Advertisement

Tag: ಮೊಗಳ್ಳಿ ಗಣೇಶ್

ಬೆದೆಗೆ ಬಂದವಳ ಮೆದುವಾಗಿ ತಳ್ಳಿಬಿಟ್ಟಿದ್ದೆ

ಅವಳು ಬಿಗಿಯಾಗಿ ನನ್ನ ಕೈ ಹಿಡಿದೇ ಇದ್ದಳು. ವಿದಾಯದ ಗಳಿಗೆಯಲ್ಲಿ ಅಮರ ಪ್ರೇಮದ ಮೋಹವೇ…’ನಾಳೆ ಸಿಗುವೆ’ ಎಂದಿದ್ದೆ. ‘ನಿಜವಾಗ್ಲೂ… ನನ್ನ ತಲೆ ಮೇಲೆ ಕೈ ಇಟ್ಟು ಆಣೆ ಮಾಡಿ ಇನ್ನೊಂದ್ಸಲ ಹೇಳಿ’ ಎಂದು ಪ್ರತಿ ಉತ್ತರಕ್ಕೆ ಕಾದಳು. ಕೈ ಹಿಡಿದು ತಲೆ ಮೇಲೆ ಇಟ್ಟುಕೊಂಡಳು. ‘ನಾಳೆ ಅನ್ನೋದು ಕೂಡ ಒಂದು ಸುಳ್ಳು, ಅಂದಾಜು; ಕೇವಲ ನಿರೀಕ್ಷೆ…ಊಹೆ’ ಎಂದೆ.  ‘ಅಷ್ಟೆಲ್ಲ ಬೇಡ. ಸಿಕ್ತೀನಿ; ಸಿಗಲ್ಲಾ ಅನ್ನೊದ್ರಲ್ಲಿ ಯಾವ್ದಾದ್ರು ಒಂದನ್ನ ಹೇಳಿ ಏನೂ ಬೇಜಾರು ಮಾಡ್ಕೋದಿಲ್ಲ’ ಎಂದಳು. ನನ್ನ ಅನಂತ ಅಸ್ಪೃಶ್ಯ ಆಕಾಶ ಸರಣಿಯಲ್ಲಿ ಮೊಗಳ್ಳಿ ಗಣೇಶ್ ಬರಹ

Read More

ಯಾವ ಅಖಾಡಗಳಲ್ಲೂ ನಾನು ಗೆಲ್ಲಲಿಲ್ಲ

ಸುಮ್ಮನಿರಲಾರದ ನಾನು ಒಂದು ಚೇಷ್ಟೆ ಮಾಡಿದ್ದೆ. ಹುಡುಗಾಟಿಕೆಯೊ ಬರಹದ ಉತ್ಸಾಹವೊ; ಒಟ್ಟಿನಲ್ಲಿ ಹಾಸ್ಟೆಲಲ್ಲಿ ದೆವ್ವಗಳ ಕಾಟ ಎಂದು ವೆಂಕಟೇಶನ ಭೀತಿಯ ಬಗ್ಗೆ ಲೇಖನ ಬರೆದು ಬಿಟ್ಟಿದ್ದೆ. ಅದನ್ನು ಸಾಮಾನ್ಯರು ಓದಿದ್ದರೆ ಖಂಡಿತ ಹೆದರಿ ನಂಬಿಬಿಡುತ್ತಿದ್ದರು. ಆ ಪರಿಯಲ್ಲಿ ಹಾರಾರ್ ಆಗಿ ಬರೆದಿದ್ದೆ. ಕಲ್ಪನೆಯೇ ಹೆಚ್ಚಾಗಿತ್ತು. ಸುಮ್ಮನೆ ವೆಂಕಟೇಶನ ಜೊತೆ ‘ದೆವ್ವಗಳ ಕಾಟವಂತಲ್ಲಾ’ ಎಂದು ವಿಚಾರಿಸಿದ್ದೆ ಅಷ್ಟೇ. ಆತ ಒಂದಿಷ್ಟು ವಿವರ ಹೇಳಿದ್ದು ನಿಜ. ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿ.

Read More

ಮೂಡಿದ್ದವು ತರಾವರಿ ತಾರೆಗಳು

ಆ ರಾತ್ರಿ ನಾವು ದಲಿತ ಹುಡುಗರು ಪ್ರತಿಭಟನೆಯ ಭಾಗವಾಗಿ ಅಡುಗೆ ಮನೆಗೆ ಬೀಗ ಹಾಕಿದ್ದೆವು. ಹಾಗೇಯೇ ಅಂಬೇಡ್ಕರ್‌ಗೆ ಆದ ಅಪಮಾನದಿಂದ ನೊಂದು ಉಪವಾಸ ಆಚರಿಸುತ್ತೇವೆ ಎಂದು ಸ್ವಯಂ ದಂಡಿಸಿಕೊಂಡಿದ್ದೆವು. ಇಡೀ ಹಾಸ್ಟೆಲ್ ಬಿಕೊ ಎನ್ನುತ್ತಿತ್ತು. ನಾಲ್ವಡಿ ಅವರ ಕಾಲದ ತಳದ ಹಳೆಯ ಬಿಲ್ಡಿಂಗಿನಲ್ಲಿ ನಮಗೆ ರೂಮುಗಳು ಪ್ರತ್ಯೇಕವಾಗಿದ್ದವು. ಹೊಸ ಕಟ್ಟಡದಲ್ಲಿ ಅವರಿಗೇ ಮೊದಲು ಆದ್ಯತೆ ಇದ್ದದ್ದು. ಮೊಗಳ್ಳಿ ಗಣೇಶ್ ಬರೆಯುವ ಸರಣಿ.

Read More

ದಿಗಂತಕ್ಕೆ ಕಿಚ್ಚು ಹಚ್ಚಿದವರು ಯಾರೊ…

ಊರು ಬಾಬಾ ಎಂದು ಕರೆದರೂ ಭಾವನೆಗಳಿಗೆ ಬೀಗ ಹಾಕುತ್ತಿದ್ದೆ. ಕಲ್ಪಿಸಿಕೊಳ್ಳುವ ಊರೇ ಚೆಂದ. ಅಲ್ಲಿ ಆ ನರಕ ಇನ್ನೂ ಹಾಗೇ ಇತ್ತು. ದಿನದಿಂದ ದಿನಕ್ಕೆ ದ್ವಿಗುಣವಾಗುತ್ತಿತ್ತು. ಆ ನರಕದ ಇಂಚಿಂಚೂ ನನ್ನ ಕಣ್ಣಲ್ಲಿ ಆತ್ಮದಲ್ಲಿ ಯಾವತ್ತೂ ಫಲಿಸುತ್ತಲೇ ಇದ್ದವು. ಮರೆಯಲಾರೆ ಊರುಕೇರಿಯ; ಸತ್ತವರ ನೆರಳ…ಅಪ್ಪನ ಎರಡನೇ ಹೆಂಡತಿಯ ಹೆಸರದು ಮಾದೇವಿ. ಮಾದೇಶ್ವರ ಒಕ್ಕಲಿನ ಮನೆತನದವಳು.
ಮೊಗಳ್ಳಿ ಗಣೇಶ್‍ ಬರೆಯುವ ನನ್ನ ಅನಂತ ಅಸ್ಪೃಶ್ಯ ಆಕಾಶ ಸರಣಿಯ ಹದಿನೇಳನೆಯ ಕಂತು

Read More

ನೆತ್ತರ ಒಗಟುಗಳ ಬಿಡಿಸುವುದು ಕಷ್ಟ

ಆ ಹಂದಿಗಳಿಗೆ ತಿಂಗಳಿಗಾಗುವಷ್ಟು ಆಹಾರವನ್ನು ಅಪ್ಪ ಹಿತ್ತಿಲ ಸೌದೆ ಮನೆಯಲ್ಲಿ ತರಿಸಿಇಟ್ಟಿರುತ್ತಿದ್ದ. ಅಷ್ಟೇ ಅವನ ಕೆಲಸ. ಆಗಾಗ ನಾನೇ ಅವುಗಳ ಎಲ್ಲ ಕೆಲಸ ಮಾಡುತ್ತಿದ್ದುದು. ಅಪ್ಪ ಬಂದು ನೋಡಿದ ಕೂಡಲೆ ಗಕ್ಕನೆ ಎದ್ದು ಮೂಲೆ ಸೇರಿ ಭಯದಿಂದ ನೋಡುತ್ತಿದ್ದವು. ಯಾಕೆ ಇವು ನನ್ನಂತೆಯೇ ಬೆದರಿ ನನ್ನ ಬಳಿ ಬಂದು ಗಾಬರಿಯಾಗುತ್ತವಲ್ಲಾ… ಹೇಗೆ ಗೊತ್ತಾಯಿತು ಈ ಹಂದಿಗಳಿಗೆ ಅಪ್ಪನ ಅವತಾರಗಳು ಎಂದು ಅಚ್ಚರಿಯಾಗುತ್ತಿತ್ತು. ಮೊಗಳ್ಳಿ ಗಣೇಶ್‍ ಬರೆಯುವ  ನನ್ನ ಅನಂತ ಅಸ್ಪೃಶ್ಯ ಆಕಾಶ ಸರಣಿಯ ಹೊಸ ಕಂತು ನಿಮ್ಮ ಓದಿಗಾಗಿ. 

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ