ಶೋಭಾ ನಾಯಕ ಅನುವಾದಿಸಿದ ಕವನ ಸಂಕಲನಕ್ಕೆ ಡಾ.ಪುರುಷೋತ್ತಮ ಬಿಳಿಮಲೆ ಬರೆದ ಮಾತುಗಳು
“ವರ್ತಮಾನ ಕಾಲದ ಭಾರತವು ಬಗೆ ಬಗೆಯ ಬಿಕ್ಕಟ್ಟುಗಳಿಂದ ನರಳುತ್ತಿದೆ. ದ್ವೇಷ, ನಿರಾಶೆ, ಸಿನಿಕತನ, ಕೋಮುವಾದ, ಜಾತೀಯತೆ, ಮತಾಂಧತೆ, ಹೋರಾಟ ಮತ್ತಿತರ ಸಮಸ್ಯೆಗಳ ನಡುವೆ ಭಾರತೀಯರು ನಲುಗಿ ಹೋಗುತ್ತಿದ್ದಾರೆ. ಇಂಥ ಸಂಕೀರ್ಣ ಪರಿಸ್ಥಿತಿಯಲ್ಲಿ ಗೋಬಿಂದ ಪ್ರಸಾದರ ಕವಿತೆಗಳು ಆಶಾವಾದ, ನಂಬುಗೆ, ಆಪ್ತತೆ ಮತ್ತು ಪ್ರೀತಿಯನ್ನು ಸೃಷ್ಟಿಸಲು ನೆರವಾಗುತ್ತವೆ. ನಮ್ಮನ್ನು ಆವರಿಸಿಕೊಂಡಿರುವ ಮಡಿ ಮತ್ತು ಮೈಲಿಗೆಗಳೆರಡನ್ನೂ ಕಳೆದು ಹಾಕಲು ಅವರ ಕವಿತೆಗಳು ತವಕಿಸುತ್ತವೆ.”
ಶೋಭಾ ನಾಯಕ ಅನುವಾದಿಸಿದ ಹಿಂದಿ ಕವಿ ಗೋಬಿಂದ ಪ್ರಸಾದರ ಆಯ್ದ ಪದ್ಯಗಳ ‘ವರ್ತಮಾನದ ಧೂಳುʼ ಸಂಕಲನಕ್ಕೆ ಡಾ.ಪುರುಷೋತ್ತಮ ಬಿಳಿಮಲೆ ಬರೆದ ಮಾತುಗಳು