ಆನೆಗಳ ಮನೋಲೋಕವನ್ನು ಸೆರೆಹಿಡಿಯುವ ವಿಸ್ಮಯಗಳು
ಈ ಕೃತಿಯಲ್ಲಿ’ರಾಜನ ಸಿಟ್ಟಿಗೆ ಪಟ್ಟದಾನೆಗಳು ಬಲಿ’ ಎಂಬ ಬರಹವಂತೂ ನನ್ನನ್ನು ಸೂಜಿಗಲ್ಲಿನಂತೆ ಹಿಡಿದಿಟ್ಟಿತು. ಪಾಕಿಸ್ತಾನದ ಮೃಗಾಲಯವೊಂದರಲ್ಲಿದ್ದ ಆನೆಯನ್ನು ಆನ್ಲೈನ್ ಅಭಿಯಾನ ಮಾಡಿ ಬಿಡಿಸಿದ್ದು, ನಂತರ ಬಿಡುಗಡೆಗೊಂಡ ಕಾವಾನನ್ ಅನ್ನುವ ಆನೆ ಕಾಂಬೋಡಿಯಾದ ಆನೆಗಳ ಜೊತೆಗೆ ಸೊಂಡಿಲು ತಾಗಿಸಿ ಹರ್ಷ ವ್ಯಕ್ತಪಡಿಸಿದ್ದು ಇವೆಲ್ಲವೂ ಭಾವುಕ ಆನೆಗಳ ಮನೋಲೋಕವನ್ನೆ ಪರಿಚಯಿಸುತ್ತವೆ. ಆನೆಗಳೇ ಮನುಷ್ಯರನ್ನು ಹೆಚ್ಚಾಗಿ ಹಚ್ಚಿಕೊಳ್ಳುತ್ತವೆ.
ಐತಿಚಂಡ ರಮೇಶ್ ಉತ್ತಪ್ಪರ ‘ಆನೆ ಲೋಕದ ವಿಸ್ಮಯ’ ಕೃತಿಯ ಕುರಿತು ಸುಮಾವೀಣಾ ಬರಹ