Advertisement

Tag: ಮಧುರಾಣಿ

ಚಪ್ಪಲಿ ಸಾಹೇಬರ ಚೌರ್ಯಸಂಬಂಧೀ ನೆನಪು

ಸುಮಾರು ದೂರ ಓಡಿ ಅವರನ್ನು ಹಿಡಿದು ಭುಜ ತಟ್ಟಿ ಮಾತಾಡಿಸಿ ಅದೇನೋ ಕೇಳಿದ. ಕೂಡಲೇ ನಕ್ಕು ಪ್ರತಿಕ್ರಿಯಿಸಿದ ಆ ವಯೋವೃದ್ಧರು ತಮ್ಮ ಕೈಲಿದ್ದ ಪ್ಲಾಸ್ಟಿಕ್ ಸಂಚಿಯನ್ನು ಇವನ ಕೈಗೆ ವರ್ಗಾಯಿಸಿದರು. ಇವನು ಅವರ ಕೈ ಕುಲುಕಿದ. ನಾವು ಎಲ್ಲವೂ ಅಯೋಮಯವಾದಂತೆ ನೋಡುತ್ತ ಪಿಳಿಪಿಳಿ ಕಣ್ಣು ಬಿಡುತ್ತಾ ನಿಂತೇ ಇದ್ದೆವು. ಇಬ್ಬರ ಮುಖದಲ್ಲೂ ಹುಸಿನಗೆಯೊಂದು ಕಾಣುತ್ತಲೇ ಇತ್ತಾಗಿ ಧೈರ್ಯ. ಮತ್ತಾವುದೇ ಕಿರಿಕ್ ನಡೆಯದೆಂಬ ಸಮಾಧಾನ. ಮಧುರಾಣಿ ಬರೆಯುವ ‘ಮಠದ ಕೇರಿ’ ಕಥಾನಕ

Read More

ಮೂಕ ರಮೇಶಿಗೆ ತಾಗಿದ ಹಠಾತ್ ಸಾವು

ರಮೇಶಿಯ ಹೊಲಿಗೆ ನೈಪುಣ್ಯದ ಬಗೆಗೆ ಎರಡು ಮಾತಿಲ್ಲ. ಕಾಲಿಂಚೂ ಆಚೀಚೆ ಆಗದ ಅಳತೆಯ ಸ್ಪಷ್ಟತೆ,  ಚೂಡಿದಾರ ಹಾಗೂ ರವಿಕೆಗಳಿಗೆ, ತಾನೇ ಹುಡುಕಿಕೊಂಡು ಇಡುತ್ತಿದ್ದ ಹೊಸಾ ಹೊಸಾ ಕತ್ತಿನ ಡಿಸೈನುಗಳು, ತನ್ನ ಮೂಗಭಾಷೆಯಲ್ಲೇ ನಮಗೆಲ್ಲಾ ವಿವರಿಸಿ ಹೇಳಿ ಹೊಲೆಯುತ್ತಿದ್ದ ಹೊಸ ಶೈಲಿಗಳ ಬಟ್ಟೆಗಳು, ಬೇಡಬೇಡವೆಂದರೂ ಅವನೇ ಉಪಚಾರದ ಸಂಜ್ಞೆಗಳನ್ನು ಮಾಡಿ ತೊಡುವಂತೆ ಮಾಡುತ್ತಿದ್ದ ಡೀಪ್ ನೆಕ್ ಹಾಗೂ ಸಣ್ಣ ತೋಳಿನ ಬಟ್ಟೆಗಳು… ಇವೆಲ್ಲಾ ಹೆಂಗಸರನ್ನು ಉನ್ಮಾದಗೊಳಿಸುತ್ತಿದ್ದವು.
ಮಧುರಾಣಿ ಬರೆಯುವ ‘ಮಠದಕೇರಿ ಕಥಾನಕ’

Read More

ಮದುವೆ, ಮಜಾ ಹಾಗೂ ಮೂವತ್ತು ದಾಟಿದ ಜವ್ವನಿಗರು

ಸಂತಿಯೇನೂ ತಾನು ಮದುವೆಯಾಗಲ್ಲ ಎಂದವನಲ್ಲ, ಆದರೆ ಕೇರಿಯೊಳಗೆ ಇನ್ನೇನು ನಾಳೆಯೋ ನಾಡಿದ್ದೋ ಬಿದ್ದು ಹೋಗುವುದೆಂಬಷ್ಟು ಹಳೆಯ ಮನೆಯೊಂದನ್ನು ಬಿಟ್ಟು ಯಾವುದೇ ಆಸ್ತಿಪಾಸ್ತಿ ಇಲ್ಲದ, ನೋಡಲು ತೊಳೆದ ಕೆಂಡದಂತೆ ಮುಟ್ಟಿದರೆ ಕೈಗೆ ಹತ್ತುವಷ್ಟು ಕಪ್ಪುಬಣ್ಣಕ್ಕಿದ್ದ. ಸಂತಿಗೆ ಸರಿಯಾದ ಕೆಲಸವೂ ಇರಲಿಲ್ಲವಲ್ಲಾ.. ಹೀಗೆ ಎಲ್ಲದರಲ್ಲೂ ನಪಾಸಾದ ಸಂತಿಯ ಕರ್ಮಕ್ಕೆ ಕಲಶವಿಟ್ಟಂತೆ ನಕ್ಕರೆ ಮುಂದಿದ್ದವರಿಗೆ ಚುಚ್ಚುವಷ್ಟು ಉಬ್ಬುಹಲ್ಲು ಬೇರೆ!
ಮಧುರಾಣಿ ಬರೆಯುವ ‘ಮಠದ ಕೇರಿ’ ಕಥಾನಕ

Read More

ಅಣಬೆ ಬೆಳೆಗೆ ಕೈ ಹಾಕಿದ ನಮ್ಮೂರ ಹುಡುಗರ ಕಥೆ

ಆತ್ಮಾರಾಮನ ಸಹಾಯದಿಂದ ರಾಮಣ್ಣನ ಮನೆಯ ಹಿಂಭಾಗದ ಕೋಣೆಯನ್ನು ಬಾಡಿಗೆ ಹಿಡಿದು ಅಲ್ಲಿ ಅಣಬೆ ಕೃಷಿಗೆ ಓನಾಮ ಹಾಡಲಾಯಿತು. ಅದು ಬಿಟ್ಟರೆ ಅನ್ಯಮಾರ್ಗವಿಲ್ಲದೆ ಪಕ್ಕದ ಬೀದಿಯ ಆಫೀಸರನ ಮನೆಗೆ ಹೋಗಬೇಕಾಗಿತ್ತು. ಆದರೆ ಅಲ್ಲಿ ಅವನ ಹೆಂಡತಿಯ ಕಾಟ ಎಂಬುದು ಇವರ ದರ್ದು! ಅಂತೂ ಒಂದು ಶುಭದಿನ ಒಣಹುಲ್ಲಿನ ರಾಶಿ ಬಂದು ಬಿದ್ದು ಅಣಬೆ ಬೆಳೆಗೆ ನಾಂದಿಯಾಯಿತು. ಕೋಣೆಯ ಒಳಗೆ ಒಂದಷ್ಟು ಕಬ್ಬಿಣದ ರ‌್ಯಾಕ್‌ಗಳು ಬಂದವು.
ಮಧುರಾಣಿ ಬರೆಯುವ “ಮಠದ ಕೇರಿ” ಕಥಾನಕ

Read More

ಭಜನೆಯ ಮಂಗಗಳು ಹಾಗೂ ಸಂಗೀತದ ಮಾಮಿಯ ಮಕ್ಕಳು

“ಶನಿವಾರಗಳಲ್ಲಿ ಶ್ರದ್ಧೆಯಿಂದ ಭಜನೆ ಮಾಡುತ್ತಿದ್ದ ಯಾವ ಗಂಡುಮಗನೂ ಶ್ರೀಮಾತಾ ಭಜನಾ ಮಂಡಳಿಯ ಹೆಣ್ಣುಮಕ್ಕಳಿಗೆ ಎಂದೂ ಅವರ ಭಜನೆಯಲ್ಲಿ ಸಹಾಯ ಮಾಡಿದ್ದಿಲ್ಲ. ಹೆಂಗಳೆಯರೆಲ್ಲಾ ಭಜನೆಗೆ ಸೇರಿದರೆ ಗಂಡಸರು ಮನೆಯಲ್ಲಿ ಬೇಕಾದ ಚಾನೆಲ್ ತಿರುಗಿಸುತ್ತಾ ಟಿವಿ ನೋಡುವುದು ಮಠದ ಪ್ರಾಂಗಣದಲ್ಲಿ ಹರಟೆ ಕೊಚ್ಚುವುದೂ, ಸಾಬರ ಬೀದಿಯಲ್ಲಿ ಕೂತು ಸ್ನೇಹಿತರೊಟ್ಟಿಗೆ ಬೀಡಿ ಸೇದುವುದು ಮಾಡುತ್ತಿದ್ದರು.”
ಮಧುರಾಣಿ ಬರೆಯುವ ‘ಮಠದ ಕೇರಿ’ ಕಥಾನಕ

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪೌರಾಣಿಕ ಚೌಕಟ್ಟಿನಲ್ಲಿ ವರ್ತಮಾನದ ಕರ್ಣನನ್ನು ದರ್ಶಿಸಿದ ಕಾದಂಬರಿ ‘ಕವಚ’: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರಹ

‘ಕವಚ’ ಕಾದಂಬರಿಯು ಸಮಕಾಲೀನ ಬದುಕಿಗೆ ಅನ್ವಯವಾಗಬಲ್ಲ ಅನೇಕ ಸಂಗತಿಗಳನ್ನು ಪ್ರಸ್ತಾಪಿಸಿದೆ. ಗುರು ಪರಶುರಾಮರು ಅಸ್ತ್ರಗಳ ಪ್ರಯೋಗಕ್ಕೆ ಸಂಬಂಧಪಟ್ಟಂತೆ ಬೋಧನೆಯನ್ನು ನೀಡುವ ಸಂದರ್ಭದಲ್ಲಿ, ಆಕ್ರಮಣಗಳು ಸ್ವ-ರಕ್ಷಣೆಗಾಗಿಯೇ ಹೊರತು ಆಕ್ರಮಣಕ್ಕಲ್ಲ.…

Read More

ಬರಹ ಭಂಡಾರ