ಸತೀಶ್ ಶೆಟ್ಟಿ ವಕ್ವಾಡಿ ಕಥಾಸಂಕಲನಕ್ಕೆ ವಿಕಾಸ್ ನೇಗಿಲೋಣಿ ಬರೆದ ಮುನ್ನುಡಿ
“ಕಥನಕ್ಕಾಗಿ ಇಲ್ಲಿ ಪಾತ್ರಗಳು ದುಡಿಯುವುದಿಲ್ಲ, ಪಾತ್ರಗಳೇ ವಿಶಿಷ್ಟ ರೀತಿಯಲ್ಲಿ ರೂಪುಗೊಂಡು ಒಂದು ಕತೆಯಾಗಿ ಹೊರ ಹೊಮ್ಮುತ್ತವೆ. ಕೊಜೆ ಯಾನೆ ಹೇಲು ಗೋವಿಂದಪ್ಪ- ಎಂಬ ಪಾತ್ರವನ್ನು ಆ ಪಾತ್ರದ ಹೆಸರಿನ ಹಿನ್ನೆಲೆಯಲ್ಲಿ ಕಟ್ಟುವ ಕ್ರಮ, ಅದೇ ಕತೆಯಲ್ಲಿ ಓಡಿ ಹೋದ ಬಸವ ವಾಪಾಸ್ ಪ್ರತ್ಯಕ್ಷವಾದಾಗ ಅವನನ್ನು ತೋರಿಸುವ ರೀತಿ ಇದಕ್ಕೆ ಅತ್ಯುತ್ತಮ ಉದಾಹರಣೆ. ಹಾಗೇ ಸುಮಂತ್- ಪ್ರಾಣೇಶ್ ಮಧ್ಯೆ ಕ್ರಿಕೆಟ್ ವಿಚಾರಕ್ಕೆ ಶುರುವಾದ ಜಗಳ ಪಡೆದುಕೊಳ್ಳುವ ತಿರುವು, ಪಾತ್ರ ಕಟ್ಟುವಿಕೆಗೆ ಬಹಳ ಒಳ್ಳೆಯ ಉದಾಹರಣೆ.”
ಸತೀಶ್ ಶೆಟ್ಟಿ ವಕ್ವಾಡಿ ಬರೆದ ‘ಅಜ್ಜ ನೆಟ್ಟ ಹಲಸಿನ ಮರ’ ಕಥಾಸಂಕಲನಕ್ಕೆ ವಿಕಾಸ್ ನೇಗಿಲೋಣಿ ಬರೆದ ಮುನ್ನುಡಿ