ನಿಂಬೆಗಿಡಕ್ಕೇನು ಮನಸ್ಸಿದೆಯೇ?
ಆ ಭವ್ಯ ಮನೆಗೆ ಇಸ್ರೇಲಿನ ರಕ್ಷಣಾ ಮಂತ್ರಿಯ ಜೊತೆಗೆ ಅವನ ಹೆಂಡತಿ ಮೀರಾ ನವಾನ್ ಮತ್ತು ಅವನ ಅಧಿಕಾರಿ ವರ್ಗದಲ್ಲಿ, ರಕ್ಷಣಾ ಮಂತ್ರಿಯಲ್ಲಿ ಅನುರಾಗದಲೆಗಳನ್ನು ಹುಟ್ಟಿಸುವ ಸುಂದರಿಯೊಬ್ಬಳು ಇರುತ್ತಾಳೆ. ಜೊತೆಗೆ ಹತ್ತಾರು ಜನ ಸಹಾಯಕ ವರ್ಗದವರು. ನೋಡನೋಡುತ್ತಿದ್ದಂತೆ ತಾನು ಅತ್ತಿತ್ತ ಓಡಾಡಿ ಇಟ್ಟಿದ್ದ ಹೆಜ್ಜೆಗಳ ಮೇಲೆ ಬೇರೆ ಬೇರೆ ಹೆಜ್ಜೆಗಳು ಕಾಣುತ್ತವೆ. ಜೊತೆಗೆ ಅಷ್ಟುದ್ದಕ್ಕೂ ಬೇಲಿ ಹಬ್ಬಲು ಪ್ರಾರಂಭವಾಗುತ್ತದೆ. ಇಸ್ರೇಲಿನ ಸೀಕ್ರೆಟ್ ಪೊಲೀಸ್‌ನವರು ರಕ್ಷಣಾ ಮಂತ್ರಿಯ ಹಿತ ದೃಷ್ಟಿಯಿಂದ ಮತ್ತು ಉಗ್ರರ ಆಕ್ರಮಣದ ಸಂಭಾವ್ಯದ ಕಾರಣ ಇಡೀ ನಿಂಬೆ ಗಿಡದ ತೋಟವನ್ನು ಕಡಿಯಬೇಕೆಂದು ಯೋಚಿಸುತ್ತಾರೆ.
Read More