಸಗಳ ಅರಿವು, ಹರಿವು: ವಿನತೆ ಶರ್ಮ ಅಂಕಣ
ನಮ್ಮ ರಾಣಿರಾಜ್ಯದ ರಾಜಧಾನಿ ಬ್ರಿಸ್ಬೇನ್ ನಗರಕ್ಕೆ ಭಾರತದ ಹೆಸರುವಾಸಿ ರೆಸ್ಟರೆಂಟ್ ‘ಶರವಣ ಭವನ’ ಕಾಲಿಟ್ಟಿದೆ. ಇದೇನು ಒಂದು ಹೇಳಿಕೊಳ್ಳುವಂತಹ ಸುದ್ದಿಯಾ ಎಂದು ಹುಬ್ಬೇರಿಸಬೇಡಿ ಎಂಬ ಕಳಕಳಿಯ ವಿನಂತಿ. ಸಿಡ್ನಿ, ಮೆಲ್ಬೋರ್ನ್ ನಗರಗಳಲ್ಲಿ ಶರವಣ ಭವನವು ಬಂದು ನೆಲೆಯೂರಿ ಅಲ್ಲಿನ ಎಲ್ಲರೂ ಊಟ ತಿಂಡಿಗಳನ್ನು ಸವಿಯುತ್ತಿದ್ದಾಗ ಆಸ್ಟ್ರೇಲಿಯಾದ ಬೇರೆ ನಗರಗಳಲ್ಲಿ ದಕ್ಷಿಣ ಭಾರತೀಯರು ಹೊಟ್ಟೆ ಉರಿಸಿಕೊಳ್ಳುತ್ತಿದ್ದರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”