ಮಂಜುಳ ಡಿ. ಪುಸ್ತಕದ ಕುರಿತು ಎಂ.ಎನ್. ಸುಂದರ್ ರಾಜ್ ಬರಹ
ಲತಾ ಅವರ ಕಂಠದಿಂದ ಹೊರಹೊಮ್ಮಿದ ಮಧುರಗೀತೆಗಳು ಅವರನ್ನು ಸದಾ ಸ್ಮರಣೆಯಲ್ಲಿ ಹೊಂದಿರುವಂತಹದ್ದಾಗಿದ್ದು, ಅವರ ಬಗೆಗಿನ ಗೌರವವನ್ನು ಹೆಚ್ಚಿಸುತ್ತದೆ. ಇನ್ನು ಹಿತ್ತಲ ಗಿಡ ಮದ್ದಲ್ಲ ಎಂಬ ಶೀರ್ಷಿಕೆಯ ಲೇಖನವೂ ಸಹ ಸೊಗಸಾಗಿದೆ. ಒಂದು ಸಾಧಾರಣ ಕಾಯಿಲೆಯನ್ನು ಗುಣಪಡಿಸಲು ನಮ್ಮ ಹೈಟೆಕ್ ಆಸ್ಪತ್ರೆಗಳು ಅದೆಷ್ಟು ಹಣ ಪೀಕಿಸುತ್ತವೆ, ಅದೇ ನಾಟಿವೈದ್ಯರು ಪರಂಪರಾಗತವಾಗಿ ತಮ್ಮ ಕೈಚಳಕದಿಂದ ಮತ್ತು ಅಪಾರ ಅನುಭವದಿಂದ ಕಾಯಿಲೆಯ ಮೂಲಕ್ಕೇ ಹೋಗಿ ರೋಗ ನಿವಾರಣೆ ಮಾಡುವ ಪರಿ ನಿಜಕ್ಕೂ ಅಚ್ಚರಿ ಮೂಡಿಸುವಂತಹದ್ದು.
ಮಂಜುಳ ಡಿ. ಅವರ “ಕೇದಿಗೆ ಗರಿ” ಅಂಕಣ ಬರಹಗಳ ಸಂಕಲನದ ಕುರಿತು ಎಂ.ಎನ್.ಸುಂದರ್ ರಾಜ್ ಬರೆದ ಲೇಖನ