ನೋವ ತೋರದ ಗಾಯಗಳು: ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ
ಕಂಟಲಗೆರೆ ಬಹುತೇಕ ಇದು ದುಡಿದು ದುಡಿದು ಬಡವಾಗಿಯೇ ಉಳಿದ ಕುಟುಂಬಗಳಿಂದ ತುಂಬಿದ ಊರಾಗಿದ್ದುದು ನನಗೆ ಗೊತ್ತು. ಇಂಥ ಒಂದು ಊರಿನ ಉರಿಯಿಂದ ಸಿಡಿದ ಬೀಜ ನೀನು. ಅಲ್ಲಿಂದ ಬಚಾವಾಗಿ ಪ್ರೈಮರಿ ಕೊಂಡವನ್ನು ಹಾದು, ಮಿಡ್ಲಿಸ್ಕೂಲ್ ಎಂಬ ಉನ್ನತ ಶಿಕ್ಷಣಕ್ಕೆ ತಿಪಟೂರಿಗೆ ಹೋದದ್ದು, ಊರಿನ ಪುರಾತನ ಬೇರುಗಳನ್ನು ಕಿತ್ತುಕೊಂಡು ಹಾಸ್ಟೆಲ್‌ನಲ್ಲಿ ನೆಲೆಗೊಂಡದ್ದು, ಚಿಕ್ಕಪ್ಪನ ಮತ್ತು ಕುಂದೂರು ತಿಮ್ಮಯ್ಯನವರ ಒತ್ತಾಸೆ ನಿನಗೆ ಸಿಕ್ಕಿದ್ದು ನಿನ್ನಂತ ದಲಿತ ಹುಡುಗರ ಜೀವನದಲ್ಲಿಯ ಬಹುದೊಡ್ಡ ತಿರುವು ಎಂದು ನನಗೆ ಅನಿಸುತ್ತದೆ.
ಗುರುಪ್ರಸಾದ್ ಕಂಟಲಗೆರೆ ಅವರ “ಟ್ರಂಕು ತಟ್ಟೆ” ಹಾಸ್ಟೆಲ್ ಅನುಭವ ಕಥನದ ಕುರಿತು ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ ಬರಹ