ನಗುತ್ತಲೆ ಬದುಕಿದವಳು ನನ್ನಮ್ಮ: ಮಾರುತಿ ಗೋಪಿಕುಂಟೆ ಸರಣಿ
ನನಗಾಗ ಐದಾರು ವರ್ಷಗಳಿರಬೇಕು. ಪ್ರತಿದಿನ ಅಮ್ಮ ಕೂಲಿ ಹೋಗುತ್ತಿದ್ದಳು. ಅವಳಿಗೆ ಬರುವ ಅಲ್ಪ ಕೂಲಿಯಲ್ಲಿ ಇಡಿ ಬದುಕನ್ನು ನಡೆಸಬೇಕು. ಅದರಲ್ಲಿ ಬೆಳಗಿನ ಚಹಾದಿಂದ ಹಿಡಿದು ರಾತ್ರಿಯ ಊಟದವರೆಗೂ ಕೂಲಿಯ ಹಣದಿಂದಲೆ ಸರಿದೂಗಿಸಬೇಕು. ಅಕ್ಷರ ಜ್ಞಾನವಿಲ್ಲದ ಆಕೆ ಹೇಗೆ ನಿಭಾಯಿಸುತ್ತಿದ್ದಳೊ. ಇಂದಿಗೂ ಅದೊಂದು ಆಶ್ಚರ್ಯದ ಸಂಗತಿ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ