Advertisement
ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

ಚಪ್ಪಲಿ ಸಾಹೇಬರ ಚೌರ್ಯಸಂಬಂಧೀ ನೆನಪು

ಸುಮಾರು ದೂರ ಓಡಿ ಅವರನ್ನು ಹಿಡಿದು ಭುಜ ತಟ್ಟಿ ಮಾತಾಡಿಸಿ ಅದೇನೋ ಕೇಳಿದ. ಕೂಡಲೇ ನಕ್ಕು ಪ್ರತಿಕ್ರಿಯಿಸಿದ ಆ ವಯೋವೃದ್ಧರು ತಮ್ಮ ಕೈಲಿದ್ದ ಪ್ಲಾಸ್ಟಿಕ್ ಸಂಚಿಯನ್ನು ಇವನ ಕೈಗೆ ವರ್ಗಾಯಿಸಿದರು. ಇವನು ಅವರ ಕೈ ಕುಲುಕಿದ. ನಾವು ಎಲ್ಲವೂ ಅಯೋಮಯವಾದಂತೆ ನೋಡುತ್ತ ಪಿಳಿಪಿಳಿ ಕಣ್ಣು ಬಿಡುತ್ತಾ ನಿಂತೇ ಇದ್ದೆವು. ಇಬ್ಬರ ಮುಖದಲ್ಲೂ ಹುಸಿನಗೆಯೊಂದು ಕಾಣುತ್ತಲೇ ಇತ್ತಾಗಿ ಧೈರ್ಯ. ಮತ್ತಾವುದೇ ಕಿರಿಕ್ ನಡೆಯದೆಂಬ ಸಮಾಧಾನ. ಮಧುರಾಣಿ ಬರೆಯುವ ‘ಮಠದ ಕೇರಿ’ ಕಥಾನಕ

Read More

ಮೂಕ ರಮೇಶಿಗೆ ತಾಗಿದ ಹಠಾತ್ ಸಾವು

ರಮೇಶಿಯ ಹೊಲಿಗೆ ನೈಪುಣ್ಯದ ಬಗೆಗೆ ಎರಡು ಮಾತಿಲ್ಲ. ಕಾಲಿಂಚೂ ಆಚೀಚೆ ಆಗದ ಅಳತೆಯ ಸ್ಪಷ್ಟತೆ,  ಚೂಡಿದಾರ ಹಾಗೂ ರವಿಕೆಗಳಿಗೆ, ತಾನೇ ಹುಡುಕಿಕೊಂಡು ಇಡುತ್ತಿದ್ದ ಹೊಸಾ ಹೊಸಾ ಕತ್ತಿನ ಡಿಸೈನುಗಳು, ತನ್ನ ಮೂಗಭಾಷೆಯಲ್ಲೇ ನಮಗೆಲ್ಲಾ ವಿವರಿಸಿ ಹೇಳಿ ಹೊಲೆಯುತ್ತಿದ್ದ ಹೊಸ ಶೈಲಿಗಳ ಬಟ್ಟೆಗಳು, ಬೇಡಬೇಡವೆಂದರೂ ಅವನೇ ಉಪಚಾರದ ಸಂಜ್ಞೆಗಳನ್ನು ಮಾಡಿ ತೊಡುವಂತೆ ಮಾಡುತ್ತಿದ್ದ ಡೀಪ್ ನೆಕ್ ಹಾಗೂ ಸಣ್ಣ ತೋಳಿನ ಬಟ್ಟೆಗಳು… ಇವೆಲ್ಲಾ ಹೆಂಗಸರನ್ನು ಉನ್ಮಾದಗೊಳಿಸುತ್ತಿದ್ದವು.
ಮಧುರಾಣಿ ಬರೆಯುವ ‘ಮಠದಕೇರಿ ಕಥಾನಕ’

Read More

ಮದುವೆ, ಮಜಾ ಹಾಗೂ ಮೂವತ್ತು ದಾಟಿದ ಜವ್ವನಿಗರು

ಸಂತಿಯೇನೂ ತಾನು ಮದುವೆಯಾಗಲ್ಲ ಎಂದವನಲ್ಲ, ಆದರೆ ಕೇರಿಯೊಳಗೆ ಇನ್ನೇನು ನಾಳೆಯೋ ನಾಡಿದ್ದೋ ಬಿದ್ದು ಹೋಗುವುದೆಂಬಷ್ಟು ಹಳೆಯ ಮನೆಯೊಂದನ್ನು ಬಿಟ್ಟು ಯಾವುದೇ ಆಸ್ತಿಪಾಸ್ತಿ ಇಲ್ಲದ, ನೋಡಲು ತೊಳೆದ ಕೆಂಡದಂತೆ ಮುಟ್ಟಿದರೆ ಕೈಗೆ ಹತ್ತುವಷ್ಟು ಕಪ್ಪುಬಣ್ಣಕ್ಕಿದ್ದ. ಸಂತಿಗೆ ಸರಿಯಾದ ಕೆಲಸವೂ ಇರಲಿಲ್ಲವಲ್ಲಾ.. ಹೀಗೆ ಎಲ್ಲದರಲ್ಲೂ ನಪಾಸಾದ ಸಂತಿಯ ಕರ್ಮಕ್ಕೆ ಕಲಶವಿಟ್ಟಂತೆ ನಕ್ಕರೆ ಮುಂದಿದ್ದವರಿಗೆ ಚುಚ್ಚುವಷ್ಟು ಉಬ್ಬುಹಲ್ಲು ಬೇರೆ!
ಮಧುರಾಣಿ ಬರೆಯುವ ‘ಮಠದ ಕೇರಿ’ ಕಥಾನಕ

Read More

‘ಆಷಾಢ ಕಾವ್ಯೋತ್ಸವದಲ್ಲಿ’ ಮಧುರಾಣಿ ಬರೆದ ಕವಿತೆ: ರೂಪಾಂತರ

“ಇದೇ ಗಾಳಿಯಲ್ಲಿ, ಹೊಸ ಸಖಿಯೊಂದಿಗೆ
ತೂರಿ ಹೋದ ಅರೆ-ನೆರೆತ ಎಲೆಯಂತಹ ನಿನ್ನನ್ನು
ನನ್ನವನೆಂದೇ ಮಾರ್ಪಡಿಸುತ್ತದೆ.
ನಾನು ಒಪ್ಪದೇ
ನಿನ್ನಿಂದ ಬೇರ್ಪಡುವ ಧಾವಂತದಲ್ಲಿ, ಬಟ್ಟೆ ಕಳಚಿ
ಗಾಳಿಗೆ ಸಿಲುಕಿ, ಚರ್ಮ ಸಿಡಿಯಲೆಂದೇ
ಧಪಧಪನೆ ಓಡುತ್ತಾ…”- ‘ಆಷಾಢ ಕಾವ್ಯೋತ್ಸವದಲ್ಲಿ’ ಮಧುರಾಣಿ ಬರೆದ ಕವಿತೆ

Read More

ಮಡಿ, ಮೈಲಿಗೆ ಹಾಗೂ ಮೂರು ದಿನದ ನರಕ

ಮಾಮೂಲಿನಂತೆಯೇ ಅತಿಯಾಗಿರುತ್ತಿದ್ದ ಮಡಿ ಇನ್ನು ಹಬ್ಬದ ದಿನಗಳಲ್ಲಂತೂ ಕೇಳುವಂತಿರಲಿಲ್ಲ! ಕೋಳಿ ಕೂಗುವುದಕ್ಕೆ ಮುನ್ನವೇ ಅರೆಬೆತ್ತಲ ಒದ್ದೆ ಬಟ್ಟೆಯ ಸ್ನಾನ ಸಂಧ್ಯಾವಂದನೆಗಳು, ಇಳಿ ಮಧ್ಯಾಹ್ನದವರೆಗೂ ನಡೆಯುತ್ತಿದ್ದ ಸುದೀರ್ಘ ಪೂಜಾಕೈಂಕರ್ಯಗಳು, ಮಡಿಯುಟ್ಟು ಅಡುಗೆಮನೆ ಹೊಕ್ಕರೆ ಸತ್ತರೂ ಹೊರಗೆ ಬರಲಾರದೆ ಬೆವರಿನ ಮುದ್ದೆಯಾಗಿ ಚಡಪಡಿಸುತ್ತಿದ್ದ ಮನೆಯ ಹೆಂಗಸರು..”

Read More

ಜನಮತ

ಕಾಲಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ವಿಫಲಪ್ರೇಮಿಯ ತಪ್ಪೊಪ್ಪಿಗೆಗಳು: ರಹಮತ್ ತರೀಕೆರೆ

ವಿದ್ಯಾರ್ಥಿನಿಯರಲ್ಲಿ ಒಬ್ಬಾಕೆ ಕವಿತೆ ಬರೆಯುತ್ತಿದ್ದಳು. ಸರಳವಾದ ಪದದ ಅರ್ಥ-ಅದನ್ನು ತರಗತಿಯಲ್ಲೂ ಕೇಳಬಹುದಿತ್ತು- ಕೇಳಿಕೊಂಡು ಸ್ಟಾಫ್‌ರೂಮಿಗೆ ಬರುತ್ತಿದ್ದಳು. ಸಹೋದ್ಯೋಗಿಗಳು `ನೀನೇ ಹುಡುಗಿ ತರಹ ನಾಚ್ಕೊತೀ ಯಲ್ಲೋ’ ಎಂದು ಛೇಡಿಸುತ್ತಿದ್ದರು.…

Read More

ಬರಹ ಭಂಡಾರ