Advertisement

Tag: ಪ್ರವಾಸ

ರೇಗಿಸ್ತಾನದಲ್ಲಿ ಉರಿಯುವ ಬಣ್ಣಗಳು: ಹೇಮಾ ನಾಯಕ ಪ್ರವಾಸ ಕಥನ

ಶಾಮ ಸುಮ್ಮನೆ ಮಾತನಾಡುವವನಲ್ಲ, ಹೇಳಿದ್ದನ್ನು ಕೇಳಿಸಿಕೊಂಡು ಆಳವಾಗಿ ವಿಚಾರ ಮಾಡಿ, ಎದುರಿಗೆ ಇರುವವರಿಗೆ ಆಸಕ್ತಿ ಇದ್ದರೆ ಮಾತ್ರ ವಿಷಯ ಹಂಚಿಕೊಳ್ಳುವವನು. ನಸುಕಿನ ನಾಲ್ಕಕ್ಕೇ ಎಬ್ಬಿಸಿ ನಮ್ಮನ್ನು ಗಾಡಿಯಲ್ಲಿ ಹತ್ತಿಸಿಕೊಂಡು ಹೊರಟ. ಧೋಲಿಯಾದಿಂದ ಹೊರಟು ಪೋಖ್ರನ್ ತಹಶೀಲಿನ ಹುಲ್ಲುಗಾವಲುಗಳ ಕಡೆ ಹೊರಟೆವು. ದಾರಿಯುದ್ದಕ್ಕೂ ಮೌನ, ಚಳಿಯಲ್ಲಿ ಬಾಯಿ ತೆರೆಯಲೂ ಆಗದೇ ಹಲ್ಲು ಕಡಿಯುತ್ತ ಕೂರಬೇಕಾಯಿತು. ಹೋಗಿ ತಲುಪಿದ್ದು ಎಲ್ಲಿ ಎಂದು ಗುರುತಿಸಲಾಗದಂತ ಒಣ ಕಡ್ಡಿಗಳ ನಡುವೆ.
ಹೇಮಾ ನಾಯಕ ಬರೆದ ಪ್ರವಾಸ ಕಥನ ನಿಮ್ಮ ಓದಿಗೆ

Read More

ಮಳೆ, ಮಂಜು ಮತ್ತು ಚಾರಣ: ಮುನವ್ವರ್, ಜೋಗಿಬೆಟ್ಟು ಬರಹ

ಒಂದು ಶಾಂತ ಬಯಲಿನಲ್ಲಿ ಮರಗಳ ನೆರಳಲ್ಲಿ ಪ್ರತಿಷ್ಠಾಪಿಸಿದಂತಿದ್ದ ಆ ಪ್ರದೇಶ ಸೂಫಿ ಅನುಭಾವಕ್ಕೆ ನಮ್ಮನ್ನು ಬರಮಾಡಿಕೊಳ್ಳತೊಡಗಿತು. ಅದು ಹಾಸನದ ಮುಸ್ಲಿಮರ ಪಾಲಿಗೆ ವಿಶೇಷ ಸ್ಥಳ. ಅದೇ‌ ಊರಿನವರಾಗಿದ್ದ ಹಝ್ರತ್ ಖಲಂದರ್ ಶಾ ವಲಿಯುಲ್ಲಾಹಿರವರು ಆಧ್ಯಾತ್ಮಿಕವಾಗಿ ಒಂದು ತಲೆಮಾರನ್ನೇ ಮುನ್ನಡೆಸಿದವರು. ಸೂಫಿ ನೆರಳಿನಂತೆ ಜನರ ಕಷ್ಟ ಕಾರ್ಪಣ್ಯಗಳಿಗೆ ಸಲಹೆ ಸೂಚನೆಗಳನ್ನು ಕೊಟ್ಟು ಅವರಿಗೆ ಮನಶ್ಶಾಂತಿಯನ್ನು ಕರುಣಿಸುತ್ತಿದ್ದವರು. ಅವರ ಶಾಂತ ಚಿತ್ತ ಮಾತುಗಳನ್ನು ಆಲಿಸಲು ಅವರ ಹರಸುವಿಕೆಯ ಅನುಗ್ರಹವನ್ನು ಸ್ವೀಕರಿಸಲು ದೇಶದ ನಾನಾ ಭಾಗಗಳಿಂದ ಜನರು ಬರುವುದುಂಟು. ನಾವು ಬಾಬರು ಕುಳಿತುಕೊಳ್ಳುತ್ತಿದ್ದ ಸ್ಥಳವನ್ನೂ ಅವರ ಬಳಸುತ್ತಿದ್ದ ಅನುಗ್ರಹೀತ ವಸ್ತುಗಳನ್ನು ನೋಡಿ‌ ಕಣ್ತುಂಬಿಕೊಂಡು- ಅಲ್ಲಿ ಯಾತ್ರಾರ್ಥಿಗಳಿಗಾಗಿ ನೀಡುವ ಚಹಾವನ್ನು ಸವಿದೆವು.
ಮುನವ್ವರ್, ಜೋಗಿಬೆಟ್ಟು ಬರೆದ ಪ್ರವಾಸ ಕಥನ ನಿಮ್ಮ ಓದಿಗೆ

Read More

ಅಂಡಮಾನ್-ನಿಕೋಬಾರ್ ದ್ವೀಪಗಳ ಅನುಭವಗಳು: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ಪೋರ್ಟ್ ಬ್ಲೇರ್ ನಿಲ್ದಾಣದಲ್ಲಿ ಇಳಿದು ಹೊರಕ್ಕೆ ಬರುತ್ತಿದ್ದಂತೆ ಹಾರಾಡುತ್ತ ಬಂದ ಮೋಡಗಳು ಸಣ್ಣದಾಗಿ ಮಳೆ ಹನಿಯತೊಡಗಿದವು. ಇಬ್ಬರೂ ಓಡೋಡಿ ಹೋಗಿ ನಿಲ್ದಾಣದ ಒಳಕ್ಕೆ ಸೇರಿಕೊಂಡೆವು. ವಿಮಾನ ಮತ್ತು ವಿಮಾನ ನಿಲ್ದಾಣದ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದ ಜನರು ಕೆಲವೇ ಕ್ಷಣಗಳಲ್ಲಿ ತೊಯ್ದು ತೊಪ್ಪೆಯಾಗಿದ್ದರು.
ಅಂಡಮಾನ್-ನಿಕೋಬಾರ್‌ ದ್ವೀಪಗಳ ಪ್ರವಾಸದ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ

Read More

ನೀರ ನೆಲದ ಮೇಲೆ ನೂರಾರು ಮನೆ – ಧೊದಿಯಾ: ಹೇಮಾ ನಾಯಕ ಬರಹ

ಹೀಗೆ ನೆಲದಿಂದ ಎತ್ತರಿಸಿ ಕಟ್ಟಿದ ಚಿಕ್ಕ ಚಿಕ್ಕ ಗೂಡುಗಳು ಅಲ್ಲಲ್ಲಿ ಚದುರಿಕೊಂಡಂತೆ ಇದ್ದು, ನೀರೇ ಬುಡಕ್ಕೆ ಕೈ ಹಾಕಿ ಎಬ್ಬಿಸಿ ಕೂರಿಸಿದಂತೆ ಕಾಣಿಸುತ್ತವೆ. ಹೆಚ್ಚುಕಮ್ಮಿ ಎಲ್ಲ ತೊಳೆದುಕೊಂಡು ಹೋಗುವಂತೆ ಕಾಣುತ್ತಿದ್ದ ಊರಿನಲ್ಲಿ, ಅಟ್ಟದ ಕೋಣೆಗಳಿಗೆ ಹೊಂದಿಕೊಂಡಂತೆ ಹೂವಿನ ಕುಂಡಗಳನ್ನು ಸುಂದರವಾಗಿ ಜೋಡಿಸಿದ್ದು ನೋಡಿ ಅಚ್ಚರಿಯ ಜೊತೆ ಖುಷಿಯೂ ಆಯಿತು. ಧೊದಿಯಾದಲ್ಲಿ ಒಂದೇ ಒಂದು ಕಿರಾಣಿ ಅಂಗಡಿಯಿದೆ. ಅದರ ಮಾಲೀಕ ನನ್ನನ್ನು ಕರೆದು ತನ್ನ ಮೊಟ್ಟಮೊದಲ ಅಂಗಡಿ ಅದೋ ಅಲ್ಲಿಯೇ ಇತ್ತೆಂದು ದಿಬ್ರು ನದಿಯ ನಡುವೆ ಕಾಣದ ಯಾವುದೋ ಬಿಂದುವಿನತ್ತ ಬೆರಳು ತೋರಿಸಿದ.
ಅಸ್ಸಾಮ್ ರಾಜ್ಯದ ಧೊದಿಯಾ ಹಳ್ಳಿಗೆ ನೀಡಿದ ಭೇಟಿಯ ಕುರಿತು ಹೇಮಾ ನಾಯಕ ಬರಹ

Read More

ಲೂವ ಗ್ಯಾಲರಿಯೊಳಗಿನ ಕಲಾಲೋಕ…: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ಮೊದಲ ನೋಟಕ್ಕೆ ಅತ್ಯಂತ ಮೃದುವಾದ ಮೆತ್ತನೆ ಹಾಸಿಗೆ ಮೇಲೆ ಮಲಗಿರುವ ಬೆತ್ತಲೆ ಮಹಿಳೆಯಂತೆ ಕಾಣಿಸುತ್ತದೆ. ಆದರೆ ಅದು ನಿಜವಾಗಿ ಪುರುಷನ ಆಕೃತಿ, ಇನ್ನಷ್ಟು ತೀವ್ರವಾಗಿ ಕಣ್ಣಾಡಿಸಿದಾಗ ವಾಸ್ತವವಾಗಿ ಅದು ಗಂಡು ಮತ್ತು ಹೆಣ್ಣಿನ ಲೈಂಗಿಕ ಅಂಗಗಳನ್ನು ಹೊಂದಿರುವ ಹರ್ಮಾಫ್ರೋಡಿಟಿಸ್ ದೇವ/ದೇವತೆಯ ಆಕೃತಿಯಾಗಿದೆ (ಹೆಲೆನಿಸ್ಟಿಕ್ ಕಂಚಿನ ರೋಮನ್ ನಕಲು).
ಪ್ಯಾರಿಸ್‌ನಲ್ಲಿ ಓಡಾಡಿದ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನದ ಮೂರನೆಯ ಭಾಗ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ