‘ಕಂಪ್ಯೂಟರ್’ಗೇ ಪಾಠ ಕಲಿಸಿದ ‘ಮೃತ್ಯು!’: ಪೂರ್ಣೇಶ್ ಮತ್ತಾವರ ಸರಣಿ
ಇನ್ನೂ ಕಂಪ್ಯೂಟರ್ ಸರ್‌ರ ವರ್ಣನೆಯನ್ನೆಲ್ಲಾ ಕೇಳಿ ಅವರೆಂದೂ ನಗು ಮೊಗದಿಂದ ಪಾಠ ಮಾಡಲೇ ಇಲ್ಲವೆಂದು ತಿಳಿಯಬೇಡಿ. ನಮ್ಮ ಕಂಪ್ಯೂಟರ್ ಸರ್‌ರಂತಹ ಕಂಪ್ಯೂಟರ್ ಸರ್ ಕೂಡ ನಗು ಮೊಗದೊಂದಿಗೆ ಪಾಠ ಹೇಳಿ ಕೊಡುವ ರಸ ಗಳಿಗೆಗಳಿಗೆ ನಾವು ಸಾಕ್ಷೀಭೂತರಾಗಿದ್ದೆವು. ಆದರೆ, ಆ ಅದೃಷ್ಟ ಇದ್ದದ್ದು ಮಾತ್ರ ನಮಗಲ್ಲ. ಬದಲಿಗೆ, ಕೆಲದಿನಗಳ ಮಟ್ಟಿಗೆ ಪಕ್ಕದ ಶೃಂಗೇರಿಯಿಂದ ಬರುತ್ತಿದ್ದ, ನೋಡಲು ಸುರಸುಂದರಿಯಂತಿದ್ದ ಅತಿಥಿ ಶಿಕ್ಷಕಿಯೊಬ್ಬರಿಗೆ ಮಾತ್ರ!
ಪೂರ್ಣೇಶ್ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ಎರಡನೆಯ ಬರಹ