ಅಂತರಂಗವನ್ನು ಜಗತ್ತಿನ ಮುಂದಿಟ್ಟ ಆ್ಯನ್ ಫ್ರಾಂಕ್ ಡೈರಿ
ಯಾತನಾ ಶಿಬಿರದಿಂದ ಒಟ್ಟೋ ಫ್ರಾಂಕ್ ತಪ್ಪಿಸಿಕೊಂಡು ಮರಳಿ ಅಮ್ಸ್ಟರ್ ಡ್ಯಾಮ್ ತಲುಪಿದ. ಅವನಜೊತೆ ಇದ್ದುದು ಮಗಳ ಪತ್ರಗಳು. ಡೈರಿ ಮಾತ್ರ. ಅಡಗುತಾಣ ತಡಕಾಡುವಾಗ ರದ್ದಿ ಕಾಗದ ಎಂದು ಗೆಸ್ಟಪೋಗಳು ಆ್ಯನ್ ಫ್ರಾಂಕ್ ಡೈರಿಯನ್ನು ಬಿಟ್ಟಿದ್ದರು. ಅದನ್ನು ಕಾಪಾಡಿಕೊಂಡಿದ್ದ ಆ್ಯನ್ ಫ್ರಾಂಕ್ ಳ ತಂದೆ ಒಟ್ಟೋ ಫ್ರಾಂಕ್ ಅವುಗಳನ್ನು ಸಂಬಂಧಿಕರಿಗೆ, ಸ್ನೇಹಿತರಿಗೆ ತೋರಿಸಿದ. ಅವುಗಳು ಡಚ್ ಭಾಷೆಯಲ್ಲಿ ಮೊದಲು ಮುದ್ರಣವಾದವು.
ನಾಗರೇಖಾ ಗಾಂವ್ಕರ ಅನುವಾದಿಸಿದ ಆ್ಯನ್ ಫ್ರಾಂಕ್‌ಳ “ದಿ ಡೈರಿ ಆಫ್ ಎ ಯಂಗ್ ಗರ್ಲ್” ಪುಸ್ತಕದ ಕುರಿತು ನಾಗರಾಜ್ ಹರಪನಹಳ್ಳಿ ಬರಹ